ಸಕಲೇಶಪುರದ ಹಾಜಬ್ಬ ಇನ್ನಿಲ್ಲ
ಸಮಾಜಮುಖಿ ಸೇವೆಗೈದ ಹಲಸುಲಿಗೆ ಗ್ರಾಮದ ಅಬ್ದುಲ್ ಖಾದರ್ ನಿಧನ
ಸಕಲೇಶಪುರ :
ತಾಲೂಕಿನ ಹಲಸುಲಿಗೆ ಗ್ರಾಮದಲ್ಲಿ ಸಣ್ಣ ಕ್ಯಾಂಟೀನ್ ಇಟ್ಟು ಜೀವನ ಸಾಗಿಸುತ್ತಾ, ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ತನ್ನ ಕೈಯಲ್ಲಿ ಸಾಧ್ಯವಾದಷ್ಟು ಸೇವೆ ಸಲ್ಲಿಸುತ್ತಿದ್ದ ಅಬ್ದುಲ್ ಖಾದರ್ ಮೃತರಾಗಿದ್ದಾರೆ.
65 ವರ್ಷ ವಯಸ್ಸಿನ ಅಬ್ದುಲ್ ಖಾದರ್ ಅವರು ಹಲಸುಲಿಗೆ ಗ್ರಾಮದಲ್ಲಿ ಅಬ್ದುಲ್ ಖಾದರ್ ರವರು ಹರೆಕೆಳ ಹಾಜ್ಯಬ್ಬ ಮಾದರಿಯಲ್ಲಿ, ಗ್ರಾಮದ ಶಾಲೆಗಳಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಿಗೆ ಸೇವಾಭಾವದಿಂದ ಸಹಾಯ ಮಾಡುತ್ತಾ ಬಂದ ಅವರು, ಹಲಸುಲಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದ್ವಜಸ್ತಂಭ ಕಟ್ಟಿಕೊಟ್ಟು, ಸಾಮಾಜಿಕ ಹೊಣೆಗಾರಿಕೆ ವಹಿಸಿಕೊಳ್ಳುವ ಮೂಲಕ ಗ್ರಾಮಕ್ಕೆ ಮಾದರಿಯಾದವರು.
ಗ್ರಾಮದ ಮಕ್ಕಳಿಗೆ ಪ್ರೋತ್ಸಾಹ ನೀಡುವ ಕೆಲಸದಿಂದ ಹಿಡಿದು, ಶಾಲಾ ಸಿದ್ಧತೆಯಲ್ಲಿ ಕೈಜೋಡಿಸುವವರೆಗೆ ಅಬ್ದುಲ್ ಖಾದರ್ ಅವರ ಪಾಲ್ಗೊಳ್ಳುವಿಕೆ ಶೈಕ್ಷಣಿಕ ಕ್ಷೇತ್ರದಲ್ಲಿ ಎದ್ದು ಕಾಣುತ್ತಿತ್ತು.
ಮೃತರ ಅಗಲಿಕೆಗೆ ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ, ಗ್ರಾಮಸ್ಥರು ಮತ್ತು ಅನೇಕ ಗಣ್ಯರು ಶೋಕ ವ್ಯಕ್ತಪಡಿಸಿದ್ದು, ಅಬ್ದುಲ್ ಖಾದರ್ ಅವರ ನಿಸ್ವಾರ್ಥ ಸೇವೆಯನ್ನು ಸ್ಮರಿಸಿದ್ದಾರೆ.