Sunday, November 24, 2024
Homeಸುದ್ದಿಗಳುಸಕಲೇಶಪುರಸಕಲೇಶಪುರ ; ಒಲಂಪಸ್ ಶಾಲೆಯ ವಿದ್ಯಾರ್ಥಿಗಳಿಂದ ವಿಶಿಷ್ಟವಾಗಿ ಮಕ್ಕಳ ದಿನ ಆಚರಣೆ

ಸಕಲೇಶಪುರ ; ಒಲಂಪಸ್ ಶಾಲೆಯ ವಿದ್ಯಾರ್ಥಿಗಳಿಂದ ವಿಶಿಷ್ಟವಾಗಿ ಮಕ್ಕಳ ದಿನ ಆಚರಣೆ

ಸಕಲೇಶಪುರ :  ಒಲಂಪಸ್ ಶಾಲೆಯ ವಿದ್ಯಾರ್ಥಿಗಳಿಂದ ವಿಶಿಷ್ಟವಾಗಿ   ಮಕ್ಕಳ ದಿನ  ಆಚರಣೆ
ಈ ಸಂದರ್ಭದಲ್ಲಿ  ಸಂಸ್ಥೆಯ ಮುಖ್ಯಸ್ಥೆ ಸಮತ ಮಾತನಾಡಿ, ಒಲಂಪಸ್ ವಿದ್ಯಾಸಂಸ್ಥೆಯು ಮಕ್ಕಳಿಗೆ ಸರಳವಾಗಿ ಹೇಳಿಕೊಟ್ಟು  ಪ್ರಯೋಗಿಕವಾಗಿ ಸಮಾಜಕ್ಕೆ ಉತ್ತಮ ಮಕ್ಕಳನ್ನು ತಯಾರು ಮಾಡುತ್ತೇವೆ. ಶಿಕ್ಷಣ ಮಕ್ಕಳಿಗೆ ಹೊರೆಯಾಗದೆ, ಭವಿಷ್ಯಕ್ಕೆ ಒಳಿತಾಗಬೇಕು ಉತ್ತಮ‌ ಬುದ್ದಿ ಹಾಗೂ ಸಂಸ್ಕಾರಗಳನ್ನು ನೀಡಬೇಕು. ವಿದ್ಯಾರ್ಥಿ ಜೀವನದಲ್ಲಿ ನಾವು ಕಲಿಸುವ ಎಲ್ಲವನ್ನೂ ವಿದ್ಯಾರ್ಥಿಗಳು ಕಲಿತುಕೊಳ್ಳುತ್ತಾರೆ  ಈ ನಿಟ್ಟಿನಲ್ಲಿ  ಇಂದು ಮಕ್ಕಳ ದಿನಾಚರಣೆ ಅಂಗವಾಗಿ ಅಗ್ನಿಶಾಮಕ ಠಾಣೆಗೆ ಮಕ್ಕಳನ್ನು ಕರೆದುಕೊಂಡು ಬಂದು  ಅಗ್ನಿಯಿಂದ ಉಂಟಾಗುವ ಅವಘಡಗಳ ಬಗ್ಗೆ ಮತ್ತು ಅವುಗಳನ್ನು ಅಗ್ನಿಶಾಮಕ ದಳದವರು ಶಮನಗೊಳಿಸುವ ಬಗ್ಗೆ ಪ್ರಯೋಗಿಕವಾಗಿ ಮಕ್ಕಳಿಗೆ ತೋರಿಸಿಕೊಡುವ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದರು.
ಅಗ್ನಿಶಾಮಕ ದಳದ ಮುಖ್ಯಸ್ಥ ರಾಜು ಮಾಹಿತಿ ನೀಡಿ
ಮಕ್ಕಳಿಗೆ ಅಗ್ನಿ ದುರಂತದ ಬಗ್ಗೆ ಎಚ್ಚರಿಕೆಯನ್ನು ಹಾಗೂ ಅಗ್ನಿ ದುರಂತದ ವೇಳೆ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ತೋರಿಸಿಕೊಟ್ಟರು.
ಈ ಸಂದರ್ಭದಲ್ಲಿ ಶಾಲೆಯ ಸಿಬ್ಬಂದಿಗಳಾದ ವರ್ಷ, ಹರ್ಷಿತ, ನಿಶ್ಚಿತ, ವಿಮಲಾ, ಹಾಗೂ  ಮುಂತಾದವರಿದ್ದರು.
RELATED ARTICLES
- Advertisment -spot_img

Most Popular