ಸಕಲೇಶಪುರ:-ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ತಾಲೂಕು ಅಧ್ಯಕ್ಷ ಜಾನೇಕೆರೆ ಸಾಗರರವರ ಮೇಲೆ ಅಪ್ರಚಾರ ಹಾಗೂ ಜೀವ ಬೆದರಿಕೆ ಹಾಕಿದವರನ್ನು ಕೂಡಲೇ ಬಂಧಿಸಬೇಕು ಎಂದು ಕಾರ್ಯಕರ್ತರು ಅಗ್ರಹಿಸಿದ ಘಟನೆ ನಡೆದಿದೆ.
ಶುಕ್ರವಾರ ಸಾರ್ವಜನಿಕರು ಹಾಗೂ ಸಂಘಟನೆಯ ಕಾರ್ಯಕರ್ತರು ಡಿ.ವೈ.ಎಸ್.ಪಿ ಹಾಗೂ ನಗರ ಠಾಣಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಸಾಗರ್ ರವರ ಮೇಲೆ ಮಂಜುನಾಥ್ ಅಲಿಯಾಸ್ ಮಚ್ಚೆ ಮಂಜ ಎಂಬ ವ್ಯಕ್ತಿಯು ಅಕ್ರಮ ಚಟುವಟಿಗೆ,ಅಕ್ರಮ ಮರಳುಗಾರಿಗೆಯಲ್ಲಿ ತೊಡಗಿದ್ದು ಸಂಘಟನೆಯ ತಾಲೂಕು ಅಧ್ಯಕ್ಷರಿಗೆ ಬೆದರಿಕೆ ಹಾಕಿದ್ದಾರೆ ಆದ್ದರಿಂದ ಕೂಡಲೇ ಆತನನ್ನು ಬಂಧಿಸುವಂತೆ ಪೋಲಿಸ್ ಅಧಿಕಾರಿಗಳಿಗೆ ಮನವಿ ಮಾಡಿದರು.
ಮಚ್ಚೆ ಮಂಜು ಎಂಬ ವ್ಯಕ್ತಿಯ ಮೇಲೆ ಈಗಾಗಲೇ ಹಲವಾರು ಪ್ರಕರಣ ಇದ್ದು 307 ನಂತ ಕೇಸ್ ಗಳಿವೆ ಈ ಹಿಂದೆ ಕೋವಿಯಿಂದ ಗುಂಡು ಹಾರಿಸಿ ಆ ವೀಡಿಯೋವನ್ನು ಸಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ನಾವು ಗುಂಡು ಹೊಡೆಯುವವರು ಎಂಬುದಾಗಿ ಹೇಳಿಕೆ ನೀಡಿ ಈ ವ್ಯಕ್ತಿ ಸಮಾಜದಲ್ಲಿ ಉಧಟತನ ಮೆರೆದು ಸಮಾಜದಲ್ಲಿ ಭೀತಿಯ ವಾತಾವರಣ ನಿರ್ಮಾಣ ಮಾಡಿದ್ದ ಮತ್ತು ಜಾತಿಗಳ ನಡುವ ವಿಷಬೀಜ ಬಿತ್ತಿ ಕೋಮು ಗಲಭೆಗೆ ನೇರ ಹೊಣೆ ಆಗಿರುತ್ತಾನೆ ಎಂದು ಆರೋಪಿಸಿದ್ದಾರೆ ರೌಡಿ ಪ್ರವೃತ್ತಿಯಿಂದ ಸಮಾಜದಲ್ಲಿ ಶಾಂತಿ ಕೆಡಿಸುತ್ತಿರುವ ಈತನನ್ನು ಕೂಡಲೇ ಬಂಧಿಸಬೇಕಾಗಿ ಒತ್ತಾಯಿಸಿದರು.