ಕಾಡಾನೆ ಹಾವಳಿ ವಿರುದ್ಧದ್ದ ಪ್ರತಿಭಟನೆ ವೇಳೆ ಬಂಧನವಾಗಿದ್ದ 11 ಜನರಿಗೆ ಜಾಮೀನು ಮಂಜೂರು.
ಯಡೇಹಳ್ಳಿ ಮಂಜುನಾಥ್, ಸಾಗರ್ ಜಾನೇಕೆರೆಯವರಿಗೆ ಜಾಮೀನು ಮಂಜೂರು.
ಸಕಲೇಶಪುರ : ಕಾಡಾನೆ ದಾಳಿಯಿಂದ ಮೃತ ಪಟ್ಟಿದ ಮಹಿಳೆಗೆ ನ್ಯಾಯ ದೊರಕಿಸಿ ಕೊಡುವಂತೆ ಪ್ರತಿಭಟನೆ ನೆಡೆಸಿದ್ದವರ ಮೇಲೆ ದಾಖಲಾಗಿದ್ದ ಪ್ರಕರಣಕ್ಕೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ತಾಲೂಕಿನ ಬೆಳಗೋಡು ಹೋಬಳಿ ಕುನಿಗನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವಡೂರು ಗ್ರಾಮದಲ್ಲಿ ಆಗಸ್ಟ್ 18 ರ ಮುಂಜಾನೆ ಕವಿತಾ ಎಂಬ ಕೂಲಿ ಕಾರ್ಮಿಕ ಮಹಿಳೆಯ ಮೇಲೆ ಕಾಡಾನೆ ದಾಳಿ ನೆಡಿಸಿದ ಪರಿಣಾಮ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗಿದೆ ಜಿಲ್ಲಾ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದರು.
ಈ ವಿಚಾರಕ್ಕೆ ಸಂಭಂದಿದಂತೆ ಕಾಡಾನೆ ಹಾವಳಿ ಸಂತ್ರಸ್ತರ ಹೋರಾಟ ಸಮಿತಿಯ ಮುಖಂಡ ಯಡೇಹಳ್ಳಿ ಆರ್ ಮಂಜುನಾಥ್,ಮಲೆನಾಡು ರಕ್ಷಣಾ ಸೇನೆಯ ರಾಜ್ಯಧ್ಯಕ್ಷ ಸಾಗರ್ ಜಾನೇಕೆರೆ ಸೇರಿದಂತೆ ವಿವಿಧ ಸಂಘಟನೆಗಳು ಹಿಮ್ಸ್ ಬಳಿ ಪ್ರತಿಭಟನೆ ನೆಡೆಸುವ ವೇಳೆ ಪೋಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದರು ಎಂದು ಪೊಲೀಸರು ಆರೋಪಿಸಿ 11 ಜನರ ಮೇಲೆ ಪ್ರಕರಣ ದಾಖಲಾಗಿತ್ತು.
ಇಂದು ಸಮಗ್ರ ವಿಚಾರಣೆ ನೆಡೆಸಿದ ಪ್ರಧಾನ ಸಿವಿಲ್ ನ್ಯಾಯಧೀಶ ಮತ್ತು ಜೆ. ಎಂ. ಎಫ್. ಸಿ ನ್ಯಾಯಾಲಯ ಎಲ್ಲ 11 ಜನ ಹೋರಾಟಗಾರರಿಗೆ ಜಾಮೀನು ಮಂಜೂರು ಮಾಡಿದೆ.
ಹೋರಾಟಗಾರರ ಪರವಾಗಿ ವಕೀಲರಾದ ಪರಮೇಶ್ ಹಾಗೂ ಅವರ ತಂಡ ಜಾಮೀನು ಕೊಡಿಸುವಲ್ಲಿ ಯಶಸ್ವಿಯಾಗಿದೆ.