ಸಕಲೇಶಪುರ : ಸದನದಲ್ಲಿ NPS ನೌಕರರ ಪರವಾಗಿ ಧ್ವನಿಯಾಗುವಂತೆ ಶಾಸಕ ಸಿಮೆಂಟ್ ಮಂಜುಗೆ ಮನವಿ
ಸಕಲೇಶಪುರ : ಮುಂಬರುವ ವಿಧಾನ ಮಂಡಲದ ಅಧಿವೇಶನದಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ರದ್ದು ಪಡಿಸಿ ನಿಶ್ಚಿತ ಪಿಂಚಣಿ ಯೋಜನೆ ಜಾರಿಗೊಳಿಸಲು ಸದನದಲ್ಲಿ ಒತ್ತಾಯಿಸುವಂತೆ ರಾಜ್ಯ ಸರ್ಕಾರಿ ನೌಕರರ ತಾಲೂಕು ಘಟಕ ಶಾಸಕ ಸಿಮೆಂಟ್ ಮಂಜುಗೆ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ರಾಜ್ಯ ಸರ್ಕಾರಿ ನೌಕರರ ತಾಲೂಕು ಘಟಕದ ಪದಾಧಿಕಾರಿಗಳು, ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘವು ದಿನಾಂಕ 01-04-2006 ರಿಂದ ಸರ್ಕಾರಿ ಸೇವೆಗೆ ಸೇರಿರುವ ಸುಮಾರು 2.5 ಲಕ್ಷ ಸರ್ಕಾರಿ ನೌಕರರನ್ನು ಪ್ರತಿನಿಧಿಸುತ್ತಿದ್ದು, NPS ಯೋಜನೆಗೆ ಒಳಪಡುವ ನೌಕರರ ಸಂಧ್ಯಾಕಾಲದ ಬದುಕಿಗೆ ಹಾಗೂ ಅಕಾಲಿಕ ಮರಣ ಹೊಂದಿರುವ ನೌಕರರ ಅವಲಂಭಿತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.
ರಾಜ್ಯ ಸರ್ಕಾರಿ ನೌಕರರಿಗೆ ದಿನಾಂಕ: 01-04-2006 ರಿಂದ ಜಾರಿಗೆ ತಂದಿರುವ NPS ಯೋಜನೆಯನ್ನು ರದ್ದುಗೊಳಿಸಿ 2006ರ ಹಿಂದೆ ಇದ್ದಂತೆ ನಿಶ್ಚಿತ ಪಿಂಚಣಿ ಯೋಜನೆಯನ್ನು ಎಲ್ಲಾ ಸರ್ಕಾರಿ ನೌಕರರಿಗೆ, ಸ್ವಾಯತ್ತ ಸಂಸ್ಥೆಗಳ ಹಾಗೂ ಅನುದಾನಿತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಜಾರಿಗೆ ತರುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಫ್ರೀಡಂ ಪಾರ್ಕಿನಲ್ಲಿ ಹಮ್ಮಿಕೊಂಡಿದ್ದ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿ ಅಂದಿನ ವಿರೋಧ ಪಕ್ಷದ ನಾಯಕರಾಗಿದ್ದಂತಹ ಇಂದಿನ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಹಾಗೂ ಉಪ ಮುಖ್ಯಮಂತ್ರಿಗಳು,ಕೆ.ಪಿ.ಸಿ.ಸಿ ಅಧ್ಯಕ್ಷರಾಗಿರುವ ಶ್ರೀಯುತ ಡಿ.ಕೆ. ಶಿವಕುಮಾರ್‌ರವರು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ NPS ಯೋಜನೆಯನ್ನು ರದ್ದುಗೊಳಿಸಿ ನಿಶ್ಚಿತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿ, ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿಯೂ ವಾಗ್ದಾನ ನೀಡಿದ್ದರು, ಆದರೆ ಪ್ರಸ್ತುತ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದ್ದು ಶ್ರೀಯುತ ಸಿದ್ದರಾಮಯ್ಯನವರೆ ಮುಖ್ಯಮಂತ್ರಿಗಳಾಗಿರುತ್ತಾರೆ ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳು ನೀಡಿರುವ ವಾಗ್ದಾನದಂತೆ ಹಾಗೂ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ NPS ಯೋಜನೆಯನ್ನು ರದ್ದುಗೊಳಿಸಿ ರಾಜ್ಯದ 2.5 ಲಕ್ಷ ನೌಕರರಿಗೆ ನಿಶ್ಚಿತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕಾಗಿ ಇದೇ ತಿಂಗಳ ಜುಲೈ 16 ರಿಂದ ಆರಂಭವಾಗುತ್ತಿರುವ ಮಳೆಗಾಲದ ಅಧಿವೇಶನದಲ್ಲಿ ರಾಜ್ಯ ಸರ್ಕಾರವನ್ನು ಹಾಗೂ ಮುಖ್ಯ ಮಂತ್ರಿಗಳನ್ನು ಒತ್ತಾಯಿಸಬೇಕಾಗಿ ತಾಲ್ಲೂಕಿನ ಸಮಸ್ತ NPS ನೌಕರರ ಪರವಾಗಿ ಶಾಸಕರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ನೌಕರರ ಸಂಘದ ಅಧ್ಯಕ್ಷರಾದ ಕೃಷ್ಣಮೂರ್ತಿ, NPS ನೌಕರರ ಸಂಘದ ಅಧ್ಯಕ್ಷರಾದ ದೊರೇಶ ಎಂ ಎಸ್, ಉಪಾದ್ಯಕ್ಷರಾದ ಬಸವಾರಾಜ್, ಮಾಜಿ ಅದ್ಯಕ್ಷರಾದ ಸತೀಶ್ ಹೆಚ್ ಕೆ,ಕಾರ್ಯದರ್ಶಿ ಗಿರೀಶ್,ಶಿಕ್ಷಕರ ಸಂಘದ ಅಧ್ಯಕ್ಷೆ ರೇಣುಕಾ ಬಿ ಆರ್, ಮಾಜಿ ಅಧ್ಯಕ್ಷರಾದ ಮೋಹನ್,ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಆನಂದ್,ದೇವರಾಜ್, ರಂಗಸ್ವಾಮಿ,ನೌಕರರ ಸಂಘದ ಸುನಿಲ್, ಸಹಾಯಕ ನಿರ್ದೇಶಕರಾದ ಆದಿತ್ಯ,ಪದಾಧಿಕಾರಿಗಳಾದ ಯೋಗೇಶ್, ರಾಜು, ಮಮತಾ ಹೆಚ್ ಜೆ ಹಾಜರಿದ್ದರು