ಸಕಲೇಶಪುರ :
ತಾಲ್ಲೂಕಿನ ಉಪವಿಭಾಗಾಧಿಕಾರಿಯಾಗಿದ್ದಪ್ರತೀಕ್ ಬಯಾಲ್ ಅವರ ವರ್ಗಾವಣೆ ಖಂಡಿಸಿ ಇಂದು ದಲಿತ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯದರು ಪ್ರತಿಭಟನೆ ನಡೆಸಿ ಮರು ನಿಯೋಜಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಮುಖಂಡ ಆರ್‌ಪಿಐ ಸತೀಶ್ ಮಾತನಾಡಿ,ಪ್ರತೀಕ್ ಬಾಯಲ್ ಅವರು ಸಕಲೇಶಪುರ ತಾಲೂಕಿಗೆ ಉಪವಿಭಾಗಾಧಿಕಾರಿಯಾಗಿ ಬಂದ ನಂತರ ಸುಮಾರು ಎರಡುವರೆ ಸಾವಿರ ಭೂ ವ್ಯಾಜ್ಯ ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು ಅವರು ದೀನದಲಿತರ, ಹಿಂದುಳಿದ ಹಾಗೂ ಆದಿವಾಸಿಗಳ ಪರ ಕೆಲಸ ನಿರ್ವಹಿಸುತ್ತಿದ್ದ ನಿಷ್ಠಾವಂತ ಅಧಿಕಾರಿಯನ್ನು ಸ್ಥಳ ನಿಯೋಜಿಸದೆ ಏಕಾಏಕಿ ವರ್ಗಾವಣೆ ಮಾಡಿರುವುದು ಖಂಡನೀಯ ಎಂದರು. ಹೆಚ್ ಆರ್ ಪಿ ಭೂಪ್ರಕರಣದಲ್ಲಿ ಅಕ್ರಮವಾಗಿ ಮಂಜೂರು ಮಾಡಿಸಲ ಮುಂದಾಗಿದ್ದ ಅನೇಕ ಅರ್ಜಿಗಳನ್ನು ವರ್ಗಾವಣೆ ಮಾಡುವ ಮೂಲಕ ಸಾಮಾಜಿಕ ನ್ಯಾಯ ನೀಡಿರುವ ಸಕಲೇಶಪುರ ಉಪವಿಭಾಗಾಧಿಕಾರಿ ವರ್ಗಾವಣೆಯ ಹಿಂದೆ ಭೂ ದಂದೆಕೋರರ ಕೈವಾಡವಿದ್ದು ಅವರನ್ನು ಕೂಡಲೇ ಮರು ನಿಯೋಜಿಸಬೇಕು ಎಂದು ಆಗ್ರಹಿಸಿದರು.
ಕಳೆದ ಅನೇಕ ವರ್ಷಗಳಿಂದ ಇತ್ಯರ್ಥವಾಗದ ಅನೇಕ ಭೂ ವ್ಯಾಜ್ಯಪ್ರಕರಣಗಳನ್ನು ಅತಿ ಕಡಿಮೆ ಸಂದರ್ಭದಲ್ಲಿ ಇತ್ಯರ್ಥಪಡಿಸಿರುವ ಕೀರ್ತಿ ಪ್ರತೀಕ್ ಬಯಾಲ್ ಅವರಿಗೆಸಲ್ಲುತ್ತದೆ ಇಂತಹ ನಿಷ್ಠಾವಂತ ಅಧಿಕಾರಿಯನ್ನು ವರ್ಗಾವಣೆಮಾಡಿರುವುದು ದಕ್ಷ ಅಧಿಕಾರಿಗಳಿಗೆ ಮಾಡುವ ಅಪಮಾನವಾಗಿದೆ ಎಂದು ಕಿಡಿಕಾರಿದರು.ಕೂಡಲೇ ಅವರನ್ನು ಪೂರ್ಣಾವಧಿಯವರೆಗೆ ತಮ್ಮಸ್ಥಾನದಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಎಲ್ಲಾ ದಲಿತ ಹಾಗೂ ಹಿಂದುಳಿದ ಹಾಗೂ ಪ್ರಗತಿಪರ ಸಂಘಟನೆಗಳ ವತಿಯಿಂದ ಜಿಲ್ಲಾಡಳಿತ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ದಸಂಸ ಮುಖಂಡ ವಳಲಹಳ್ಳಿವೀರೇಶ್, ಹೆತ್ತೂರು ನಾಗರಾಜ್,ಬಸವರಾಜ್ ಬೆಳಗೋಡು, ಹೆನ್ರಿ ಕಾಕನ ಮನೆ, ಮರಿ ಜೋಸೆಫ್, ಈರಪ್ಪ ಸೇರಿದಂತೆ ಇತರರು ಇದ್ದರು.