Friday, November 22, 2024
Homeಸುದ್ದಿಗಳುಸಕಲೇಶಪುರಬೆಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮಸ್ಯೆಗಳನ್ನು ಬಗೆಹರಿಸುವಂತೆ ಶಾಸಕ ಸಿಮೆಂಟ್ ಮಂಜುನಾಥ್ ಗೆ ಮನವಿ.

ಬೆಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮಸ್ಯೆಗಳನ್ನು ಬಗೆಹರಿಸುವಂತೆ ಶಾಸಕ ಸಿಮೆಂಟ್ ಮಂಜುನಾಥ್ ಗೆ ಮನವಿ.

ಬೆಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮಸ್ಯೆಗಳನ್ನು ಬಗೆಹರಿಸುವಂತೆ ಶಾಸಕ ಸಿಮೆಂಟ್ ಮಂಜುನಾಥ್ ಗೆ ಮನವಿ.

ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮನವಿ ಸಲ್ಲಿಸಿದ ಕಾರ್ಯಕರ್ತರು.

ಹೋಬಳಿ ಅಧ್ಯಕ್ಷ ರವೀಶ್ ನೇತ್ರತ್ವದಲ್ಲಿ ಸಮಸ್ಯೆಗಳ ಮನವಿ ಸಲ್ಲಿಕೆ.

ಸಕಲೇಶಪುರ : ತಾಲೂಕಿನ ಬೆಳಗೋಡು ಹೋಬಳಿ ಬೆಳಗೋಡು ಗ್ರಾಮ ಪಂಚಾಯಿತಿ ಗ್ರಾಮ ಸಭೆ ಸೋಮವಾರ ಜರುಗಿತು. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಮೂಲ ಸೌಕರ್ಯ ಹಾಗೂ ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದು ಸಮಸ್ಯೆಗಳ ಪಟ್ಟಿಯನ್ನು ಶಾಸಕರಿಗೆ ಸಲ್ಲಿಸಿದರು.

ಪ್ರಮುಖ ಸಮಸ್ಯೆಗಳು ಈ ಕೆಳಕಂಡಂತಿವೆ

1) ಬೆಳಗೋಡಿನ ದೊಡ್ಡ ಕೆರೆಎರಿ ಕುಸಿಯುವ ಹಂತದಲ್ಲಿದೆ ಇದಕ್ಕೆ ಉತ್ತಮವಾಗಿ ದುರಸ್ತಿ ಕಾರ್ಯ ಆಗಬೇಕು.

2) ಬೆಳಗೋಡು ಹೈ ಸ್ಕೂಲ್ ಎದುರುಗಡೆ ಎತ್ತಿನಹೊಳೆ ಚಾನಲ್ಲೆ ತಡೆಗೋಡೆ ನಿರ್ಮಾಣ .

3) ಬೆಳಗೋಡು ಹೈ ಸ್ಕೂಲ್ ಹತ್ತಿರ ಇರುವ 40 ಮನೆಗಳಿಗೆ ಶುದ್ದಕುಡಿಯುವ ನೀರಿನ ಸಮಸ್ಯೆ ಬಗ್ಗೆಹರಿಸುವಿಕೆ.

4) ಬೆಳಗೋಡು ಹೋಬಳಿಯ ಹೆಬ್ಬನಹಳ್ಳಿ ಗ್ರಾಮದ ಸರ್ವೆ ನಂಬರ್ 210 ರಲ್ಲಿ 10 ಹೆಕರೆ ಜಾಗದಲ್ಲಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯು 3 ವರ್ಷದ ಹಿಂದೆ ಮಂಜುರಾಗಿದ್ದು ಯಾವುದೇ ಕಾಮಗಾರಿ ನಡೆದಿಲ್ಲ ಅದಕ್ಕೆ ಸಂಬಂಧಪಟ್ಟ ದಾಖಲಾತಿಗಳು ತಾಹಸಿಲ್ದಾರ್ ಕಚೇರಿಯಿಂದ ಸಮಾಜ ಕಲ್ಯಾಣ ಇಲಾಖೆಗೆ ವರ್ಗಾವಣೆಯಾಗಿರುವುದಿಲ್ಲ

5) ಬೆಳಗೋಡುಗ್ರಾಮ ಹೋಬಳಿ ಕೇಂದ್ರವಾಗಿದ್ದು ಲೈನ್ ಮ್ಯಾನ್ ಗಳು ಹೋಬಳಿ ಕೇಂದ್ರದಲ್ಲಿ ಇರುವುದಿಲ್ಲ ಇವರಿಗೆ ಒಂದು ವಸತಿ ವ್ಯವಸ್ಥೆ ಮಾಡಿಕೊಡಬೇಕು .

6) ಬೆಳಗೋಡು ಗ್ರಾಮದ ಸುತ್ತ-ಮುತ್ತ ಇರುವ 20 ಎಕರೆ ಗ್ರಾಮಠಾಣ ಜಾಗವನ್ನು ಓತ್ತುವರಿದಾರರಿಂದ ಬಿಡಿಸಿ ಮನೆಇಲ್ಲದ ಬಡವರಿಗೆ ಹಂಚುವುದು.

7) ಬೆಳಗೋಡಿನಿಂದ ಈಶ್ವರಹಳ್ಳಿ ಸಂಪರ್ಕ ರಸ್ತೆಯ ಎರಡುಬದಿಗೆ ಗ್ರಾವೆಲ್ ಆಕಿಸುವುದು.

8) ಬೆಳಗೋಡು ಸರ್ಕಲ್ ಬಸ್ಸು ನಿಲ್ದಾಣದ ವ್ಯವಸ್ಥೆ ಹಾಗೂ ಹೈಟೆಕ್‌ ಶೌಚಲಯದ ವ್ಯವಸ್ಥೆ ಆಗಬೇಕು.ಎಂದು ಗ್ರಾಮ ಸಭೆಯಲ್ಲಿ ಶಾಸಕ ಸಿಮೆಂಟ್ ಮಂಜು ರವರಿಗೆ ಹೋಬಳಿ ಘಟಕದ ಅಧ್ಯಕ್ಷ ರವೀಶ್ ನೇತೃತ್ವದಲ್ಲಿ ಕಾರ್ಯಕರ್ತರು ಮನವಿ ಸಲ್ಲಿಸಿದರು.

 ಇದೇ ವೇಳೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ನೂತನವಾಗಿ ಆಯ್ಕೆಯಾಗಿರುವ ಶಾಸಕ ಸಿಮೆಂಟ್ ಮಂಜು ಅವರಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಗೌರವ ಅಧ್ಯಕ್ಷ ರಾಜು ಗಿರೀಶ್ ಈಶ್ವರಹಳ್ಳಿ ಗಿರೀಶ್, ಬಾಬು, ಯುವ ಘಟಕದ ಅಧ್ಯಕ್ಷ ಕಾಶಿಫ್, ಚಂದ್ರಶೇಖರ್ ರಜಾಕ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -spot_img

Most Popular