Saturday, April 5, 2025
Homeಸುದ್ದಿಗಳುಸಕಲೇಶಪುರದೇಖ್ಲಾ ಗ್ರಾಮದಲ್ಲಿ ಅಕ್ರಮ ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ರಾಮದೂತ ಹಿಂದೂ ಮಹಾಗಣಪತಿ ಸಮಿತಿ...

ದೇಖ್ಲಾ ಗ್ರಾಮದಲ್ಲಿ ಅಕ್ರಮ ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ರಾಮದೂತ ಹಿಂದೂ ಮಹಾಗಣಪತಿ ಸಮಿತಿ ವತಿಯಿಂದ ಮನವಿ

ದೇಖ್ಲಾ ಗ್ರಾಮದಲ್ಲಿ ಅಕ್ರಮ ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ರಾಮದೂತ ಹಿಂದೂ ಮಹಾಗಣಪತಿ ಸಮಿತಿ ವತಿಯಿಂದ ಮನವಿ 

   ಸಕಲೇಶಪುರ : ದೇಖ್ಲಾ ಗ್ರಾಮದಲ್ಲಿ ಅಕ್ರಮವಾಗಿ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿರುವವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ರಾಮದೂತ ಹಿಂದೂ ಮಹಾಗಣಪತಿ ಸಮಿತಿ ವತಿಯಿಂದ ತಹಶೀಲ್ದಾರ್ ಅರವಿಂದ್‌ರವರಿಗೆ ಮನವಿ ಸಲ್ಲಿಸಲಾಯಿತು.

  ಪಟ್ಟಣದ ಮಿನಿವಿಧಾನಸೌಧದಲ್ಲಿ ಸಂಘಟನೆ ವತಿಯಿಂದ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಿದ ನಂತರ ಹಿಂದೂ ಮುಖಂಡ ರಘು ಮಾತನಾಡಿ ತಾಲ್ಲೂಕಿನ ಕಸಬಾ ಹೋಬಳಿ ದೇಖ್ಲಾ ಗ್ರಾಮದ ಸರ್ವೆ ನಂ 196ನಲ್ಲಿ ಸುಮಾರು 224 ಎಕರೆ ಸರ್ಕಾರಿ ಜಾಗವಿದ್ದು ಇದರಲ್ಲಿ ಸುಮಾರು 20 ಎಕರೆ ಜಾಗವನ್ನು ಮಾಜಿ ಸೈನಿಕರಿಗೆ ಮೀಸಲಿಡಲು ಗುರುತಿಸಲಾಗಿದೆ. ಆದರೆ ಹೊರಗಿನಿಂದ ಬಂದ ಕೆಲವರು ಇಲ್ಲಿ ಇದ್ದ ಅರಣ್ಯವನ್ನು ನಾಶಪಡಿಸಿ ಅಕ್ರಮವಾಗಿ ಸರ್ಕಾರಿ ಜಾಗವನ್ನು ಕಬಳಿಸಲು ಮುಂದಾಗಿದ್ದಾರೆ. ಮಾಜಿ ಸೈನಿಕರಿಗಾಗಿ ಮೀಸಲಿಟ್ಟಿರುವ ಜಾಗವನ್ನು ಸಹ ಕೆಲವರು ಕಬಳಿಸಲು ಮುಂದಾಗಿದ್ದಾರೆ. ದೇಖ್ಲಾ ಗ್ರಾಮದಲ್ಲಿ ಅನೇಕ ನಕಲಿ ಮತ್ತು ಪರವಾನಿಗೆ ಇಲ್ಲದ ಬಂದೂಕು, ಪಿಸ್ತೂಲು ನಾಡ ಬಂದೂಕು, ವಿದೇಶಿ ಪಿಸ್ತೂಲುಗಳು ಇದ್ದು ಕಾಡು ಪ್ರಾಣಿ ಬೇಟೆ, ವನ್ಯಮೃಗಗಳ ಬೇಟೆ ಎಗ್ಗಿಲ್ಲದೆ ಸುತ್ತ ಮುತ್ತ ನಡಿಯುತಿದ್ದು ಈ ಬಗ್ಗೆ ಮಾಹಿತಿ ದೂರು ನೀಡಿದಲ್ಲಿ ಸ್ಥಳೀಯರಿಗೆ ಬೆದರಿಸುತ್ತ ಬೆದರಿಕೆ ಹಾಕಿ ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ. ಇದೇ ಗ್ರಾಮದ ಸಾನ್ ಎಂಬುವವನು ಹಾಡುಹಗಲೇ ಎಮ್ಮೆಗೆ ಶೂಟೌಟ್ ಮಾಡಿ ಕೊಂದು ಮಾಂಸವನ್ನು ಕೇರಳಕ್ಕೆ ಸಾಗಿಸಲು ವ್ಯವಸ್ಥೆ ಮಾಡಿಕೊಂಡು ಸಿಕ್ಕಿ ಬಿದ್ದಿದ್ದು ಈ ಬಗ್ಗೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊಕದ್ದಮ್ಮೆ ದಾಖಲಾಗಿದೆ.ಈ ಮೇಲ್ಕಂಡ ವಿಷಯದ ಬಗ್ಗೆ ಸ್ಥಳಪರಿಶೀಲನೆ ಮಾಡಿ ವರದಿ ಪಡೆದು ಒತ್ತುವರಿ ಮಾಡಿರುವವರನ್ನು ತೆರವುಗೊಳಿಸಬೇಕು ಇಲ್ಲದಿದ್ದಲ್ಲಿ ನೂರಾರು ಕಾರ್ಯಕರ್ತರು ಸ್ಥಳಕ್ಕೆ ನುಗ್ಗಿ ನಾವು ಸಹ ಒತ್ತುವರಿ ಮಾಡಬೇಕಾಗುತ್ತದೆ ಎಂದಿದ್ದಾರೆ.

 ಈ ಸಂಧರ್ಭದಲ್ಲಿ ರಾಮದೂತ ಹಿಂದೂ ಮಹಾಗಣಪತಿ ಸಮಿತಿ ಅಧ್ಯಕ್ಷ ಪ್ರದೀಪ್ ಪೂಜಾರಿ, ಮಂಜುನಾಥ ಕಬ್ಬಿನಗದ್ದೆ, ಗಿರೀಶ್ ಮಾರನಹಳ್ಳಿ, ವಿಜಿತ್, ರವಿ ಹೆಬ್ಬಸಾಲೆ, ವೀರೇಶ್, ಶಿವೂ ಜಿಪ್ಪಿ ,ದೀಪಕ್ ಹರೀಶ್ ಗೌಡ , ಸುರೇಂದ್ರ ಇತರರು ಮನವಿ ಕೊಡುವುದರಲ್ಲಿ ಭಾಗಿಯಾಗಿದ್ದರು.

RELATED ARTICLES
- Advertisment -spot_img

Most Popular