ಬೈಕ್ ನಲ್ಲಿ ಬಿದ್ದು ಗಾಯಗೊಂಡ ವ್ಯಕ್ತಿಗೆ ನೆರವಾಗಿ ಮಾನವೀಯತೆ ಮೆರೆದ ಶಾಸಕ ಸಿಮೆಂಟ್ ಮಂಜು
ಸಕಲೇಶಪುರ: ರಸ್ತೆ ಬದಿ ಬಿದ್ದಿದ್ದ ಮರದ ತುಂಡು ಕಾಣದೆ ಅಪಘಾತಕ್ಕೆ ಈಡಾದ ವ್ಯಕ್ತಿಯೊಬ್ಬರನ್ನು ಶಾಸಕ ಸಿಮೆಂಟ್ ಮಂಜು ಆಸ್ಪತ್ರೆಗೆ ಸೇರಿಸಲು ನೆರವಾಗುವ ಮುಖಾಂತರ ಮಾನವೀಯತೆ ಮೆರೆದಿದ್ದಾರೆ.
ಸಕಲೇಶಪುರ ಮೂಡಿಗೆರೆ ರಾಜ್ಯ ಹೆದ್ದಾರಿಯ ರಕ್ಷಿದಿ ಸಮೀಪ ಹೆದ್ದಾರಿ ಬದಿಯಲ್ಲಿ ಮರ ಒಂದು ರಸ್ತೆಗೆ ತುಸು ಅಡ್ಡವಾಗಿ ಬಿದ್ದಿತ್ತು. ಈ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಕ್ಯಾಮನಹಳ್ಳಿ ಗ್ರಾಮದ ರಾಜು ಎಂಬುವರು ರಸ್ತೆಯ ಬದಿಯಲ್ಲಿ ಬಿದ್ದಿದ್ದ ಮರದ ತುಂಡು ಕಾಣದೆ ವಾಹನ ಚಲಾಯಿಸಿದಾಗ ಮರದ ತುಂಡು ತಗುಳಿ ಕೆಳಕ್ಕೆ ಬಿದ್ದಿದ್ದರಿಂದ ಹಣೆಗೆ ತೀವ್ರ ಪೆಟ್ಟು ಬಿದ್ದು ರಕ್ತ ಸುರಿಯಲು ಆರಂಭವಾಯಿತು. ಈ ಸಂದರ್ಭದಲ್ಲಿ ಇದೆ ರಸ್ತೆಯಲ್ಲಿ ಹೋಗುತ್ತಿದ್ದ ಶಾಸಕ ಸಿಮೆಂಟ್ ಮಂಜು ತಕ್ಷಣ ಇಳಿದು ಬೇರೆ ವಾಹನದಲ್ಲಿ ಗಾಯಾಳುವಿಗೆ ಪಟ್ಟಣದ ಆಸ್ಪತ್ರೆಗೆ ಹೋಗಲು ನೆರವಾದರು ಅಲ್ಲದೆ ರಸ್ತೆ ಬದಿಯಲ್ಲಿ ಬಿದ್ದಿದ್ದ ಮರವನ್ನು ಬಿಜೆಪಿ ಕಾರ್ಯಕರ್ತರಾದ ಕುಮಾರ ಸ್ವಾಮಿ ಹಾಗೂ ವಸಂತರವರ ನೆರವಿನಿಂದ ಮರದ ರಂಬೆಗಳನ್ನು ಯಂತ್ರದ ಮುಖಾಂತರ ಕತ್ತರಿಸಿ ಬದಿಗೆ ಸರಿಸಲಾಯಿತು.