ರಸ್ತೆ ಗುಣಮಟ್ಟ ಪರಿಶೀಸಿದ ಶಾಸಕ ಸಿಮೆಂಟ್ ಮಂಜು.
ಸಕಲೇಶಪುರ : ಗ್ರಾಮೀಣ ಭಾಗದಲ್ಲಿ ನಿರ್ಮಾಣ ಹಂತದಲ್ಲಿರುವ ರಸ್ತೆಗಳ ಕಾಮಗಾರಿಯಲ್ಲಿ ಕಾಯ್ದುಕೊಳ್ಳಬೇಕೆಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಅವರು ಸಕಲೇಶಪುರದಿಂದ ಅಲೆಬೇಲೂರು ಮಾರ್ಗವಾಗಿ ಸಿದ್ದಾಪುರದವರೆಗೂ ನೆಡೆಯುತ್ತಿರುವ ರಸ್ತೆ ಡಾಂಬರೀಕರಣ ಪರಿಶೀಲಿಸಿ ಮಾತನಾಡಿದರು.
ದಿನನಿತ್ಯ ಪ್ರಗತಿಯಲ್ಲಿರುವ ಕಾಮಗಾರಿಗಳ ಕುರಿತು ಪರಿಶೀಲನೆ ಮಾಡುವ ಕೆಲಸ ಅಧಿಕಾರಿಗಳ ಮೇಲೆ ಹಚ್ಚಿನ ಜವಾಬ್ದಾರಿ ಇದೆ.
ಕಳಪೆ ಕಾಮಗಾರಿ ಕುರಿತಂತೆ ಗ್ರಾಮಸ್ಥರಿಂದ ದೂರುಗಳು ಬಂದಲ್ಲಿ ಅಧಿಕಾರಿಗಳನ್ನೇ ನೇರಹೊಣೆ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.ನೂತನವಾಗಿ ನಿರ್ಮಾಣ ವಾಗುತ್ತಿರುವ ರಸ್ತೆಯನ್ನು ಖುದ್ದು ಶಾಸಕರು ಅಳತೆ ಟೇಪ್ ಹಿಡಿದು ಪರಿಶೀಲನೆ ನೆಡೆಸಿದರು.
ಗುತ್ತಿಗೆದಾರನಿಗೆ ಶಾಸಕ ಸಿಮೆಂಟ್ ಮಂಜು ತಾಕೀತು:
ರಸ್ತೆ ದುರಸ್ತಿ ಮಾಡಿ ತಿಂಗಳು ಕಳೆಯುವುದರೊಳಗೆ ಕಿತ್ತು ಹೋಗಬಾರದು. ತಾತ್ಕಾಲಿಕ ದುರಸ್ತಿ ಮಾಡಿ ದರೂ ದೀರ್ಘ ಕಾಲ ಬಾಳಿಕೆ ಬರುವಂತಿರಬೇಕು.
ತಾಲೂಕಿನ ಹಲವೆಡೆ ಗ್ರಾಮಗಳ ಸಂಪರ್ಕ ಮಾಡುವ ರಸ್ತೆಯ ಮಧ್ಯೆ ಕೆಲವೆಡೆ ಗುಂಡಿಗಳು ಬಿದ್ದು ಹದಗೆಟ್ಟಿದ್ದು, ತಾತ್ಕಾಲಿಕ ರಸ್ತೆ ದುರಸ್ತಿ ಡಾಂಬರೀಕರಣ ಕಾಮಗಾರಿ ನಡೆಯುತ್ತಿದ್ದು, ಖುದ್ದು ಸ್ಥಳಕ್ಕೆ ಭೇಟಿ ನೀಡಿ ಗುಣಮಟ್ಟ ಪರಿಶೀಲಿಸಿದರು.
ತಾತ್ಕಾಲಿಕ ರಸ್ತೆ ದುರಸ್ತಿ ಡಾಂಬರೀಕರಣ ಕಾಮಗಾರಿ ನಡೆಯುತ್ತಿರುವ ಕಡೆಗಳಲ್ಲಿ, ಖುದ್ದು ಸ್ಥಳಕ್ಕೆ ಭೇಟಿ ನೀಡಿ ಗುಣಮಟ್ಟ ಪರಿಶೀಲಿಸಿದರು.
ತಾತ್ಕಾಲಿಕ ರಸ್ತೆ ದುರಸ್ತಿ ಕಾಮಗಾರಿಯೂ ನೂರಾರು ವಾಹನಗಳು ಓಡಾಡಿದ ಮೇಲೆ ಕಿತ್ತು ಹೋಗಿರುತ್ತದೆ. ಇದು ಆಗಬಾರದು. ಶಾಶ್ವತ ಕಾಮಗಾರಿ ಕೈಗೊಳ್ಳುವವರೆಗೆ ದುರಸ್ತಿ ಮಾಡಿದ ಕಾಮಗಾರಿಯು ಸುಸ್ಥಿತಿಯಲ್ಲಿರಬೇಕು. ಪದೇ ಪದೇ ದುರಸ್ತಿ ಮಾಡುವಂತಿರಬಾರದು. ಪದೇ ಪದೇ ಕಾಮಗಾರಿ ನಡೆಸುವುದರಿಂದ ಸರ್ಕಾರದ ಹಣ ಪೋಲಾಗುತ್ತದೆ. ಅದನ್ನು ತಡೆಯುವ ಕೆಲಸ ಆಗಬೇಕೆಂದು ಗುತ್ತಿಗೆದಾರನಿಗೆ ಸೂಚನೆ ನೀಡಿದರು.
ರಸ್ತೆಗೆ ನೆಪಕ್ಕೆ ಒಂದಿಷ್ಟು ಜಲ್ಲಿ ಚೆಲ್ಲಿ ಡಾಂಬರು ಹರಡಿ ದುರಸ್ತಿ ಮಾಡಬೇಡಿ. ಕೆಲವೆಡೆ ತಾತ್ಕಾಲಿಕ ರಸ್ತೆ ದುರಸ್ತಿ ಕಾಮಗಾರಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಡಾಂಬರು ರಸ್ತೆಯನ್ನು ಉಜ್ಜಿದರೆ ಡಾಂಬರು ಪುಡಿ, ಮಣ್ಣು ಬರುತ್ತಿದೆ. ಸಣ್ಣವಾಹನ ಓಡಾಡಿದರೂ ರಸ್ತೆ ಗುಂಡಿ ಬೀಳುವಂತಾಗಿರುತ್ತದೆ. ಹೀಗಾಗಿ ತಾತ್ಕಾಲಿಕ ರಸ್ತೆ ದುರಸ್ತಿ ಕಾಮಗಾರಿಯೂ ಶಾಶ್ವತವಾಗಿ ಉಳಿಯುವಂತಹ ಕೆಲಸ ಆಗಬೇಕೆಂದರು.ರಸ್ತೆ ನಿರ್ಮಾಣ ದ ಜೊತೆಗೆ ಚರಂಡಿಗಳ ನಿರ್ಮಾಣ ವಾಗಬೇಕು ರಸ್ತೆ ಮೇಲೆ ಬಿದ್ದ ನೀರು ಸಾರಾಗವಾಗಿ ಚರಂಡಿ ಮೂಲಕವೇ ನೀರು ಹರಿಯಬೇಕು ಆಗದಾಗ ಮಾತ್ರ ರಸ್ತೆ ದೀರ್ಘ ಬಾಳಿಕೆ ಯಿಂದ ಇರಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗೆ ದಾರರು ಗಮನ ಹರಿಸುವಂತೆ ತಿಳಿಸಿದರು.