Tuesday, December 3, 2024
Homeಸುದ್ದಿಗಳುಸಕಲೇಶಪುರಸಕಲೇಶಪುರ : ಅಸಮರ್ಪಕ ಬಸ್ ವ್ಯವಸ್ಥೆ ವಿರುದ್ಧ ಸಮರ ಸಾರಿದ ಕರವೇ ಪ್ರವೀಣ್ ಶೆಟ್ಟಿ ಬಣ:...

ಸಕಲೇಶಪುರ : ಅಸಮರ್ಪಕ ಬಸ್ ವ್ಯವಸ್ಥೆ ವಿರುದ್ಧ ಸಮರ ಸಾರಿದ ಕರವೇ ಪ್ರವೀಣ್ ಶೆಟ್ಟಿ ಬಣ:  ಕರವೇ ಒತ್ತಡಕ್ಕೆ ಮಣಿದ ಬಸ್ ವ್ಯವಸ್ಥೆ ಕಲ್ಪಿಸಿದ ಕೆಎಸ್ಆರ್ಟಿಸಿ : ಶಾಲಾ ಮಕ್ಕಳು, ಪೋಷಕರಲ್ಲಿ ಹರ್ಷ

 

ಸಕಲೇಶಪುರ : ಅಸಮರ್ಪಕ ಬಸ್ ವ್ಯವಸ್ಥೆ ವಿರುದ್ಧ ಸಮರ ಸಾರಿದ ಕರವೇ ಪ್ರವೀಣ್ ಶೆಟ್ಟಿ ಬಣ:

 ಕರವೇ ಒತ್ತಡಕ್ಕೆ ಮಣಿದ ಬಸ್ ವ್ಯವಸ್ಥೆ ಕಲ್ಪಿಸಿದ ಕೆಎಸ್ಆರ್ಟಿಸಿ : ಶಾಲಾ ಮಕ್ಕಳು, ಪೋಷಕರಲ್ಲಿ ಹರ್ಷ

 ಸಕಲೇಶಪುರ : ಕಳೆದ ಹಲವಾರು ವರ್ಷಗಳಿಂದ ತಾಲೂಕಿನಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಬೆಳಗೋಡು ಸಮೀಪದ ಪಾತಿಮಾಪುರ ಕ್ರೈಸ್ತ ಕಮ್ಯೂನಿಟಿ ಶಾಲೆಯು ಒಂದಾಗಿದೆ.

 ಆದರೆ ಈ ಶಾಲೆಯ ವಿದ್ಯಾರ್ಜನೆಗೆ ತೆರಳುವ ವಿದ್ಯಾರ್ಥಿಗಳಿಗೆ ಸೂಕ್ತ ಸಮಯಕ್ಕೆ ಬಸ್ ಗಳಿಲ್ಲದೆ

ಪರಿ ತಪ್ಪಿಸುತ್ತಿದ್ದರು. ಇದುವರೆಗೂ ಸಾವಿರಾರು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವಿದ್ಯಾರ್ಜನೆ ಮಾಡಿ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳಲ್ಲಿ ಇದ್ದಾರೆ.

ಆದರೆ. ಶಾಲೆಗೆ ತೆರಳಲು ಇದುವರೆಗೂ ಯಾರು ಸಹ ಸಮರ್ಪಕವಾಗಿ ಬಸ್ ವ್ಯವಸ್ಥೆ ಗೊಳಿಸಲು ಸಾಧ್ಯವಾಗಿರಲಿಲ್ಲ.

ಇದರಿಂದ ವಿದ್ಯಾರ್ಥಿಗಳು ಬೆಳಗಿನ ವೇಳೆ ಶಾಲೆಗೆ ತಲುಪಲು ಹಾಗೂ ಶಾಲೆ ಬಿಟ್ಟ ನಂತರ ಮನೆಗೆ ತಲುಪಲು ಅನಾನುಕೂಲವಾಗುತ್ತಿತ್ತು. ಇದನ್ನರಿತ ಶಾಲೆಯ ಶಿಕ್ಷಕರು. ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ರಮೇಶ್ ಅವರಿಗೆ ಪರಿಸ್ಥಿತಿಯ ಬಗ್ಗೆ ವಿವರಿಸಿದರು. ತಕ್ಷಣವೇ ಕಾರ್ಯಪ್ರವೃತ್ತರಾದ ರಮೇಶ್ ಸಕಲೇಶಪುರ ಹಾಗೂ ಬೇಲೂರು ಡಿಪ್ಪೋಗಳ ವ್ಯವಸ್ಥಾಪಕರಿಗೆ ಕರೆ ಮಾಡಿ. ಸೂಕ್ತ ಸಮಯಕ್ಕೆ ಬಸ್ ಗಳನ್ನು ಸಂಚರಿಸುವಂತೆ ಮನವಿ ಮಾಡಿದ್ದರು. ಆದರೂ ಸಹ ಕೆಎಸ್ಆರ್ಟಿಸಿ ಅಧಿಕಾರಿಗಳ ನಿರ್ಲಕ್ಷದಿಂದ ಶಾಲೆ ಬಿಟ್ಟ ನಂತರ ಮನೆಗೆ ತಡವಾಗಿ ಬರುತ್ತಿದ್ದ ಮಕ್ಕಳು ಇದರಿಂದ ಪೋಷಕರಲ್ಲಿ ಆತಂಕ ಮನೆ ಮಾಡಿತ್ತು.

 ಬಸ್ಗಳ ಸಮಸ್ಯೆಗೆ ಪರಿಹಾರ ಹುಡುಕಲೇಬೇಕೆಂದು ಹೋರಾಟಕ್ಕಿಳಿದ ಕರವೇ ತಾಲೂಕು, ಅಧ್ಯಕ್ಷ ರಮೇಶ್ ರವರು ಖುದ್ದಾಗಿ ಶಾಲೆಯ ಹತ್ತಿರ ಹೋಗಿ ಬೇಲೂರಿನಿಂದ ಸಕಲೇಶಪುರಕ್ಕೆ ಸಂಜೆ ಶಾಲೆ ಬಿಡುವ ಸಮಯ ನಾಲ್ಕು ಗಂಟೆಗೆ ಬಸ್ಸಿಗಾಗಿ ಕಾದು ಕುಳಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಫಲವಾಗಿ ಈ ಮಾರ್ಗದಲ್ಲಿ ಬಸ್ ಓಡಿಸಲು ಅಧಿಕಾರಿಗಳು ಮುಂದಾದರು. ಕೇವಲ ವಿದ್ಯಾರ್ಥಿಗಳ ಪಾಸ್ ಇರುತ್ತದೆ ಎಂಬ ಕಾರಣಕ್ಕೆ ಬಸ್ ಗಳನ್ನು ಓಡಿಸಲು ಹಿಂದೇಟು ಹಾಕುತ್ತಿದ್ದ ಅಧಿಕಾರಿಗಳಿಗೆ ರಮೇಶ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರಿಗೆ ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ

RELATED ARTICLES
- Advertisment -spot_img

Most Popular