Saturday, April 19, 2025
Homeಸುದ್ದಿಗಳುಸಕಲೇಶಪುರಕಾಂಗ್ರೆಸ್ ಮುಖಂಡ ಮುರುಳಿ ಮೋಹನ್ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ.

ಕಾಂಗ್ರೆಸ್ ಮುಖಂಡ ಮುರುಳಿ ಮೋಹನ್ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ.

ಕಾಂಗ್ರೆಸ್ ಮುಖಂಡ ಮುರುಳಿ ಮೋಹನ್ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ.

ಶಾಸಕ ಸಿಮೆಂಟ್ ಮಂಜು ಬಗ್ಗೆ ಹಗುರವಾಗಿ ಮಾತನಾಡದಂತೆ ಎಚ್ಚರಿಕೆ ನೀಡಿದ ಕಾರ್ಯಕರ್ತ ರಘು ಗೌಡ 

 

ಸಕಲೇಶಪುರ : ಕಾಂಗ್ರೆಸ್ ಮುಖಂಡ ಮುರುಳಿ ಮೋಹನ್ ರವರು ಶಾಸಕ ಸಿಮೆಂಟ್ ಮಂಜು ಬಗ್ಗೆ ಹಗುರವಾಗಿ ಮಾತನಾಡದಂತೆ ಬಿಜೆಪಿ ಕಾರ್ಯಕರ್ತ ರಘು ಗೌಡ ಎಚ್ಚರಿಕೆ ನೀಡಿದ್ದಾರೆ.

ರಘು ಬರೆದಿರುವ ಪತ್ರದ ಸಾರಾಂಶ ಈ ಕೆಳಕಂಡಂತಿದೆ.

ಮಾನ್ಯ ಮುರುಳಿ ಮೋಹನ್ ರವರೆ ತಾವು ಮೊನ್ನೆ ಈ ಕ್ಷೇತ್ರದ ಖಾಸಗಿ ನಿಮ್ಮ ಸಭೆಯಲ್ಲಿ ಮಾತನಾಡುವಾಗ ನಮ್ಮ ಕ್ಷೇತ್ರದ ಜನಪ್ರಿಯ ಯುವ ನಾಯಕರಾದ ಶ್ರೀಯುತ ಸಿಮೆಂಟ್ ಮಂಜುನಾಥ್ ರವರ ಬಗ್ಗೆ ಕಮಿಷನ್ ಆರೋಪ ಮಾಡಿರುತ್ತೀರಿ, ಆದರೆ ನಿಮಗೂ ಹಾಗೂ ಸಕಲೇಶಪುರಕ್ಕೂ ಇರುವ ಸಂಬಂಧವಾದರೂ ಏನು ಮತ್ತು ನೀವು ಬಂದಿರುವುದು ಸಕಲೇಶಪುರದ ಹಿರಿಯ ಕಾಂಗ್ರೆಸ್ ಕಾರ್ಯಕರ್ತರನ್ನ ಮೂಲೆಗುಂಪು ಮಾಡಿ, ಒಡೆದು ಆಳುವ ನೀತಿಯನ್ನು ಅನುಸರಿಸಿಕೊಂಡು ತಮ್ಮದೇ ಪಟಲ್ಲಂ ಕಟ್ಟಿಕೊಂಡು ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿ ಇಲ್ಲಿರುವ ಪ್ರಾಮಾಣಿಕ ಅಧಿಕಾರಿಗಳನ್ನು, ವರ್ಗಾವಣೆ ಮಾಡುವ ಬೆದರಿಕೆ ಹುಟ್ಟಿಸುತ್ತಿರುವವರು ನೀವು, ಆದರೆ ಈ ಕ್ಷೇತ್ರದಲ್ಲಿ ಪ್ರತಿನಿತ್ಯ ಜನರ ಕಷ್ಟ ಕಾರ್ಪಣ್ಯಗಳಲ್ಲಿ ಮುಂದೆ ನಿಂತು ಎಲ್ಲರೊಳಗೆ ಒಬ್ಬರಾಗಿ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಕೆಲಸ ನಿರ್ವಹಿಸುತ್ತಿರುವ ಮಾನ್ಯ ಶಾಸಕರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಖಂಡಿಸುತ್ತೇನೆ ,ಮತ್ತು ಈ ವಿಚಾರವಾಗಿ ತಾವು ಬಹಿರಂಗ ಕ್ಷಮೆ ಯಾಚಿಸಬೇಕು  ಒಂದು ವೇಳೆ ಮುಂದೆ ಇದೇ ರೀತಿ ನಾಲಿಗೆ ಹರಿಬಿಟ್ಟರೆ ತಕ್ಕ ಉತ್ತರ ಕೊಡಬೇಕಾಗುತದೆ, ಈಗಾಗಲೇ ಈ ಕ್ಷೇತ್ರದ ಜನ ನಿಮ್ಮನ್ನ ಮೂರನೇ ಸ್ಥಾನಕ್ಕೆ ಕಳಿಸಿದ್ದಾರೆ, ನೀವು ಆರೋಪ ಮಾಡಿರುವ ಶಾಸಕರ ಹಿನ್ನೆಲೆಯನೊಮ್ಮೆ ಪುನರ್ ಪರಿಶೀಲಿಸಿ, ಸಾಮಾನ್ಯ ಕುಟುಂಬದಲ್ಲಿ ಜನಿಸಿರುವ .. ಸಿಮೆಂಟ್ ಮಂಜು ಯಾರು, ನಿಮ್ಮ ಸ್ಥಾನಮಾನ ಏನು ಎಂಬುದನ್ನು ಸರಿಯಾಗಿ ಅರ್ಥೈಸಿಕೊಂಡು ಜನರ ಮಧ್ಯ ನಿಂತು ವಿರೋಧ ಪಕ್ಷದ ಕೆಲಸವನ್ನು ಮಾತ್ರ ಮಾಡಿ ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಈ ಕ್ಷೇತ್ರದ ಜನ ತಕ್ಕ ಉತ್ತರ ಕೊಡುತ್ತಾರೆ

ಎಂದು ವಾಸ್ತವ ನ್ಯೂಸ್ ಗೆ ತಮ್ಮ ಪತ್ರದ ಮೂಲಕ ತಿಳಿಸಿದ್ದಾರೆ.

RELATED ARTICLES
- Advertisment -spot_img

Most Popular