Saturday, February 22, 2025
Homeಸುದ್ದಿಗಳುಬೆಂಬಳೆ ಗ್ರಾಮದಲ್ಲಿ ಕಾಲುಸಂಕ ನಿರ್ಮಾಣಕ್ಕೆ ಶಾಸಕ ಸಿಮೆಂಟ್ ಮಂಜು ಭೂಮಿ ಪೂಜೆ

ಬೆಂಬಳೆ ಗ್ರಾಮದಲ್ಲಿ ಕಾಲುಸಂಕ ನಿರ್ಮಾಣಕ್ಕೆ ಶಾಸಕ ಸಿಮೆಂಟ್ ಮಂಜು ಭೂಮಿ ಪೂಜೆ

ಬೆಂಬಳೆ ಗ್ರಾಮದಲ್ಲಿ ಕಾಲುಸಂಕ ನಿರ್ಮಾಣಕ್ಕೆ ಶಾಸಕ ಸಿಮೆಂಟ್ ಮಂಜು ಭೂಮಿ ಪೂಜೆ

ಸಕಲೇಶಪುರ: ಮಲೆನಾಡು ಭಾಗಗಳಲ್ಲಿ ಹಳ್ಳ-ಕೊಳ್ಳಗಳನ್ನು ದಾಟಲು ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಲುಸಂಕಗಳನ್ನು ನಿರ್ಮಾಣ ಮಾಡಲಾಗವುದು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಬುಧುವಾರ ತಾಲೂಕಿನ ಹೆಬ್ಬಸಾಲೆ ಗ್ರಾಪಂ ವ್ಯಾಪ್ತಿಯ ಬೆಂಬಳೆ ಗ್ರಾಮದಲ್ಲಿ ಕುಂಬರಡಿಯಿAದ ಕಲ್ಲರಳ್ಳಿ ಗ್ರಾಮಕ್ಕೆ ಸಂರ್ಪಕಿಸುವ ನೂತನ ಕಾಲುಸಂಕ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೇರವೆರಿಸಿ ಮಾತನಾಡಿದರು.ಕಾಲುಸಂಕದ ಕೊರತೆಯಿಂದ ಈ ಹಿಂದೆ ಈ ಭಾಗದ ಜನರು 8 ಕಿ,ಮೀ ಸುತ್ತಾಡಿಕೊಂಡು ಸಂಚಾರಿಬೇಕಾದ ಅನಿವಾರ್ಯಯತೆ ಇತ್ತು ಇದೀಗ ನೂತನ ಕಾಲುಸಂಕ ನಿರ್ಮಾಣದಿಂದ ರೈತರು,ಬೆಳೆಗಾರರು,ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.ಗ್ರಾಮಸ್ಥರು ಹಲವಾರು ವರ್ಷಗಳಿಂದ ಕಿರು ಸೇತುವೆಗೆ ಬೇಡಿಕೆ ಇಟ್ಟಿದ್ದರು ಹಾಗಾಗಿ ಸುಮಾರು 20 ಲಕ್ಷ ವೆಚ್ಚದಲ್ಲಿ ಕಿರು ಸೇತುವೆ ನಿರ್ಮಾಣ ಮಾಡಲಾಗುತ್ತಿದೆ.ಶಾಲಾ ಮಕ್ಕಳು ಮನೆಗೆ ತೆರಳಲು ಮಳೆಗಾಲದ ಸಂದರ್ಭದಲ್ಲಿ ತೀವ್ರ ಸಮಸ್ಯೆ ಎದುರಾಗುತ್ತಿರುವುದನ್ನು ಕಂಡು ಕಾಲು ಸಂಕ ನಿರ್ಮಾಣ ಮಾಡಿಕೊದುವ ಭರವಸೆಯಂತೆ ಕಾಮಗಾರಿಗೆ ಚಾಲನೆ ನೀಡಲಾಗಿದ್ದು ಶೀಘ್ರದಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಹೇಳಿದರು.ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಅವಶ್ಯ ಇರುವ ಕಡೆಗಳಲ್ಲಿ ಸಂಪರ್ಕ ರಹಿತ ಹಳ್ಳಿಗಳಿಗೆ ಕಾಲುಸಂಕ ನಿರ್ಮಾಣ ಮಾಡಲು ಸೂಕ್ತ ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ನೀಡಲಾಗುವುದು ಎಂದು ತಿಳಿಸಿದರು.

ಗ್ರಾಮದ ಮುಖಂಡ ಮೇಘರಾಜ್ ಮಾತನಾಡಿ,ನೂತನ ಕಾಲುಸಂಕ ನಿರ್ಮಾಣದಿಂದ ವಿಧ್ಯಾರ್ಥಿಗಳಿಗೆ ,ಸಾರ್ವಜನಿಕರಿಗೆ ಬಹಳ ಹಾಗೂ ರೈತರು ಬೆಳೆಗಾರರಿಗೆ ಭತ್ತ,ಕಾಫಿ ಹಣ್ಣು ಸಾಗಿಸಲು ಅನುಕೂಲವಾಗಲಿದೆ.ಈ ಭಾಗದಲ್ಲಿ ಒಂಟಿ ಮನೆಗಳಿಗೆ ಹಲವು ಕುಗ್ರಾಮಗಳಿವೆ ತುರ್ತುಗಿ ತೆರಳಲು ಪ್ರಯೋಜನವಾಗಲಿದೆ ಭರವಸೆಯಂತೆ ನುಡಿದಂತೆ ನಡೆದ ಶಾಸಕ ಸಿಮೆಂಟ್ ಮಂಜುರವರಿಗೆ ಗ್ರಾಮಸ್ಥರ ಪರವಾಗಿ ದನ್ಯವಾದ ತಿಳಿಸುತ್ತವೆ ಎಂದರು.

ಈ ಸಂಧರ್ಭದಲ್ಲಿ  ಗ್ರಾಮ ಅಧ್ಯಕ್ಷ ನೇತ್ರಾವತಿ ಮಂಜುನಾಥ್, ಉಪಾಧ್ಯಕ್ಷರು ದಯಾನಂದ, ಗ್ರಾಪಂ ಸದಸ್ಯ ಭಾಗ್ಯ, ಮಂಜುನಾಥ್,ತಾಲೂಕು ಬಿಜೆಪಿ ಅಧ್ಯಕ್ಷ ವಳಲಹಳ್ಳಿ ಅಶ್ವಥ್, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಗ್ನಿ ಸೋಮಶೇಖರ್,

ಮುಖಂಡರು,ರಾಜ್ ಕುಮಾರ್ ಮೇಘರಾಜ್, ವಿಜಿತ್, ಯುವರಾಜ್ ನಡಹಳ್ಳಿ,ವಿಕ್ರಂ ವಿನಯ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -spot_img

Most Popular