ಹಾಲೇ ಬೇಲೂರು ಸಮೀಪ ಕುಸಿದ ಅಂಡರ್ ಪಾಸ್ ರಸ್ತೆ: ಹಾಲೇಬೇಲೂರು ಕುಣಿಗನಹಳ್ಳಿ ಮಾರ್ಗದಲ್ಲಿ ಸಂಪರ್ಕ ಕಡಿತವಾಗುವ ಸಾಧ್ಯತೆ
ಸಕಲೇಶಪುರ: ಪಟ್ಟಣದ ಜನತಾಮನೆ ಬಡಾವಣೆ ಸಮೀಪ ಹಾಲೇಬೇಲೂರು ಮಾರ್ಗವಾಗಿ ಕುಣಿಗನಹಳ್ಳಿ ಸಂಪರ್ಕಿಸುವ ರಸ್ತೆಯಲ್ಲಿ ಇತ್ತೀಚೆಗಷ್ಟೆ ರಾಷ್ಟ್ರೀಯ ಹೆದ್ದಾರಿ 75 ಚತುಷ್ಟಥ ರಸ್ತೆ ಕಾಮಗಾರಿಗಾಗಿ ಅಂಡರ್ ಪಾಸ್ಗಾಗಿ ಸೇತುವೆ ನಿರ್ಮಾಣ ಮಾಡಲಾಗಿದ್ದು ಇದೀಗ ರಸ್ತೆಯ ಒಂದು ಬದಿ ಕುಸಿದು ಹೋಗಿರುವುದರಿಂದ ಪಟ್ಟಣ ಮಾರ್ಗವಾಗಿ ಹಾಲೇಬೇಲೂರು ಕಡೆ ಹೋಗುವ ಸಂಪರ್ಕ ಬಂದ್ ಆಗುವ ಸಾಧ್ಯತೆಯಿದ್ದು ಇದರಿಂದಾಗಿ ಹಲವಾರು ಗ್ರಾಮಗಳ ಗ್ರಾಮಸ್ಥರು ಪಟ್ಟಣಕ್ಕೆ ಬರಲು ಸುತ್ತಿ ಬಳಸಿ ಹೋಗಬೇಕಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೇಲ್ನೋಟಕ್ಕೆ ಕಳಪೆ ಕಾಮಗಾರಿಯಿಂದ ರಸ್ತೆ ಕುಸಿದಿದೆ ಎಂದು ಆಟೋ ಚಾಲಕ ವಿಷ್ಣುರಾವ್ ಆರೋಪಿಸಿದ್ದಾರೆ. ಶಾಸಕ ಸಿಮೆಂಟ್ ಮಂಜು ಬೆಂಗಳೂರಿನಲ್ಲಿದ್ದು ಶನಿವಾರ ಸ್ಥಳಕ್ಕೆ ಬಂದು ಸ್ಥಳ ಪರಿಶೀಲನೆ ಮಾಡಲಿದ್ದಾರೆ.