ಮೈದಾನದಲ್ಲಿ ಆಟ ಹಾಡಲು ಬಿಡದ ಹಿನ್ನೆಲೆ ಶಾಲಾ ಕೊಠಡಿಗೆ ಬೆಂಕಿ ಇಟ್ಟ ಪುಂಡರು.
ದುಷ್ಕೃತ್ಯ ನಡೆಸಿದ ಪುಂಡರ ಎಡೆಮುರಿ ಕಟ್ಟಲು ಗ್ರಾಮಸ್ಥರ ಆಗ್ರಹ.
ಸಕಲೇಶಪುರ : ಸಂಜೆ ವೇಳೆ ಶಾಲಾ ಮೈದಾನದಲ್ಲಿ ಆಟವಾಡಲು ಬಿಡದಿದ್ದಕ್ಕೆ ಪುಂಡರ ಗುಂಪೊಂದು ಶಾಲೆಗೆ ಬೆಂಕಿಯಿಟ್ಟಿರುವ ಘಟನೆ ಕಳೆದ ರಾತ್ರಿ ನಡೆದಿದೆ.
ತಾಲೂಕಿನ ಬೆಳಗೋಡು ಹೋಬಳಿ ಕುನಿಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀಚನಹಳ್ಳಿಯಲ್ಲಿ ಈ ದುಷ್ಕೃತ್ಯ ನಡೆದಿದೆ.
ಕಿರುಹುಣಸೆ, ನೀಚನಹಳ್ಳಿಯಲ್ಲಿರುವ ಕಿರಿಯ ಪ್ರಾಥಮಿಕ ಶಾಲೆಯ ಬೆಂಕಿ ಹಾಕಿ ಪುಂಡರು ಪರಾರಿಯಾಗಿದ್ದಾರೆ. ಶಾಲೆಯ ಆವರಣ ಸ್ವಚ್ಛವಾಗಿಡಲು ಶಾಲಾ ಆಡಳಿತ ಮಂಡಳಿ ಹಾಗೂ ಎಸ್.ಡಿ.ಎಮ್.ಸಿ ಸದಸ್ಯರು ಶಾಲೆಯ ಸುತ್ತಲೂ ತಂತಿ ಮೇಲೆ ನಿರ್ಮಾಣ ಮಾಡಿದ್ದರು ಅದನ್ನು ಸಹ ಕೆಲ ದಿನಗಳ ಹಿಂದೆ ಕಿತ್ತುಹಾಕಿದ್ದು. ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುವ ಶಿಕ್ಷಕರ ಮೇಲೆ ಈ ಹಿಂದೆ ಹಲ್ಲೆಗೂ ಸಹ ಪುಂಡರು ಮುಂದಾಗಿದ್ದರು ಎಂದು ತಿಳಿದು ಬಂದಿದೆ. ಇಷ್ಟಕ್ಕೆ ನಿಲ್ಲದ ಪುಂಡರ ಹಾವಳಿ ಶಾಲೆಗೆ ಕೆಟ್ಟ ಹೆಸರು ತರಲು ಶಾಲಾ ಕೊಠಡಿ ಬಳಿ ಕಾಂಡೊಮ್ ಗಳನ್ನು ಎಸೆದು ಹೀನ ಕೃತ್ಯ ಎಸಗಿದ್ದಾರೆ. ಈ ಎಲ್ಲ ಘಟನೆಗಳ ಕುರಿತಂತೆ ಈ ಹಿಂದೆ ಎಂಟು ಜನ ಪುಂಡರ ಮೇಲೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕಣ ದಾಖಲಿಸಿದ್ದರು ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಪುನಃ ದುರ್ಘಟನೆ ನಡೆಯಲು ಕಾರಣವಾಗಿದೆ ಎಂದು ಸ್ಥಳೀಯರು ಆರಂಭಿಸಿದ್ದಾರೆ. ಪುಂಡರ ವಿರುದ್ಧ ದೂರು ನೀಡಲು ಮುಂದಾದರೆ ಅವರ ಮೇಲೆ ವೈಶ್ಯಮ್ಯ ಸಾಧಿಸಿ ಹಲ್ಲೆ ನೆಡೆಸುತ್ತಾರೆ ದೂರಿದ್ದಾರೆ.
ಶಾಲಾ ಕೊಠಡಿಗೆ ಬೆಂಕಿಯಿಟ್ಟ ಹಿನ್ನಲೆಯಲ್ಲಿ ಗ್ರಾಮಸ್ಥರು ಹಾಗೂ ಶಾಲಾ ಆಡಳಿತ ಮಂಡಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಪ್ರಕರಣ ದಾಖಲಿಸಿದ್ದು ಪೊಲೀಸರು ಕ್ರಮ ಕೈಗೊಳ್ಳುತ್ತಾರೆಯೇ..? ಎಂದು ಕಾದು ನೋಡಬೇಕಿದೆ. ಮತ್ತೊಮ್ಮೆ ಪೊಲೀಸರು ನಿರ್ಲಕ್ಷ ವಹಿಸಿದರೆ ಬೃಹತ್ ಪ್ರತಿಭಟನೆ ಅನಿವಾರ್ಯವಾಗಲಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.