ಸಕಲೇಶಪುರ ಮತ್ತು ಆಲೂರು ತಾಲೂಕಿನ ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳ ನೆಲಸಮಕ್ಕೆ ಪ್ರಸ್ತಾವನೆ.
ಖುದ್ದು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದ ಶಾಸಕ ಸಿಮೆಂಟ್ ಮಂಜು : ತಾಂತ್ರಿಕ ಒಪ್ಪಿಗೆಗೆ ಅಧಿಕಾರಿಗಳಿಂದ ಇಲಾಖೆಗೆ ಪ್ರಸ್ತಾವನೆ
ಸಕಲೇಶಪುರ/ಆಲೂರು: ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಶಾಲೆಗಳ ಕಟ್ಟಡಗಳನ್ನ ಪರಿಶೀಲಿಸಿ ನೆಲಸಮಗೊಳಿಸುವಂತೆ ಶಾಸಕ ಸಿಮೆಂಟ್ ಮಂಜು ಸೂಚಿಸಿದ ಹಿನ್ನೆಲೆ ಶಿಕ್ಷಣ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ತಾಂತ್ರಿಕ ಒಪ್ಪಿಗೆ ಪಡೆಯಲು ವರದಿ ಸಲ್ಲಿಸಿದೆ.
ಸಕಲೇಶಪುರ ಮತ್ತು ಆಲೂರು ತಾಲೂಕಿನ ಸರ್ಕಾರಿ ಶಾಲೆಗಳ ಕೊಠಡಿಗಳು ಹಲವಾರು ವರ್ಷಗಳಿಂದ ಶಿಥಿಲಗೊಂಡಿದ್ದು ನೆಲಸಮಗೊಳಿಸುವ ಕಾರ್ಯಕ್ಕೆ ತಾಂತ್ರಿಕ ಒಪ್ಪಿಗೆ ಪಡೆದು ಸಾಧ್ಯವಾಗಿರಲಿಲ್ಲ.ಹಾಗೂ ಭಾರಿ ಗಾಳಿ ಮಳೆಗೆ ಹಲವಾರು ಶಾಲಾ ಕಟ್ಟಡಗಳಿಗೆ ಹಾನಿಯಾಗಿದ್ದವು ಈ ನಿಟ್ಟಿನಲ್ಲಿ ಶಾಸಕ ಸಿಮೆಂಟ್ ಮಂಜು ಅಧಿಕಾರಿಗಳ ಜೊತೆಗೂಡಿ ಖುದ್ದು ಭೇಟಿ ನೀಡಿ ಪರಿಶೀಲನೆ ನೆಡೆಸಿ ವಾಸ್ತವ ವರದಿಯನ್ನು ಸಿದ್ದಪಡಿಸಿದರು.
ಇದೀಗ ಸರ್ಕಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಗಳು ಇಲಾಖೆಗೆ ಶಾಲೆಗಳ ನೆಲಸಮಗೋಳಿಸಲು ತಾಂತ್ರಿಕವಾಗಿ ಒಪ್ಪಿಗೆ ಪಡೆಯಲು ವರದಿ ಸಲ್ಲಿಸಿದರು. ವರದಿಯಂತೆ ಸಕಲೇಶಪುರ ತಾಲೂಕಿನ ಒಟ್ಟು 33 ಸರ್ಕಾರಿ ಶಾಲೆಗಳಲ್ಲಿ 78 ಮತ್ತು ಆಲೂರು ತಾಲೂಕಿನ 22 ಕೊಠಡಿಗಳು/ ಶೌಚಾಲಯಗಳು ಶಿಥಿಲಾವಸ್ಥೆಯಲಿದ್ದು ಕೆಲವು ಕೊಠಡಿಗಳು ಸುಸ್ಥಿತಿಯಲ್ಲಿರುತ್ತದೆ, ಕೆಲವೊಂದು ಶಾಲಾ ಕೊಠಡಿಗಳಿಗೆ ದುರಸ್ಥಿ ಪಡಿಸಬಹುದಾಗಿದ್ದು, ಕೆಲವು ಶಾಲಾ ಕೊಠಡಿಗಳನ್ನು ಈಗಾಗಲೇ ನೆಲಸಮಗೊಳಿಸಲಾಗಿದ್ದು ಹಾಗೂ ಕೆಲವು ಶಾಲಾ ಕೊಠಡಿಗಳು ಶಿಥಿಲಗೊಂಡಿರುವುದು ಕಂಡುಬಂದಿದ್ದು ಶಾಲಾ ಕೊಠಡಿಗಳು ಯಾವುದೇ ಸಂದರ್ಭದಲ್ಲಿ ಕುಸಿದು ಬೀಳುವ ಸಾಧ್ಯತೆ ಇರುವುದರಿಂದ ಶಾಸಕರು,ಶಿಕ್ಷಣ ಇಲಾಖೆಯ ಮನವಿಯಂತೆ ಕೊಠಡಿಗಳನ್ನು ನೆಲಸಮಗೊಳಿಸಲು ಲೋಕೋಪಯೋಗಿ ಇಲಾಖೆಗೆ ತಾಂತ್ರಿಕ ಒಪ್ಪಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಶಾಸಕರು ಅಪಾಯದಲ್ಲಿದ್ದ ಶಾಲಾ ಕೊರಡಿಗಳ ವಸ್ತು ಸ್ಥಿತಿಯನ್ನು ಅರಿತು