ಸಕಲೇಶಪುರ : ಕಾಡಾನೆಗಳ ದಾಂದಲೆ ಅಪಾರ ಪ್ರಮಾಣದ ಬೆಳೆ ನಾಶ.
ಮಳಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮೇನಹಳ್ಳಿಯ ಘಟನೆ.
ಕೀರ್ತಿಭೂಷಣ್ ಅವರ ಕಾಫಿ ತೋಟದಲ್ಲಿ ಕಾಡಾನೆಗಳ ದಾಂದಲೆ.
ಕಳೆದ ಒಂದು ವಾರದಿಂದ ಮಳಲಿ ಗ್ರಾಮದ ಸುತ್ತಮುತ್ತ ಕಾಡಾನೆಗಳ ಇಂದು ಬೀಡು ಬಿಟ್ಟಿದ್ದು ಕಳೆದ ರಾತ್ರಿ ರಾಮೇನಹಳ್ಳಿ ಗ್ರಾಮದ ಕಾಫಿ ಬೆಳೆಗಾರರ ಕೀರ್ತಿಭೂಷಣ್ ರವರ ತೋಟಕ್ಕೆ ಲಗ್ಗೆ ಇಟ್ಟಿರುವ ಕಾಡಾನೆಗಳೆಂದು ಅಪಾರ ಪ್ರಮಾಣದ ಬೆಳೆ ನಾಶ, ಅಡಿಕೆ ಸಸಿಗಳು, ಕಾಂಪೌಂಡ್ ಮುರಿದು ಹಾಕಿರುವ ವರದಿಯಾಗಿದೆ.
ಕಾಫಿ ಬೆಳೆ ಮೇಲೆ ದುಷ್ಪರಿಣಾಮ ಬೀರಿದ್ದು ಒಂದು ಕಡೆ ಕಾಡಾನೆ ಹಾವಳಿ ಮತ್ತೊಂದೆಡೆ ಅಕಾಲಿಕ ಮಳೆಯಿಂದ ಪ್ರಸಕ್ತ ವರ್ಷದಲ್ಲಿ ಕಾಫಿ ಬೆಳೆ ಗಣನೀಯವಾಗಿ ಇಳಿಕೆಯಾಗುವ ಆತಂಕ ಎದುರಾಗಿದೆ.
ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವೈಜ್ಞಾನಿಕವಾಗಿ ಬೆಳೆ ಪರಿಹಾರ ನೀಡಬೇಕೆಂದು ಕಾಫಿ ಬೆಳೆಗಾರರಾದ ಕೀರ್ತಿಭೂಷಣ್ ಒತ್ತಾಯಿಸಿದ್ದಾರೆ.