ಪೊಲೀಸರ ಲಾಠಿ ತಾಗಿ ಹೋರಾಟಗಾರ ಮಂಜುನಾಥ್ ಕಣ್ಣಿಗೆ ಗಾಯ.
ಸಕಲೇಶಪುರ : ವೀರ ಮರಣವನ್ನಪ್ಪಿದ ಅರ್ಜುನನ ಅಂತ್ಯಸಂಸ್ಕಾರಕ್ಕೆ ತೆರಳಿದ್ದ ಕಾಡಾನೆ ಹಾವಳಿ ಸಂತ್ರಸ್ಥರ ಹೋರಾಟ ಸಮಿತಿಯ ಮುಖಂಡ ಯಡೇಹಳ್ಳಿ ಮಂಜುನಾಥ್ ರವರ ಕಣ್ಣಿಗೆ ಪೊಲೀಸರ ಲಾಠಿ ತಾಗಿ ಗಂಭೀರವಾಗಿ ಗಾಯವಾಗಿ ಘಟನೆ ನಡೆದಿದೆ.
ಪ್ರತಿಭಟನೆಕಾರರು ಹಾಗೂ ಪೊಲೀಸರ ನಡುವೆ ನಡೆದ ತಳ್ಳಾಟದಲ್ಲಿ ವೃತ ನಿರೀಕ್ಷಕ ನಿರಂಜನ್ ಕುಮಾರ್ ಅವರ ಲಾಠಿ ಮಂಜುನಾಥ್ ರವರ ಕಣ್ಣಿಗೆ ಬಡಿದಿದೆ. ಇದರಿಂದ ಕಣ್ಣಿನ ಲೆನ್ಸ್ ಭಾಗಕ್ಕೆ ಶೇ 20 ರಷ್ಟು ಹಾನಿಯಾಗಿದ್ದು ಪರೀಕ್ಷೆ ನಡೆಸಿದ ವೈದ್ಯರು ತಿಳಿಸಿದ್ದು ಕಣ್ಣಿಗೆ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಹೋರಾಟಗಾರರ ದೌರ್ಜನ್ಯವನ್ನು ಹಲವರು ಖಂಡಿಸಿದ್ದು ಪೊಲೀಸರು ಮಾನವೀಯತೆ ಮರೆತು ವರ್ತಿಸಿದ್ದಾರೆ ಎಂದು ಆಕ್ರೋಶ ಅವರ ಹಾಕಿದ್ದಾರೆ.