ಮೇಯಲು ತೆರಳಿದ್ದ ಹಸುವಿನ ಮೇಲೆ ಕ್ರೌರ್ಯ ಮೆರೆದ ಕಿಡಿಗೇಡಿಗಳು
ಮನಸೋ ಇಚ್ಛೆ ಹಸುವನ್ನು ಕಡಿದ ಪಾಪಿಗಳು
ಸಕಲೇಶಪುರ : ಮೇಯರು ತೆರಳಿದ್ದ ಹಸುವಿನ ಮೇಲೆ ಕಿಡಿಗೇಡಿಗಳು ಮನಸ್ಸು ಇಚ್ಛೆ ಕಡಿದು ಹಾಕಿರುವ ಘಟನೆ ನಡೆದಿದೆ.
ತಾಲೂಕಿನ ಅರೆಕೆರೆ ಗ್ರಾಮದ ನವೀನ್ ಎಂಬುವರಿಗೆ ಸೇರಿದ ಹಸುವಿನ ಬೆನ್ನು, ತೊಡೆ ಭಾಗ ಹಾಗೂ ಬಾಲವನ್ನು ಕಡಿದು ಹಾಕಿರುವ ಘಟನೆ ನೆಡೆದಿದೆ. ನವೀನ್ ಅವರ ಮನೆಯಿಂದ ಸ್ವಲ್ಪ ದೂರದಲ್ಲಿರುವ ತೋಟಕ್ಕೆ ಮೇಯಲು ತೆರಳಿದ್ದ ವೇಳೆ ಘಟನೆ ನೆಡೆದಿದೆ. ಕಡಿತದಿಂದ ತೀವ್ರ ರಕ್ತಸ್ರವಾದಿಂದ ತೆವಳುತ್ತ ತನ್ನ ಮಾಲೀಕನ ಮನೆಗೆ ಬರುವಾಗ ಮಾಲೀಕರು ನೋಡಿ ತಕ್ಷಣವೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಸಂಭಂದ ಹಸುವಿನ ಮಾಲೀಕರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ನಿರ್ಧರಿಸಿದ್ದಾರೆ.