Sunday, November 24, 2024
Homeಸುದ್ದಿಗಳುಸಕಲೇಶಪುರಕಾಡಾನೆ ಹಾವಳಿ ವಿರುದ್ಧದ್ದ ಪ್ರತಿಭಟನೆ ವೇಳೆ ಬಂಧನವಾಗಿದ್ದ 11 ಜನ ಹೋರಾಟಗಾರರು ಜೈಲಿನಿಂದ ಬಿಡುಗಡೆ 

ಕಾಡಾನೆ ಹಾವಳಿ ವಿರುದ್ಧದ್ದ ಪ್ರತಿಭಟನೆ ವೇಳೆ ಬಂಧನವಾಗಿದ್ದ 11 ಜನ ಹೋರಾಟಗಾರರು ಜೈಲಿನಿಂದ ಬಿಡುಗಡೆ 

ಕಾಡಾನೆ ಹಾವಳಿ ವಿರುದ್ಧದ್ದ ಪ್ರತಿಭಟನೆ ವೇಳೆ ಬಂಧನವಾಗಿದ್ದ 11 ಜನ ಹೋರಾಟಗಾರರು ಜೈಲಿನಿಂದ ಬಿಡುಗಡೆ 

ಹೋರಾಟಗಾರರಿಗೆ ಪಕ್ಷ ಭೇದ ಮರೆತು ಧೈರ್ಯ ತುಂಬಿದ ವಿವಿಧ ಸಂಘಟನೆಗಳ ನೂರಾರು ಕಾರ್ಯಕರ್ತರು.

 ಸಕಲೇಶಪುರ: ಕಾಡಾನೆ ದಾಳಿಯಿಂದ ಮೃತ ಪಟ್ಟಿದ ಮಹಿಳೆಗೆ ನ್ಯಾಯ ದೊರಕಿಸಿ ಕೊಡುವಂತೆ ಪ್ರತಿಭಟನೆ ನೆಡೆಸಿದ್ದವರ ಮೇಲೆ ದಾಖಲಾಗಿದ್ದ ಪ್ರಕರಣಕ್ಕೆ ಕೋರ್ಟ್ ಜಾಮೀನು ಮಂಜೂರು ಮಾಡಿದ್ದು ಇದರಿಂದಾಗಿ ಬಂಧಿತರಾದವರು ಹಾಸನದ ಕಾರಾಗೃಹ ಬಂಧನದಿಂದ ಹೊರ ಬಂದಿದ್ದಾರೆ.

   ತಾಲೂಕಿನ ಬೆಳಗೋಡು ಹೋಬಳಿ ಕುನಿಗನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವಡೂರು ಗ್ರಾಮದಲ್ಲಿ ಆಗಸ್ಟ್ 18 ರ ಮುಂಜಾನೆ ಕವಿತಾ ಎಂಬ ಕೂಲಿ ಕಾರ್ಮಿಕ ಮಹಿಳೆಯ ಮೇಲೆ ಕಾಡಾನೆ ದಾಳಿ ನೆಡಿಸಿದ ಪರಿಣಾಮ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಕಾರಿಯಾಗಿದೆ ಜಿಲ್ಲಾ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದರು. ಈ ವಿಚಾರಕ್ಕೆ ಸಂಬಂದಿಸಿದಂತೆ ಕಾಡಾನೆ ಹಾವಳಿ ಸಂತ್ರಸ್ತರ ಹೋರಾಟ ಸಮಿತಿಯ ಮುಖಂಡ ಯಡೇಹಳ್ಳಿ ಆರ್ ಮಂಜುನಾಥ್, ಮಲೆನಾಡು ರಕ್ಷಣಾ ಸೇನೆಯ ರಾಜ್ಯಾಧ್ಯಾಕ್ಷ ಸಾಗರ್ ಜಾನೇಕೆರೆ ಸೇರಿದಂತೆ ಇತರರು ಹಿಮ್ಸ್ ಬಳಿ ಪ್ರತಿಭಟನೆ ನೆಡೆಸುವ ವೇಳೆ ಪೋಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದರು ಎಂದು ಪೊಲೀಸರು ಆರೋಪಿಸಿ 11 ಜನರ ಮೇಲೆ ಪ್ರಕರಣ ದಾಖಲಾಗಿತ್ತು.ಇಂದು ಸಮಗ್ರ ವಿಚಾರಣೆ ನೆಡೆಸಿದ ಪ್ರದಾನ ಸಿವಿಲ್ ನ್ಯಾಯಧೀಶ ಮತ್ತು ಜೆ. ಎಂ. ಎಫ್ . ಸಿ ನ್ಯಾಯಾಲಯ ಎಲ್ಲ 11 ಜನ ಹೋರಾಟಗಾರರಿಗೆ ಜಾಮೀನು ಮಂಜೂರು ಮಾಡಿದ್ದು, ಸಂಜೆಯ ವೇಳೆಗೆ ಜೈಲಿನಿಂದ ಹೊರ ಬಂದ ಯಡೇಹಳ್ಳಿ ಮಂಜುನಾಥ್ ನಿವಾಸಕ್ಕೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಬೆಳ ಬೆಲೆಗಾರರ ಸಂಘಟನೆ ಸೇರಿದರೆ ಹಲವಾರು ಕನ್ನಡ ಪರ ಸಂಘಟನೆ ಕಾರ್ಯಕರ್ತರು ಭೇಟಿ ಮಾಡಿ ಜನಪರ ಹೋರಾಟಕ್ಕೆ ನಮ್ಮ ಬೆಂಬಲವಿರುತ್ತದೆ ಎಂದು ಅಭಯ ನೀಡಿದ್ದರು.

ಹೋರಾಟಗಾರರ ಪರವಾಗಿ ವಕೀಲರಾದ ಪರಮೇಶ್ ಹಾಗೂ ಅವರ ತಂಡ ಸಮರ್ಥವಾಗಿ ವಾದ ಮಂಡಿಸಿ ಜಾಮೀನು ಕೊಡಿಸುವಲ್ಲಿ ಯಶಸ್ವಿಯಾಗಿದೆ.

RELATED ARTICLES
- Advertisment -spot_img

Most Popular