ಸಕಲೇಶಪುರ: ಪಟ್ಟಣದ ಶ್ರೀಹೊಳೆ ಮಲ್ಲೇಶ್ವರ ದೇವಸ್ಥಾನದಲ್ಲಿ ಶರವನ್ನರಾತ್ರಿ ಪ್ರಯುಕ್ತ ನಾದಸುದ ಸಂಗೀತ ವಿದ್ಯಾಲಯದಿಂದ ಸುಗಮಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು ಖ್ಯಾತ ಸಂಗೀತ ವಿದುಷಿ ಶ್ವೇತಾ ಖಂಡಿಗೆ ಹಾಗೂ ಶಿಷ್ಯವೃಂದವರು ನಡೆಸಿ ಕೊಟ್ಟ ಈ ಸುಶ್ರಾವ್ಯ ಸಂಗೀತ ಸುದೆ ಕಾರ್ಯಕ್ರಮ ನೆರೆದಿದ್ದ ಎಲ್ಲಾ ಭಕ್ತರ ಹಾಗೂ ಸಂಗೀತ ಪ್ರಿಯರ ಮೆಚ್ಚುಗೆ ಪಾತ್ರವಾಗಿತ್ತು. ನಂತರ ಅಮ್ಮನವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷ ದುಲ್ ರಾಜ್ ಜೈನ್, ಹರಿಶ ಆಚಾರ್ ,ಮಂಜುನಾಥ್ ಅತ್ವಾರ್, ವೆಂಕಟೇಶ್ ಮುಂತಾದವರು ಉಪಸ್ಥಿತರಿದ್ದರು.