ಹೇಮಾವತಿ ನದಿಯಲ್ಲಿ ಮುಳುಗಿ ಇಬ್ಬರು ಯುವಕರು ದುರ್ಮರಣ.
ಬಿಸಿಲ ದಗೆಯನ್ನು ತಣಿಸಿಕೊಳ್ಳಲು ತೆರಳಿ ಪ್ರಾಣತೆತ್ತ ದುರ್ದೈವಿಗಳು. ಮುಗಿಲು ಮುಟ್ಟಿದ್ದ ಕುಟುಂಬಸ್ಥರ ಆಕ್ರಂದನ.
ಸಕಲೇಶಪುರ: ತಾಲ್ಲೂಕಿನ ಹೆನ್ನಲಿ ಸಮೀಪದ ಹೇಮಾವತಿ ನದಿಯಲ್ಲಿ ಮುಳುಗಿ ಇಬ್ಬರು ಮೃತಪಟ್ಟಿದ್ದು ಅಗ್ನಿಶಾಮಕ ಸಿಬ್ಬಂದಿ ಶವವನ್ನು ಹೊರ ತೆಗೆದಿದ್ದಾರೆ.
ತಾಲ್ಲೂಕಿನ ಕಾಟೇಹಳ್ಳಿ ಗ್ರಾಮದ ಭರತ್ (28) ಹಾಗೂ ಪ್ರಕಾಶ್ (30) ಮೃತರು. ಶನಿವಾರ ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಕುಟುಂಬದ ಏಳು ಜನರು ಹೇಮಾವತಿ ನದಿ ತೀರಕ್ಕೆ ಬಂದಿದ್ದರು. ಎತ್ತಿನಹೊಳೆ ಯೋಜನೆಯ ಪೈಪ್ ಲೈನ್ ಹಾದು ಹೋಗಿರುವ ಸ್ಥಳದ ಸಮೀಪ ಹೇಮಾವತಿ ನದಿಯಲ್ಲಿ ಮುಳುಗಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದುಬರಬೇಕಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಪಟ್ಟಣದ ಸಾರ್ವಜನಿಕ ಕ್ರಾಫರ್ಡ್ ಆಸ್ಪತ್ರೆಗೆ ಸಾಗಿಸಲಾಗಿದೆ.