ವ್ಯವಹಾರದಲ್ಲಿ ಪಾರದರ್ಶಿಕತೆ ಅಗತ್ಯ: ಶಾಸಕ ಸಿಮೆಂಟ್ ಮಂಜು
ಮಾರಾಟ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಹಾಗೂ ನೂತನ ರೈತ ಭವನವನ್ನು ಉದ್ಘಾಟಿಸಿದ ಶಾಸಕರು
ಸಕಲೇಶಪುರ: ಸಹಕಾರ ಸಂಘಗಳ ಉಳಿವು ರೈತರ ನಡೆಯನ್ನು ಅವಲಂಬಿಸಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಬುಧುವಾರ ತಾಲೂಕು ವ್ಯವಸಾಯೋತ್ಪನ ಮಾರಾಟ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಹಾಗೂ ನೂತನ ರೈತ ಭವನವನ್ನು ಉದ್ಘಾಟಿಸಿ ಮಾತನಾಡಿ, ಇಂದು ರೈತರಿಗೆ ಸುಲಭವಾಗಿ ಸಾಲ ಸೌಲಭ್ಯ ದೊರಕುವುದು ಸಹಕಾರ ಸಂಘಗಳಲ್ಲಿ ಮಾತ್ರ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರಿಗೆ ಸಾಲ ದೊರೆಯುವುದು ದುಸ್ಥರವಾಗಿದೆ. ಆದ್ದರಿಂದ,ರೈತರು ಸಹಕಾರ ಸಂಘಗಳೊAದಿಗೆ ವ್ಯವಹಾರ ನಡೆಸುವ ವೇಳೆ ಶಿಸ್ತು ಅಳವಡಿಸಿಕೊಂಡಾಗ ಮಾತ್ರ ಸಂಘಗಳು ಅದ್ಬುತ ಬೆಳವಣಿಗೆ ಕಾಣಲಿವೆ ಎಂದರು.ಪಟ್ಟಣದ ವ್ಯವಸಾಯೋತ್ಪನ ಸಹಕಾರ ಸಂಘ ಜಿಲ್ಲೆಯಲ್ಲೆ ಮುಂಚೂಣಿಯಲ್ಲಿರುವುದು ಹೆಮ್ಮೆಯ ವಿಚಾರ ಎಂದರು.
ಸಂಘದ ಅಧ್ಯಕ್ಷ ಕಿರುವಾಲೆ ಶಶಿಕುಮಾರ್ ಮಾತನಾಡಿ, ಸಂಘ ಪ್ರಸಕ್ತ ವರ್ಷ 7.79ಕೋಟಿ ಮೊತ್ತದ ರಸಗೊಬ್ಬರ,ಕ್ರಿಮಿನಾಶಕ ಮಾರಾಟ ಮಾಡುವ ಮೂಲಕ ದಾಖಲೆ ಬರೆದಿದ್ದು 15.94 ಲಕ್ಷ ಲಾಭಗಳಿಸಿದೆ. ಯಾವುದೆ ರಾಜಕೀಯ ಭಿನ್ನಾಭಿಪ್ರಾಯವಿಲ್ಲದೆ ಸಂಘದ ನಿರ್ದೇಶಕರು ಒಟ್ಟಾಗಿ ಕೆಲಸ ಮಾಡುತ್ತಿರುವುದರಿಂದ ಸಂಘವು ಉತ್ತಮ ಲಾಭಗಳಿಸಿದೆ ಹಾಗೂ ತಾಲೂಕಿನಲ್ಲೆ ಮಾದರಿ ರೈತ ಭವನ ನಿರ್ಮಾಣ ಮಾಡಲು ಸಾಧ್ಯವಾಗಿದೆ ಎಂದರು.
ಈ ಸಂಧರ್ಭದಲ್ಲಿ ಸಂಘದ ಉಪಾಧ್ಯಕ್ಷೆ ವಜ್ರ ಲೋಕೇಶ್,ನಿರ್ದೇಶಕರುಗಳಾದ ಸಹನಾ, ಲೋಹಿತ್‌ಕೌಡಳ್ಳಿ, ರವಿಕುಮಾರ್, ಉಮೇಶ್, ದೇವರಾಜ್, ರಾಮಚಂದ್ರ, ಗುರುಲಿಂಗಪ್ಪ, ನಾಗರಾಜ್, ರಮೇಶ್, ಸೈಯ್ಯದ್ ಪೈರೋಜ್, ಶಿವಪ್ಪ ನಾಯಕ, ಕಾರ್ಯನಿರ್ವಹಣಾಧಿಕಾರಿ ಲೋಕೇಶ್ ಮುಂತಾದವರಿದ್ದರು.a