- ಸಕಲೇಶಪುರ : ಮುಖ್ಯಮಂತ್ರಿಗಳು ಪಕ್ಷದ ಕಾರ್ಯಕ್ರಮಕ್ಕೆ ಬಂದರೆ ಭೇಟಿ ಮಾಡುವುದಿಲ್ಲ. ಸಾರ್ವಜನಿಕ ಸಭೆಯಾದರೆ ಮಾತ್ರ ಭೇಟಿಯಾಗುವೆ – ಶಾಸಕ ಎಚ್ ಕೆ ಕುಮಾರಸ್ವಾಮಿ
ಸಕಲೇಶಪುರ : ಮುಖ್ಯಮಂತ್ರಿಗಳು ತಾಲೂಕಿಗೆ ಡಿಸೆಂಬರ್ 13ರಂದು ಬರುವ ಮಾಹಿತಿ ನನಗೆ ಇಲ್ಲ ಒಂದು ವೇಳೆ ಬಂದರೂ ಇಲ್ಲಿನ ಬಹು ಮುಖ್ಯ ಸಮಸ್ಯೆಗಳಾದ ಕಾಡಾನೆ ಹಾಗೂ ರಾಷ್ಟ್ರೀಯ ಹೆದ್ದಾರಿ ವಿಚಾರವಾಗಿ ಸಾರ್ವಜನಿಕ ಸಭೆ ನಡೆಸಿದರೆ ಮಾತ್ರ ಆ ಸಭೆಯಲ್ಲಿ ಭಾಗವಹಿಸುವುದಾಗಿ ಶಾಸಕ ಎಚ್ ಕೆ ಕುಮಾರಸ್ವಾಮಿ ಹೇಳಿದ್ದಾರೆ.
ಒಂದು ವೇಳೆ ಶಾಸಕರು ಪಕ್ಷದ ಕಾರ್ಯಕ್ರಮಕ್ಕಾಗಿ ತಾಲೂಕಿಗೆ ಆಗಮಿಸಿದರೆ ಇಲ್ಲಿನ ಸಮಸ್ಯೆಗಳ ಬಗ್ಗೆ ಗಮನಕ್ಕೆ ತರಲು ಬಯಸುವುದಿಲ್ಲ.
ಮುಖ್ಯಮಂತ್ರಿಗಳು ಆಗಮಿಸುವ ಕುರಿತು ಇದುವರೆಗೂ ನನಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.