Sunday, November 24, 2024
Homeಸುದ್ದಿಗಳುಸತೀಶ್ ಜಾರಕಿಹೊಳೆ ಕೂಡಲೆ ಹಿಂದೂಗಳ ಕ್ಷಮೆ ಕೋರಬೇಕು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಸತೀಶ್ ಜಾರಕಿಹೊಳೆ ಕೂಡಲೆ ಹಿಂದೂಗಳ ಕ್ಷಮೆ ಕೋರಬೇಕು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಸಕಲೇಶಪುರ: ಸತೀಶ್ ಜಾರಕಿಹೊಳೆ ಹಿಂದೂಗಳ ವಿರುದ್ದ ಕಾಂಗ್ರೆಸ್ನ ಮಾನಸಿಕತೆಯಂತೆ ಮಾತನಾಡಿದ್ದಾರೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

   ತಾಲೂಕಿನ ಕುಂಬ್ರಹಳ್ಳಿ ಗ್ರಾಮದಲ್ಲಿ ಮಂಗಳವಾರ ನಿಧನರಾದ ಬಿಜೆಪಿ ಮುಖಂಡೆ ಸುಶೀಲಾ ಶಿವಪ್ಪನವರ ಅಂತಿಮ ದರ್ಶನ ಪಡೆದ ನಂತರ ಸುದ್ದಿಗಾರರು ಸತೀಶ್ ಜಾರಕಿಹೊಳೆರವರ ಹಿಂದೂ ಪದದ ಕುರಿತು ಅಭಿಪ್ರಾಯ ಕೇಳಿದ ನಂತರ ಮಾತನಾಡಿ ಸತೀಶ್ ಜಾರಕಿಹೊಳೆ ಹಿಂದೂ ಪದ ಇಲ್ಲ,  ಹಿಂದೂ ಪದ ಅಸಹ್ಯ ಆಗುತ್ತದೆ ಎಂದು ಹೇಳಿರುವುದು ಖಂಡನೀಯ, ಚುನಾವಣೆ ಬಂದಾಗ ಹಿಂದೂ ಧರ್ಮ ಹಾಗೂ ಹಿಂದೂಗಳ ವಿರುದ್ದ ಮಾತನಾಡಿ ಗಲಭೆ ಎದ್ದೇಳಿಸಲು ತಂತ್ರ ಮಾಡಿದ್ದಾರೆ. ಭಾರತ ದೇಶದಲ್ಲಿ ಅಸ್ತಿಕತೆಗೂ ಹಾಗೂ ನಾಸ್ತಿಕತೆಗೆ ಗೌರವ ಇದೆ. ಆದರೆ ಅವರು ಮುಸ್ಲಿಂರನ್ನು ಓಲೈಕೆ ಮಾಡಲು ಕೆಟ್ಟ ಮಾನಸಿಕತೆ ತೋರಿದ್ದಾರೆ.ಕಾಂಗ್ರೆಸ್ ನ ಮಾನಸಿಕತೆಯಿಂದ ದೇಶದಲ್ಲಿ ಭಯೋತ್ಪಾದಕರು ಹುಟ್ಟುತ್ತಿದ್ದಾರೆ.  ಪ್ರಧಾನಿ ನರೇಂದ್ರ ಮೋದಿರವರು ಮುಂಬರುವ ಚುನಾವಣೆ ಕುರಿತು ಯೋಚಿಸದೆ 100 ನೇ ವರ್ಷದ ಸ್ವಾತಂತ್ರ್ಯ ಉತ್ಸವದ ಸಂಧರ್ಭದಲ್ಲಿ ದೇಶ ಮುಂದುವರೆದ ರಾಷ್ಟ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರಬೇಕು ಎಂದು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಯಾವದೆ ಬಡತನ ತೊಲಗಿಸುವ ಯೋಜನೆ ರೂಪಿಸಿಲ್ಲ,  ಸಿದ್ದಾರಾಮಯ್ಯ ಟಿಪ್ಪು ಜಯಂತಿ, ಲಿಂಗಾಯಿತ ವೀರಶೈವ  ಪ್ರತ್ಯೇಕ ಧರ್ಮ, ಹಿಂದೂಳಿದ ವರ್ಗ ಮಕ್ಕಳಿಗೆ ಪ್ರವಾಸ, ಭಯೋತ್ಪಾದಕರನ್ನು ಜೈಲಿಂದ ಬಿಡುಗಡೆಯಂತಹ ಕೆಲಸ ಮಾಡಿ ಗೊಂದಲ ಸೃಷ್ಟಿಸಿದರು. ಅವರ ಅಧಿಕಾರದ ಅವಧಿಯಲ್ಲಿ  ಜಾತಿ ಧರ್ಮಗಳ ನಡುವೆ ಎತ್ತಿ ಕೊಡುವ ಕೆಲಸ ಮಾಡಲಾಯಿತು. ಶಾದಿ ಭಾಗ್ಯ ಹೆಸರಿನಲ್ಲಿ ಕೇವಲ ಒಂದು ಸಮುದಾಯಕ್ಕೆ ಯೋಜನೆ ನೀಡಲಾಯಿತು. ಆದರೆ ಬಿಜೆಪಿ ಎಂದಿಗೂ ಒಂದು ಧರ್ಮ ಜಾತಿಯನ್ನು ಮನದಲ್ಲಿಟ್ಟುಕೊಂಡು ಕೆಲಸ ಮಾಡಿಲ್ಲ, ಭಾಗ್ಯಲಕ್ಷ್ಮೀ, ಕಿಸಾನ್ ಸಮ್ಮಾನ್ ನಂತಹ ಯೋಜನೆಗಳನ್ನು ದೇಶದಲ್ಲಿ ಎಲ್ಲಾರಿಗೂ ನೀಡಿದೆ.  ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಅಧಿಕಾರ ಹಿಡಿಯುವುದು ಕನಸು ಎಂದರು.

RELATED ARTICLES
- Advertisment -spot_img

Most Popular