ಸಕಲೇಶಪುರ : ಹೈಟೆಕ್ ಅಂಬುಲೆನ್ಸ್ ಉದ್ಘಾಟಿಸಿದ ಶಾಸಕ ಸಿಮೆಂಟ್ ಮಂಜು.
ಎಸ್.ಆರ್.ಎ ಗ್ರೂಪ್ ನಿಂದ ವೆಂಟಿಲೇಟರ್ ಆಂಬುಲೆನ್ಸ್ ಸೇವೆಗೆ ಸಿದ್ದ.
ಸಕಲೇಶಪುರ : ಸಕಲೇಶಪುರ ತಾಲೂಕಿನ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ಹೈಟೆಕ್ ಅಂಬುಲೆನ್ಸ್ ಸೇವೆಗೆ ಶಾಸಕ ಸಿಮೆಂಟ್ ಮಂಜು ಚಾಲನೆ ನೀಡಿದರು.
ಭಾನುವಾರ ತಾಲೂಕು ಕ್ರಾಫರ್ಡ್ ಆಸ್ಪತ್ರೆ ಮುಂಭಾಗ ಆನಂದ್ ಅಪ್ಪಯ್ಯ ಮಾಲೀಕತ್ವದ ಎಸ್.ಆರ್.ಎ ಗ್ರೂಪ್ ನಾ ಆಧುನಿಕ ವೈದ್ಯಕೀಯ ಸೌಲಭ್ಯ ಹೊಂದಿರುವ ತುರ್ತು ಚಿಕಿತ್ಸಾ ವಾಹನ ಚಾಲನೆ ಮಾಡುವುದರ ಮುಖಾಂತರ ಉದ್ಘಾಟಿಸಿದರು.
ತಾಲೂಕು ಆಸ್ಪತ್ರೆಯಲ್ಲಿರುವ ಸರ್ಕಾರಿ ಹಾಗೂ ಖಾಸಗಿ ತುರ್ತು ಚಿಕಿತ್ಸಾ ವಾಹನಗಳಲ್ಲಿ ಇದುವರೆಗೂ ವೆಂಟಿಲೇಟರ್ ಹಾಗೂ ಪಿಜರ್ ಸೌಲಭ್ಯವಿರಲಿಲ್ಲ ಇದೇ ಮೊಟ್ಟ ಮೊದಲ ಬಾರಿಗೆ ಸಾರ್ವಜನಿಕರ ಸೌಲಭ್ಯಕ್ಕಾಗಿ ಆನಂದ್ ಅಪ್ಪಯ್ಯನವರು ಅತ್ಯಾಧುನಿಕ ಸೌಲಭ್ಯ ಹೊಂದಿರುವ ಆಂಬುಲೆನ್ಸ್ ಸೇವೆಗೆ ಮುನ್ನುಡಿ ಬರೆದಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿ ವೆಂಟಿಲೇಟರ್ ಸೌಲಭ್ಯ ಅವಶ್ಯಕತೆ ಇರುವ ರೋಗಿಗಳಿಗೆ ಈ ವಾಹನ ಬಳಕೆಯಾಗಲಿದ್ದು ರೋಗಿಗಳು ಈ ತುರ್ತು ಚಿಕಿತ್ಸೆ ವಾಹನದ ಸೌಲಭ್ಯ ಪಡೆದುಕೊಳ್ಳುವಂತೆ ಶಾಸಕ ಸಿಮೆಂಟ್ ಮಂಜು ಹೇಳಿದರು. ಈ ಸಂದರ್ಭದಲ್ಲಿ ಆಂಬುಲೆನ್ಸ್ ಮಾಲೀಕ ಆನಂದ್ ಅಪ್ಪಯ್ಯ ಮಾತನಾಡಿ, ದೂರದ ಬೆಂಗಳೂರು ಹಾಗೂ ಮಂಗಳೂರಿಗೆ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ವೆಂಟಿಲೇಟರ್ ವಾಹನವಿಲ್ಲದೆ ರೋಗಿಗಳು ಪರದಾಡುತ್ತಿದ್ದು ನನ್ನ ಗಮನಕ್ಕೆ ಬಂದಿದ್ದು ಈ ಹಿನ್ನಲೆಯಲ್ಲಿ ರೋಗಿಗಳ ಪ್ರಾಣ ಉಳಿಸಲು ಆಧುನಿಕ ಸೌಲಭ್ಯದ ತುರ್ತು ಚಿಕಿತ್ಸೆ ವಾಹನವನ್ನು ಲೋಕಾರ್ಪಣೆ ಗೊಳಿಸಿದ್ದೇವೆ ಎಂದರು.