ಆರು ತಿಂಗಳ ನಂತರ ಪುನಃ ಹುಡುಕಿಕೊಂಡು ಬಂದು ಮನೆಯ ಕಿಟಕಿ ಗಾಜು ಒಡೆದ ಕಾಡಾನೆ.
ಸೆರೆಹಿಡಿದು ಮಲೆ ಮಾದೇಶ್ವರ ಬೆಟ್ಟಕ್ಕೆ ಬಿಟ್ಟು ಬಂದಿದ್ದರು ವಾಪಸ್ ಬಂದು ಮನೆಯ ಮೇಲೆ ದಾಳಿ ನಡೆಸಿದ ಮಕ್ನ.
ಉದೇವಾರ ಸಮೀಪದ ಕೆಸಗುಲಿ ಗ್ರಾಮದಲ್ಲಿ ಘಟನೆ.
ಸಕಲೇಶಪುರ :- ಕಳೆದ ಆರು ತಿಂಗಳ ಹಿಂದೆ ಸಕಲೇಶಪುರ ತಾಲೂಕಿನ ಉದೇವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಸಗುಲಿ ಗ್ರಾಮದ ಗಿರೀಶ್ ಎಂಬುವರ ಮನೆ ಮೇಲೆ ಕಾಡಾನೆ ಎಂದು ದಾಳಿ ನಡೆಸಿತ್ತು.
ಈ ರೀತಿ ಮನೆ ನುಗ್ಗುವ ಕಾಡಾನೆಯನ್ನು ಅರಣ್ಯ ಇಲಾಖೆ ಗುರುತಿಸಿ ಸೆರೆ ಹಿಡಿದು ಮಲೆಮಾದೇಶ್ವರ ಬೆಟ್ಟದ ಕಾಡಿಗೆ ಬಿಟ್ಟಿದ್ದರು. ಆದರೂ ಕಳೆದ ಒಂದು ತಿಂಗಳ ಹಿಂದೆ ಕಾಡಿನಿಂದ ಮತ್ತೆ ಸಕಲೇಶಪುರಕ್ಕೆ ಬಂದಿದ್ದ ಕಾಡಾನೆಯು ಕಳೆದ ರಾತ್ರಿ ಆರು ತಿಂಗಳ ಹಿಂದೆ ದಾಳಿ ನಡೆಸಿದ ಮನೆಯ ಮೇಲೆ ಪುನಃ ದಾಳಿ ಮಾಡಿ ಮನೆಯ ಎಲ್ಲ ಕಿಟಕಿಗಳ ಗಾಜುಗಳನ್ನು ಪುಡಿ ಮಾಡಿದೆ.
ಸಹಜವಾಗಿ ಇದರಿಂದ ಮನೆಯವರು ಆತಂಕ ಒಳಗಾಗಿದ್ದು ಗ್ರಾಮದಲ್ಲಿ ಬೇರೆ ಯಾರ ಮನೆಗೂ ಹೋಗದ ಕಾಡಾನೆ ನಮ್ಮ ಮನೆಯ ಮೇಲೆ ಏಕೆ ದಾಳಿ ಮಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ವಿಷಯ ತಿಳಿದ ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ರಾತ್ರಿ ಮೂರು ಗಂಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.