ಮೆಣಸಮಕ್ಕಿಯಲ್ಲಿ ಅದ್ದೂರಿಯಾಗಿ ಜರುಗಿದ ಬೀರಲಿಂಗೇಶ್ವರ ಪೂಜಾ ಕಾರ್ಯಕ್ರಮ.
ಸಕಲೇಶಪುರ:- ತಾಲೂಕಿನ ಬೆಳಗೋಡು ಹೋಬಳಿಯ ಮೆಣಸಮಕ್ಕಿ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ದ ಬೀರಲಿಂಗೇಶ್ವರ ಸ್ವಾಮಿಯ ವರ್ಷದ ಪೂಜಾ ಕಾರ್ಯಕ್ರಮ ಯಶಸ್ವಿಯಾಗಿ ಬುಧುವಾರ ನಡೆಯಿತು.
ದೀಪವಾಳಿ ಹಬ್ಬದ ಬಲಿಪಾಡ್ಯಮಿ ದಿನದಂದು ಗ್ರಾಮಸ್ಥರೆಲ್ಲ ಸೇರಿ ನೂರಾರು ವರ್ಷಗಳ ಆರಾದ್ಯ ದೈವ ಬೀರಲೀಗೇಶ್ವರ ಸ್ವಾಮಿ ಪೂಜಾ ಕಾರ್ಯಗಳನ್ನು ನೆರವೇರಿಸಿದರು.
ಇಲ್ಲಿ ಬೀರಲಿಂಗೇಶ್ವರ ಸ್ವಾಮಿಯ ಕಲ್ಲಿನ ಮೂರ್ತಿಯಾಗಿದ್ದು ಈ ದೇವರಿಗೆ ಯಾವುದೇ ಗೋಪುರ ಮಂಟಪಗಳಿಲ್ಲ ವಿಶೇಷವೆಂದರೆ ದೀಪವಾಳಿ ವೇಳೆ ಒಮ್ಮೆ ಮಾತ್ರ ಈ ದೇವರಿಗೆ ಪೂಜೆ ನಡೆಸಲಾಗುತ್ತದೆ ಇನ್ನು ಈ ದೇವರ ಪೂಜಾ ಕಾರ್ಯಕ್ರಮಕ್ಕೆ ಒಂದು ವರ್ಷ ಕಾಯಬೇಕು.
ಗ್ರಾಮಸ್ಥರು ಭಕ್ತಿಪೂರ್ವಕರಾಗಿ ಒಂದೆಡೆ ಸೇರಿ ನೂರಾರು ಹಿಡುಗಾಯಿ ಹೊಡೆಯುವ ನೋಡುವುದೆ ಅಕರ್ಷಣೆಯಾಗಿರುತ್ತದೆ.
ಗ್ರಾಮದ ಪಟೇಲ ವಂಶಸ್ಥರು ಇಂದು ಊರಿನ ಎಲ್ಲರಿಗೂ ಹಬ್ಬದ ಊಟ ಹಾಕಿಸುವುದು ತಲಾಂತರದಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ.
ಈ ಗ್ರಾಮದ ಬೀರಲಿಂಗೇಶ್ವರ ಸ್ವಾಮಿಯ ಪಕ್ಕದಲ್ಲಿದ್ದ ಸುಮಾರು 400 ವರ್ಷಗಳ ಹಳೆಯದಾದ ಮರವೊಂದು ಈ ಬಾರಿಯ ಮಳೆಗಾಲದ ಗಾಳಿಗೆ ಮರದ ಒಂದು ಭಾಗ ಮುರಿದು ಬಿದ್ದಿತ್ತು.