ಅಪರಿಚಿತ ವಾಹನ ಪಾದಚಾರಿಗೆ ಡಿಕ್ಕಿ : ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿ ಗುರುತು ಪತ್ತೆಗೆ ಮನವಿ.
ಸಕಲೇಶಪುರ :ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನೆಡೆದಿದೆ.
ತಾಲೂಕಿನ ಬಾಗೆ ಗ್ರಾಮದ ಬಳಿ ಇಂದು ಮುಂಜಾನೆ ಅಪಘಾತ ನೆಡೆದಿದ್ದು. ಗಾಯಗೊಂಡಿರುವ ವ್ಯಕ್ತಯ ಗುರುತು ಪತ್ತಯಾಗಿಲ್ಲ. ವಾಹನ ಡಿಕ್ಕಯಾಗಿ ವ್ಯಕ್ತಿಯು ರಸ್ತೆ ಬದಿಯಲ್ಲಿ ಬಿದಿದ್ದನ್ನು ಕಂಡ ಸ್ಥಳೀಯರು ಆಂಬುಲೆನ್ಸ್ ಮಾಲೀಕ ಬಾಗೆ ಗ್ರಾಮದ ಪ್ರತಾಪ್ ಅವರ ನೆರವಿನಿಂದ ತಾಲೂಕು ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿ ಅಪರಿಚಿತನಾಗಿದ್ದು ಪತ್ತೆಗೆ ಪೊಲೀಸರು ಮನವಿ ಮಾಡಿದ್ದಾರೆ. ಸಕಲೇಶಪುರ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನೆಡೆದಿದೆ.