ಪ್ರೇಮ್ ನಗರ ತಡೆಗೋಡೆ ಕುಸಿತ ಪ್ರಕರಣ : ಪುರಸಭೆ ಮತ್ತು ಕೊಳಚೆ ನಿರ್ಮೂಲನ ಮಂಡಳಿ ನೇರ ಹೊಣೆ.
ಸಕಲೇಶಪುರ :- ಕಳಪೆ ಕಾಮಗಾರಿಯಿಂದ ಪಟ್ಟಣದ ಪ್ರೇಮ್ ನಗರದಲ್ಲಿ ನೂತನವಾಗಿ ನಿರ್ಮಿಸಿದ್ದ ತಡೆಗೋಡೆ ಕುಸಿತ ಪ್ರದೇಶಕ್ಕೆ ಶಾಸಕ ಎಚ್.ಕೆ ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಡೆಗೋಡೆ ನಿರ್ಮಾಣದ ವೇಳೆ ಸರಿಯಾದ ತಳಪಾಯ ನಿರ್ಮಾಣ ಮಾಡದೆ ಗೋಡೆ ಕಟ್ಟಿದ್ದರಿಂದ ಕುಸಿತ ಉಂಟಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪುರಸಭೆ ಹಾಗೂ ಕೊಳಚೆ ನಿರ್ಮೂಲನ ಮಂಡಳಿಯವರೇ ನೇರವಾಗಿದ್ದು ಸೂಕ್ತವಾದ ತನಿಖೆ ನಡೆಸಿ ಸಂಬಂಧಪಟ್ಟವರ ಮೇಲೆ ಕ್ರಮ ತೆಗೆದುಕೊಳ್ಳಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷ ಕಾಡಪ್ಪ ಪುರಸಭಾ ಮುಖ್ಯ ಅಧಿಕಾರಿ ಮಂಜುನಾಥ್ ಸದಸ್ಯರಾದ ಮುಕೇಶ್ ಶೆಟ್ಟಿ, ಸೇರಿದಂತೆ ಮುಂತಾದವರು ಇದ್ದರು.