ಪಿಡಿಒ ಆಸಕ್ತಿ ಗ್ರಾಮ ಪಂಚಾಯಿತಿಗೆ ಸೇರಿದ 10 ಕೋಟಿ ರೂ ಮೌಲ್ಯದ ಜಾಗ
ಸಕಲೇಶಪುರ : ಖಾಸಗಿ ವ್ಯಕ್ತಿಯೊಬ್ಬರ ವಶದಲ್ಲಿದ್ದ ಸುಮಾರು 10 ಕೋಟಿ ರೂ ಮೌಲ್ಯದ ಜಾಗ ಆನೆ ಮಹಲ್ ಗ್ರಾಮ ಪಂಚಾಯಿತಿ ಪಿಡಿಒ ವೇಣುಗೋಪಾಲ್ ರವರ ಕಾಳಜಿಯಿಂದ ಪುನಹ ಪಂಚಾಯತಿಗೆ ಸೇರಿದೆ. ಕೆಂಪೇಗೌಡ ಪ್ರತಿಮೆ ಹಿಂಭಾಗದಲ್ಲಿದ್ದ ಸರ್ವಿಸ್ ಸ್ಟೇಷನ್ ಹಾಗೂ ವೇ ಬ್ರಿಡ್ಜ್ ಇದೀಗ ಗ್ರಾಮ ಪಂಚಾಯತಿಗೆ ಸೇರುತ್ತಿದೆ. ಈ ಹಿಂದೆ ವಿನಯ್ ಎಂಬುವರು ಸೈಟ್ ಗಳನ್ನು ಮಾಡಿದಾಗ ಸದರಿ ಜಾಗ ಸಿ.ಎ ಸೈಟಾಗಿದ್ದು ಇದರಲ್ಲಿ ಖಾಸಗಿ ವ್ಯಕ್ತಿಯೊರ್ವರು ಸರ್ವಿಸ್ ಸ್ಟೇಷನ್ ಹಾಗೂ ವೇ ಬ್ರಿಡ್ಜ್ ಮಾಡಿಕೊಂಡಿದ್ದರು. ಪಿಡಿಓ ವೇಣುಗೋಪಾಲ್ ಎಲ್ಲಾ ದಾಖಲಾತಿಗಳನ್ನು ತೆಗೆಸಿ ಕೋಟ್ಯಾಂತರ ರೂ ಮೌಲ್ಯದ ಆಸ್ತಿಯನ್ನು ಪಂಚಾಯಿತಿಯ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂದರ್ಭದಲ್ಲಿ ಆನೆಮಹಲ್ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಹೈರ ಸಲೀಂ, ಇತರ ಸದಸ್ಯರು ಹಾಜರಿದ್ದರು. ಪಿಡಿಒ ಸಾಮಾಜಿಕ ಕಾಲಗೆ ವಾಸ್ತವ ನ್ಯೂಸ್ ಅಭಿನಂದನೆಗಳನ್ನು ಸಲ್ಲಿಸುತ್ತಿದೆ