Sunday, April 20, 2025
Homeಸುದ್ದಿಗಳುಸಕಲೇಶಪುರಪೌರ ಕಾರ್ಮಿಕರು ದೇಶದ ಆಸ್ತಿ : ಶಾಸಕ ಸಿಮೆಂಟ್ ಮಂಜು

ಪೌರ ಕಾರ್ಮಿಕರು ದೇಶದ ಆಸ್ತಿ : ಶಾಸಕ ಸಿಮೆಂಟ್ ಮಂಜು

ಪೌರ ಕಾರ್ಮಿಕರು ದೇಶದ ಆಸ್ತಿ : ಶಾಸಕ ಸಿಮೆಂಟ್ ಮಂಜು

ಸಕಲೇಶಪುರ : ಪಟ್ಟಣದ ಪುರಸಭಾ ವತಿಯಿಂದ ಪುರಭವನದಲ್ಲಿ ನಡೆದ 7ನೇ ವರ್ಷದ ಪೌರ ಕಾರ್ಮಿಕ ದಿನಾಚರಣೆಯನ್ನು ಶಾಸಕ ಸಿಮೆಂಟ್ ಮಂಜು ದೀಪ ಬೆಳಗುವ ಮುಖಾಂತರ ಉದ್ಘಾಟಿಸಿ ಮಾತನಾಡಿ ಸಕಲೇಶಪುರ ಸ್ವಚ್ಛವಾಗಿರುತದೆ ಎಂದರೆ ಪೌರ ಕಾರ್ಮಿಕರು ಕಾರಣ 

ಬೆಳಗ್ಗೆ ನಾವು ಏಳುವ ಮೊದಲೇ ನಗರ ಸ್ವಚ್ಛವಾಗಿಡುತ್ತಾರೆ ಇದು ಪುಣ್ಯದ ಕೆಲಸ, ಪೌರ ಕಾರ್ಮಿಕರ ಕಷ್ಟ ಸುಖಗಳಿಗೆ ಸದಾ ಜೊತೆಯಾಗಿರುತ್ತಾನೆ ಎಂದರು.

ಪುರಸಬಾ ಮುಖ್ಯಧಿಕಾರಿ ರಮೇಶ್ ಮಾತನಾಡಿದರು.

 ಎಲ್ಲಾ 52 ಜನ ಪೌರ ಕಾರ್ಮಿಕರನ್ನು ಶಾಸಕ ಸಿಮೆಂಟ್ ಮಂಜು ವ್ಯಯುಕ್ತಿಕವಾಗಿ ಸನ್ಮಾನಿಸಿದರು.

. ಈ ಸಂದರ್ಭದಲ್ಲಿ ಪುರಸಭಾ ಇಂಜಿನಿಯರ್ ಕವಿತಾ, ಪುರಸಭಾ ಸದಸ್ಯರುಗಳಾದ ಆದರ್ಶ, ಕಾಡಪ್ಪ, ಉಮೇಶ್, ಜ್ಯೋತಿ,ಅನ್ನಪೂರ್ಣ, ವನಜಾಕ್ಷಿ, ರೇಖಾ, ಪ್ರದೀಪ್, ಮೋಹನ್, ಅಣ್ಣಪ್ಪ, ಇಸ್ರಾರ್, ಸರಿತಾ, ಜರೀನಾ, ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಳ್ಳು ಗೋಪಾಲ್ ಮುಂತಾದವರು ಹಾಜರಿದ್ದರು.

RELATED ARTICLES
- Advertisment -spot_img

Most Popular