ಸಕಲೇಶಪುರ : ತಾಲ್ಲೂಕಿನ ವ್ಯಾಪ್ತಿ ಯಲ್ಲಿ ವಿವಿದ ಪ್ರದೇಶದಲ್ಲಿ ಅಕ್ರಮ ಬೀಟೆ ಮತ್ತು ನಾಟ ಸಾಗಾಟ ಮಾಡುತ್ತಿದ್ದ ವೇಳೆ ಅರಣ್ಯ ಸಿಬ್ಬಂದಿಗಳು ಮಿಂಚಿನ ಕಾರ್ಯಾ ಚರಣೆ ನಡೆಸಿ ವಾಹನ ಸಮೇತ ಮಾಲು ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
ತಾಲ್ಲೂಕಿನ ಬಾಳ್ಳುಪೇಟೆ ಗ್ರಾಮದ ಕರ್ನಾಟಕ ಹೋಟೆಲ್ ಮುಂಬಾಗ ಬೀಟೆ ನಾಟಗಳನ್ನು ತುಂಬಿಸಿಕೊಂಡು ಅಕ್ರಮವಾಗಿ ಸಾಗಾಟ ಮಾಡಲು ಬಿಳಿ ಬಣ್ಣದ ವಾಹನ ನಿಲ್ಲಿಸಿರುವುದು ಕಂಡು ಅನುಮಾನಗೊಂಡ ಅರಣ್ಯ ಸಿಬ್ಬಂದಿ ಬುಲೆರೊ ವಾಹನ ತಡೆದು ಪರಿಶೀಲಿಸಿದಾಗ ಸುಮಾರು ಹತ್ತು ಸೇಪ್ಟಿ ಹಲಗೆ ಕಟ್ ಸೈಜ್ ಸಾಗಿಸಲು ಯತ್ನಿಸಿದರು ಈ ವೇಳೆ ಬೀಟೆ ನಾಗ ಮತ್ತು ದೊಡ್ಡನಾಗರ ಅಮೀರನನ್ನು ವಿಚಾರಿಸಿದ ಸಂದರ್ಭದಲ್ಲಿ ರಹದಾರಿಯನ್ನು ಇಲ್ಲವೆಂದು ನಿರಾಕರಿಸಿ ವಾಹನ ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ
ಇನ್ನೊಂದು ಘಟನೆಯಲ್ಲಿ ಗ್ರಾಮದ ಹೆಬ್ಬಸಾಲೆ ಸಮೀಪ ಬುಲೆರೊ ಪಿಕ್ ಅಪ್ ವಾಹನದಲ್ಲಿ ಬಿಲ್ಲೆಟ್ಸ್ ನಾಟಗಳನ್ನು ಸಾಗಿಸುತ್ತಿದ್ದಾರೆಂದು ಖಚಿತ ಮಾಹಿತಿಯ ಮೇರೆಗೆ ಸ್ಥಳಕ್ಕೆ ತೆರಳಿದಾಗ ವಾಹನ ಬಿಟ್ಟು ಅರೋಪಿಗಳು ಪರಾರಿಯಾಗಿದ್ದಾರೆ.
ಮೇಲ್ಕಂಡ ಎರಡು ಘಟನೆಗಳಲ್ಲಿ ಅಕ್ರಮ ದಸ್ತಾನು ಮತ್ತು ಅರಣ್ಯ ಕಾಯ್ದೆ 1963, ಕಾಲಂ 71 a ಮತ್ತು ಇತರೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಸ್ವತ್ತನ್ನು ವಶ ಪಡಿಸಿಕೊಂಡಿದ್ದಾರೆ
ಈ ಸಂದರ್ಭದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿಲ್ಪರವರ ನೇತೃತ್ವದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಮಾರ್ಗದರ್ಶನದಲ್ಲಿ ದಾಳಿ ನಡೆಯಿತು.ಈ ಸಂದರ್ಭದಲ್ಲಿ ಸಹಾಯಕ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಮೋಹನ್, ಗಸ್ತು ಪಾಲಕ ಯೋಗೇಶ್, ವಾಹನ ಚಾಲಕ ಧರ್ಮ ಇದ್ದರು