Monday, April 21, 2025
Homeಸುದ್ದಿಗಳುBreaking News :ಶಾಸಕರಿಗೆ ಆಹ್ವಾನ ನೀಡದೆ ಕಾಡಾನೆ ಟಾಸ್ಕ್ ಪೋರ್ಸ್ ಸಮಿತಿ ಕಚೇರಿ ಉದ್ಘಾಟನೆ: ಶಾಸಕ...

Breaking News :ಶಾಸಕರಿಗೆ ಆಹ್ವಾನ ನೀಡದೆ ಕಾಡಾನೆ ಟಾಸ್ಕ್ ಪೋರ್ಸ್ ಸಮಿತಿ ಕಚೇರಿ ಉದ್ಘಾಟನೆ: ಶಾಸಕ ಎಚ್.ಕೆ ಕುಮಾರಸ್ವಾಮಿ ತೀವ್ರ ಆಕ್ರೋಷ

ಶಾಸಕರಿಗೆ ಆಹ್ವಾನ ನೀಡದೆ ಕಾಡಾನೆ ಟಾಸ್ಕ್ ಪೋರ್ಸ್ ಸಮಿತಿ ಕಚೇರಿ ಉದ್ಘಾಟನೆ: ಶಾಸಕ ಎಚ್.ಕೆ ಕುಮಾರಸ್ವಾಮಿ ತೀವ್ರ ಆಕ್ರೋಷ

ಅಧಿಕಾರಿಗಳ ವಿರುದ್ದ ಸರ್ಕಾರಕ್ಕೆ ದೂರು ನೀಡಲು ಮುಂದಾದ ಶಾಸಕ ಎಚ್.ಕೆ ಕುಮಾರಸ್ವಾಮಿ

ಸಕಲೇಶಪುರ: ಕಾಡಾನೆ ಟಾಸ್ಕ್ ಪೋರ್ಸ್ ಸಮಿತಿಯ ಕಚೇರಿ ಉದ್ಘಾಟನೆಗೆ ಸ್ಥಳೀಯ ಶಾಸಕ ಎಚ್.ಕೆ ಕುಮಾರಸ್ವಾಮಿರವರಿಗೆ ಆಹ್ವಾನ ನೀಡದೆ ಏಕಾಏಕಿ ತರಾತುರಿಯಲ್ಲಿ ಸಂಜೆಯ ವೇಳೆ ಉದ್ಘಾಟನೆ ಮಾಡಿರುವುದಕ್ಕೆ ಶಾಸಕ ಎಚ್.ಕೆ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. ಈ ಕುರಿತು ನಿರಂತರ ನ್ಯೂಸ್ ನೊಂದಿಗೆ ಮಾತನಾಡಿ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿರವರು ತಾಲೂಕಿಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಕಾಟಾಚಾರಕ್ಕೆ ಜನರಿಗೆ ಮಂಕುಬೂದಿ ಎರಚಲು ಯಾವುದೆ ರೀತಿಯ ಸೂಕ್ತ ವ್ಯವಸ್ಥೆಗಳಿಲ್ಲದೆ ಏಕಾಏಕಿ ಅರಣ್ಯ ಇಲಾಖೆ ಸಂಜೆಯ ವೇಳೆ ಯಾರಿಗೂ ಮಾಹಿತಿ ಕೊಡದೆ ಟಾಸ್ಕ್ ಪೋರ್ಸ್ ಕಚೇರಿ ಉದ್ಘಾಟಿಸುವ ಔಚಿತ್ಯವಾದರು ಏನು? ಸ್ಥಳೀಯ ಜನಪ್ರತಿನಿಧಿಗಳನ್ನು ಕಡೆಗಣಿಸಿ ಅವಮಾನ ಮಾಡಿದ್ದು ಅಧಿಕಾರಿಗಳ ನಡೆ ಕುರಿತು ಸರ್ಕಾರಕ್ಕೆ ದೂರು ಸಲ್ಲಿಸುತ್ತೇನೆ ಹಾಗೂ ಮುಖ್ಯಮಂತ್ರಿಗಳು ಕೇವಲ ರಾಜಕೀಯ ಗಿಮಿಕ್ ಗಾಗಿ ಟಾಸ್ಕ್ ಪೋರ್ಸ್ ರಚನೆ ಮಾಡಿರುವುದು ಕಂಡು ಬರುತ್ತಿದೆ. ಇದರಿಂದ ಯಾವುದೆ ಪ್ರಯೋಜನವಿಲ್ಲ, ಎಲ್ಲಾ ಕಾಡಾನೆಗಳನ್ನು ಹಿಡಿದು ಸ್ಥಳಾಂತರ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.

RELATED ARTICLES
- Advertisment -spot_img

Most Popular