ಭಜರಂಗ ದಳ ಕಾರ್ಯಕರ್ತರಿಂದ ದಲಿತರ ಮೇಲೆ ಅನೈತಿಕ ಪೋಲೀಸ್ ಗಿರಿ:ದಲಿತ ಮುಖಂಡರ ಆಕ್ರೋಶ
ಸಕಲೇಶಪುರ: ತಾಲೂಕಿನಲ್ಲಿ ಭಜರಂಗ ದಳ ಕಾರ್ಯಕರ್ತರಿಂದ ದಲಿತರ ಮೇಲೆ ಅನೈತಿಕ ಪೋಲೀಸ್ ಗಿರಿ ನಡೆಯುತ್ತಿರುವವುದನ್ನು ಕೂಡಲೇ ತಡೆಗಟ್ಟದೆ ಇದ್ದರೆ ಪೋಲಿಸ್ ಇಲಾಖೆಯ ನಿಷ್ಕ್ರಿಯತೆ ಕೂಡಿದೆ ಎಂದು ನಾವು ಭಾವಿಸಬೇಕಾಗುತ್ತದೆ ಎಂದು ದಲಿತ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.
ಬಾನುವಾರ ಪೊಲಿಸ್ ಇಲಾಖೆಯ ವತಿಯಿಂದ ಪಟ್ಟಣದ ಜೈನ ಮಂದಿರದಲ್ಲಿ ಕರೆಯಲಾಗಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದು ಕೊರತೆಗಳ ಸಭೆಯಲ್ಲಿ ಮಾತನಾಡಿದ ದಲಿತ ಮುಖಂಡರು ಇತ್ತೀಚಿನ ದಿನಗಳಲ್ಲಿ ಕೆಲವು ಸಂಘ ಪರಿವಾರದ ಕಾರ್ಯಕರ್ತರು ನೈತಿಕ ಪೋಲಿಸ್ ಗಿರಿ ಮಾಡುವ ಮೂಲಕ ಗೋ ಹತ್ಯೆ ವಿಚಾರಕ್ಕೆ ಸಂಬಂದಿಸಿದಂತೆ ದಲಿತ ಯುವಕರ ಮೇಲೆ ಹಲ್ಲೆ ಮಾಡುತ್ತಿದ್ದಾರೆ ಇದಕ್ಕೆ ಕಡಿವಾಣ ಹಾಕಬೇಕು ಹಾಗೂ ದಲಿತರು ಅಟ್ರಾಸಿಟಿ ಕೇಸು ದಾಖಲೆ ಮಾಡಲು ಹೋದರೆ ಕೌಂಟರ್ ಕೇಸು ಮಾಡುವುದು ಪೋಲಿಸ್ ಇಲಾಖೆಯಲ್ಲಿ ಮಾಡುತ್ತಿದ್ದಾರೆ ಇದು ನಿಲ್ಲಬೇಕು ಎಂದರು .ಇನ್ನು ಕೆಲವು ಭೂ ಮಾಲೀಕರು ದಲತರ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದು ಇದನ್ನು ತೆರವು ಮಾಡಿಸಲು ಸಾದ್ಯವಾಗುತ್ತಿಲ್ಲ ಎಂದರು.
ಇದಕ್ಕೆ ಉತ್ತರಿಸಿದ ಅಡಿಷನಲ್ ಎಸ್.ಪಿ ತಮ್ಮಯ್ಯ ಮಾತನಾಡಿ ಕಾನೂನು ಕಾಪಾಡಲು ನಮ್ಮನ್ನು ಸರ್ಕಾರ ನೇಮಕ ಮಾಡಿದ್ದು ಸಂವಿದಾನದ ಅಡಿಯಲ್ಲಿ ನಾವು ಕರ್ತವ್ಯ ನಿರ್ವಹಿಸುತ್ತೇವೆ ಯಾರು ಕಾನೂನಿ ವಿರುದ್ದವಾಗಿ ಇರುತ್ತಾರೆಯೋ ಅಂತಹವರ ವಿರುದ್ದ ಕಾನೂನು ಕ್ರಮ ಕೈ ಗೊಳ್ಳುತ್ತವೆ ಇಲ್ಲಿ ಆ ಸಂಘಟನೆ ಈ ಸಂಘಟನೆ ಎಂದು ನೋಡುವುದಿಲ್ಲ ನಾವು ಕಾನೂನು ಮಾತ್ರ ನೋಡುತ್ತೇವೆ , ಇನ್ನು ಕೌಂಟರ್ ಕೇಸು ವಿಚಾರದಲ್ಲಿ ನಮ್ಮ ಇಲಾಖೆ ಠಾಣೆಯಲ್ಲಿ ಲೋಪವಾಗಿದ್ದರೆ ಅದನ್ನು ಸರಿಪಡಿಸಲು ನಾವು ಬದ್ದವಾಗಿದ್ದೇವೆ ರೆವಿನ್ಯೂ ಇಲಾಕೆಗೆ ಸಂಬಂದಿಸಿದ ವಿಷಯಗಳಿಗೆ ಕಾನೂನಾತ್ಮಕವಾಗಿ ಅರ್ಜಿ ಕೊಟ್ಟರೆ ರಕ್ಷಣೆ ನೀಡಲು ನಮ್ಮ ಇಲಾಖೆ ಎಲ್ಲಾ ರೀತಿಯ ಸಹಾಕಾರ ನೀಡಲಾಗುವುದು ಎಂದರು .
ಸಭೆಯಲ್ಲಿ ಡಿವೈಎಸ್ಪಿ ಮಿತುನ್ , ಸರ್ಕಲ್ ಇನ್ಸ್ ಪೆಕ್ಟರ್ ಚೈತನ್ಯ ಆಲೂರು ಸರ್ಕಲ್ ಇನ್ಸ್ ಪೆಕ್ಟರ್ ಹೇಮಂತ್ ಕುಮಾರ್ , ನಗರ ಠಾಣೆ ಸಬ್ ಇನ್ಸ್ ಪೆಕ್ಟರ್ ಶಿವಶಂಕರ್, ಗ್ರಾಮಾಂತರ ಠಾಣೆಯ ಖತಿಜಾ
ದಲಿತ ಮುಖಂಡರಾದ ಪರ್ವತಯ್ಯ, ಹೆತ್ತೂರು ದೊಡ್ಡಯ್ಯ, ಬೆಳಗೋಡು ಬಸವರಾಜು, ಮೋಹನ್ ಅಚ್ಚರಡಿ, ಮಾಸುವಳ್ಲಿ ಚಂದ್ರು, ಗಿರೀಶ್, ಇತರರು ಹಾಜರಿದ್ದರು.