ಕಟಾವಿಗೆ ಬಂದಿದ್ದ ಭತ್ತದ ಬೆಳೆ ಕಾಡಾನೆ ಹಾವಳಿಗೆ ಸಂಪೂರ್ಣ ನಾಶ:
ಸಕಲೇಶಪುರ : 15 ದಿನಗಳಿಂದ ಹೆತ್ತೂರು ಹೋಬಳಿ ವ್ಯಾಪ್ತಿಯ ಮರ್ಜನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ರೈತರ ಹೊಲಗದ್ದೆಗಳಿಗೆ ನಿರಂತರವಾಗಿ ಕಾಡಾನೆಗಳು ದಾಳಿ ಮಾಡುತ್ತಿದ್ದು, ರೈತರು ಹೈರಾಣಾಗುವಂತಾಗಿದೆ. ಮನಸೋ ಇಚ್ಚೆ ಭತ್ತದ ಗದ್ದೆಗಳಲ್ಲಿ ಓಡಾಟ ನಡೆಸುವ ಕಾಡಾನೆಗಳಿಂದ ಭತ್ತದ ಬೆಳೆಗಳು ನಾಶವಾಗಿವೆ.
ಕಳೆದ ರಾತ್ರಿ ಕಾಡಾನೆಗಳು ಮರ್ಜನಹಳ್ಳಿ ಗ್ರಾಮದ ರೈತ ಜಗದೀಶ್ ಅವರ ಗದ್ದೆಗಳಲ್ಲಿ ಓಡಾಡಿದ್ದರಿಂದ ಕಟಾವಿಗೆ ಬಂದಿದ್ದ ಭತ್ತದ ಬೆಳೆ ಸಂಪೂರ್ಣ ನಾಶವಾಗಿದೆ. ಕಷ್ಟಪಟ್ಟು ಬೆಳೆದಿದ್ದ ಬೆಳೆ ಇನ್ನೇನು ಕೈಗೆ ಸಿಗುವ ಸಮಯದಲ್ಲಿ ಸಂಪೂರ್ಣ ಬೆಳೆ ನಾಶವಾಗಿದ್ದರಿಂದ ರೈತ ಜಗದೀಶ್ ಗದ್ದೆಯಲ್ಲಿ ಕುಳಿತು ಕಣ್ಣೀರು ಹಾಕುತ್ತ ರೋಧಿಸುತ್ತಿದ್ದಾರೆ
ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ವೈಜ್ಞಾನಿಕವಾಗಿ ಬೆಳೆ ಪರಿಹಾರ ನಿಗದಿ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ