ಸಮುದಾಯಗಳ ಕುರಿತು ಅವಹೇಳಕಾರಿ ಪದ ಬಳಕೆ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು
ಸಕಲೇಶಪುರ: ವ್ಯಕ್ತಿಯೋರ್ವ ಎರಡು ಸಮುದಾಯಗಳ ವಿರುದ್ಧ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ ಹಿನ್ನಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಘಟನೆ ನಡೆದಿದೆ.
ತಾಲೂಕಿನ ಸುಳ್ಳಕ್ಕಿ ಗ್ರಾಮದ ಮಲ್ಲೇಶ್ ಎಂಬುವನ ಮೇಲೆ ಪ್ರಕರಣ ದಾಖಲಾಗಿದೆ. ಮಲ್ಲೇಶ್ ಎಂಬುವರು ತನ್ನ ಸಾಮಾಜಿಕ ಜಾಲತಾಣದ (ಫೇಸ್ಬುಕ್ )ನಲ್ಲಿ ವೀರಶೈವ ಲಿಂಗಾಯತ ಹಾಗೂ ಒಕ್ಕಲಿಗ ಜಾತಿಯ ಕುರಿತು ಅವಹೇಳನಕಾರಿಯಾಗಿ ಸಂದೇಶ ಹಾಕಿದನ್ನು ಖಂಡಿಸಿದ ಎರಡು ಸಮುದಾಯದ ಮುಖಂಡರು ಮಲ್ಲೇಶ್ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದಿನಾಂಕ 18-04-2025 ರಾತ್ರಿ 10:30 ಗಂಟೆಯಲಿ ಫೇಸ್ ಬುಕ್ ಪೋಸ್ಟ್ ನಲ್ಲಿ, ವೀರಶೈವ-ಲಿಂಗಾಯತರು ಹಾಗೂ ಒಕ್ಕಲಿಗ ಸಮಾಜದ ಹೆಸರನ್ನು ಉಲ್ಲೇಖಿಸಿ, ” ಇದರಲ್ಲಿ ಇನ್ನೊಂದು ಸ್ಟೇಟಸ ಹಾಕ್ತಾ ಇದ್ದೀನಿ ಗೌಡ್ರು ಲಿಂಗಾಯತರು ಅಂತ ಹೇಳಿ ನಮ್ಮ ಮೇಲೆ ದರ್ಪ ತೋರ್ಸೋಕೆ ಬಂದರೆ ನನ್ನ ಮುಂದೆ ಏನು ನಡೆಯಲ್ಲ, ಗೌರವ ಕೊಟ್ರೆ ಗೌರವ ಸಿಗುತ್ತೆ. ಇಲ್ಲಾಂದ್ರೆ ಸೂಳೆಮಕ್ಕಳಿಗೂ ಗೌರವ ಸಿಗಲ್ಲ, ” ಎಂದು ಉಲ್ಲೇಖಿಸಿ ಲಿಂಗಾಯತ ಹಾಗೂ ಒಕ್ಕಲಿಗ ಸಮಾಜಕ್ಕೆ ಜಾತಿ ನಿಂಧನೆ ಸಂದೇಶವನ್ನು ಬಿತ್ತರಿಸಿ ಸಮುದಾಯಗಳ ಮಧ್ಯೆ ವಿಷಬೀಜ ಬಿತ್ತಿದ್ದು ಈತನ ವಿರುದ್ಧ ಎರಡು ಸಮುಧಾಯದ ಪರವಾಗಿ ಕಾನೂನು ರೀತಿ ಕ್ರಮಗಳನ್ನು ಜರುಗಿಸಬೇಕಾಗಿ ಎರಡು ಸಮುದಾಯದ ಮುಖಂಡರು ದೂರಿನಲ್ಲಿ ತಿಳಿಸಿದ್ದಾರೆ. ದೂರು ಸ್ವೀಕರಿಸಿದ ಗ್ರಾಮಾಂತರ ಠಾಣೆಯ ಪೊಲೀಸರು ಕಾಲಂ 67 ಐಟಿ ಆಕ್ಟ್ ಜೊತೆಗೆ 196(1) BNS ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.