Thursday, December 5, 2024
Homeಸುದ್ದಿಗಳುಸಕಲೇಶಪುರದೊಡ್ಡನಹಳ್ಳಿ ಚೌಡೇಶ್ವರಿ ಅಮ್ಮನವರ ದರ್ಶನ ಪಡೆದ ಶಾಸಕ ಸಿಮೆಂಟ್ ಮಂಜು

ದೊಡ್ಡನಹಳ್ಳಿ ಚೌಡೇಶ್ವರಿ ಅಮ್ಮನವರ ದರ್ಶನ ಪಡೆದ ಶಾಸಕ ಸಿಮೆಂಟ್ ಮಂಜು

ದೊಡ್ಡನಹಳ್ಳಿ ಚೌಡೇಶ್ವರಿ ಅಮ್ಮನವರ ದರ್ಶನ ಪಡೆದ ಶಾಸಕ ಸಿಮೆಂಟ್ ಮಂಜು

ಸಕಲೇಶಪುರ : ಭಕ್ತರ ಕೋರಿಕೆಗಳನ್ನು ಈಡೇರಿಸುವ ಶಕ್ತಿ ದೇವತೆಯೆಂದೆ ಹೆಸರಾಗಿರುವ ತಾಲೂಕಿನ ಯಸಳೂರು ಹೋಬಳಿ ದೊಡ್ಡನಹಳ್ಳಿ ಚೌಡೇಶ್ವರಿ ಅಮ್ಮನವರ ದರ್ಶನವನ್ನು ಬುಧುವಾರ ಶಾಸಕ ಸಿಮೆಂಟ್ ಮಂಜುನಾಥ್ ಪಡೆದರು.ಇದೆ ವೇಳೆ ದೇವಸ್ಥಾನದ ಮುಂಭಾಗ ದೇವಿಗೆ ಈಡುಗಾಯಿ ಸಮರ್ಪಿಸಿದರು.

 ಅಬ್ಬನ, ಚಿನ್ನಳ್ಳಿ, ಜಮ್ಮನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿ ಪ್ರತಿ ವರ್ಷದಂತೆ ಆಚರಿಸುವ ಹರಕೆ ತೀರಿಸುವ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದೆ ವೇಳೆ ದೇವಿಯ ದರ್ಶನಕ್ಕೆ ಆಗಮಿಸಿದ್ದ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿದರು.

 ಗ್ರಾಮ ಪಂಚಾಯತಿ ಸದಸ್ಯ ಅಣ್ಣಪ್ಪ ಪೂಜಾರಿ ಅವರ ಸೇವಾರ್ಥದಲ್ಲಿ ದೊಡ್ಡನಹಳ್ಳಿ ಚೌಡೇಶ್ವರಿ ಅಮ್ಮನವರಿಗೆ ವಿಶೇಷ ಪೂಜೆ,ಪ್ರಸಾದ ನೆಡೆಯಿತು.

 ಈ ಸಂದರ್ಭದಲ್ಲಿ ಅಬ್ಬನ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣಮೂರ್ತಿ, ಕಾಫಿ ಉದ್ಯಮಿಗಳಾದ ಆದರ್ಶ, ಜಯಣ್ಣ ಹೈದೂರ್,ಕೆ.ಹೊಸಕೋಟೆ ಗ್ರಾಮ ಪಂಚಾಯತಿ ಸದಸ್ಯ ಭುವನಾಕ್ಷ, ಪತ್ರಕರ್ತ ನವೀನ್ ಆಲೂರು ಸೇರಿದಂತೆ ಮುಂತಾದವರಿದ್ದರು.

RELATED ARTICLES
- Advertisment -spot_img

Most Popular