ಸಕಲೇಶಪುರ : ಕಾಡಾನೆ ಮಾನವ ಸಂಘರ್ಷದ ವಿಚಾರವಾಗಿ ಸಾಮಾಜಿಕ ಹೋರಾಟಗಾರರಾದ ಎಡೆಹಳ್ಳಿ ಆರ್ ಮಂಜುನಾಥ್ ಹಾಗೂ ಸಾಗರ್ ಜಾನಕೆರೆ ಅವರ ಸಂಗಡಿಗರನ್ನು ಬಂಧಿಸಿರೋದನ್ನ ಖಂಡಿಸುತ್ತೇವೆ ಎಂದು ಯಸಳೂರು ತೆಂಕಲಗೂಡು ಬ್ರಹನ್ಮಠದ ಶ್ರೀ ಷ.ಬ್ರ. ಚನ್ನ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ತಿಳಿಸಿದರು. ಮಲೆನಾಡಿನ ಭಾಗದಲ್ಲಿ ಹಲವಾರು ವರ್ಷಗಳಿಂದ ಕಾಡಾನೆ ಮತ್ತು ಮಾನವರ ಸಂಘರ್ಷ ನಡೆದುಕೊಂಡು ಬರುತ್ತಲೇ ಇದೆ ಇತ್ತೀಚಿಗೆ ಕವಿತಾ ಎನ್ನುವ ಮಹಿಳೆ ಕಾಡಾನೆ ದಾಳಿಯಿಂದ ಮೃತಪಟ್ಟ ವಿಚಾರ ಎಲ್ಲರಿಗೂ ತಿಳಿದಿದೆ ಆ ವಿಚಾರವಾಗಿ ಸಾಮಾಜಿಕ ಹೋರಾಟಗಾರದಂತಹ ಎಡೆಹಳ್ಳಿ ಮಂಜುನಾಥ್, ಸಾಗರ್ ಜಾನಕೆರೆ ಹಾಗೂ ಸಂಗಡಿಗರನ್ನ ಪೊಲೀಸ್ ಇಲಾಖೆ ಬಂಧಿಸಿರುವುದು ಅತ್ಯಂತ ಖಂಡನೆಯ ವಿಚಾರ ಪ್ರಜಾಪ್ರಭುತ್ವದಲ್ಲಿ ಅನ್ಯಾಯದ ವಿರುದ್ಧ ಮಾತನಾಡುವ ಹಕ್ಕು ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ ಇಂತಹ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ಆಡಳಿತ ವ್ಯವಸ್ಥೆಗೆ ಶೋಭೆ ತರುವಂತದ್ದಲ್ಲ ಹಾಗೂ ಸರ್ಕಾರಕ್ಕೆ ಶೋಭೆ ತರುವಂತದ್ದಲ್ಲ. ಹಲವಾರು ವರ್ಷಗಳಿಂದ ಆಗಿರುವ ಪ್ರಾಣಹಾನಿಗೆ ಹಣವನ್ನು ನೀಡಬಹುದು ಆದರೆ ಹೋದ ಪ್ರಾಣವನ್ನ ಮರಳಿ ತರಲು ಯಾರಿಂದಲೂ ಸಾಧ್ಯವಿಲ್ಲ ಇಂತಹ ಹೋರಾಟಗಾರರನ್ನು ಹತ್ತಿಕ್ಕುವ ಬದಲು ಆನೆಯ ಸಮಸ್ಯೆಗೆ ಪರಿಹಾರವನ್ನು ಹುಡುಕುವ ಪ್ರಯತ್ನ ಮಾಡಬೇಕು. ಇದಕ್ಕೆ ಸರ್ಕಾರ ಪರಿಹಾರವನ್ನು ನೀಡಲಿಲ್ಲವೆಂದರೆ ಮುಂದಿನ ದಿನಗಳಲ್ಲಿ ಎಲ್ಲ ಸಂಘಟನೆಗಳ ಜೊತೆಗೂಡಿ ಉಗ್ರ ಹೋರಾಟವನ್ನ ಸ್ವತಹ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ