Saturday, April 19, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ ಪಿ.ಎಲ್.ಡಿ ಬ್ಯಾಂಕ್ ಉಪಾಧ್ಯಕ್ಷರಾಗಿ ಹಿತೇಷಿ ಆಯ್ಕೆ

ಸಕಲೇಶಪುರ ಪಿ.ಎಲ್.ಡಿ ಬ್ಯಾಂಕ್ ಉಪಾಧ್ಯಕ್ಷರಾಗಿ ಹಿತೇಷಿ ಆಯ್ಕೆ

ಸಕಲೇಶಪುರ ಪಿ.ಎಲ್.ಡಿ ಬ್ಯಾಂಕ್ ಉಪಾಧ್ಯಕ್ಷರಾಗಿ ಹಿತೇಷಿ ಆಯ್ಕೆ

ಸಕಲೇಶಪುರ : ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತದ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡ ಹಿತೈಷಿ ಆಯ್ಕೆಯಾಗಿದ್ದಾರೆ.

 ಸೋಮವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಹಿತೇಷಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿಂದಿನ ಉಪಾಧ್ಯಕ್ಷರಾಗಿದ್ದ ನರೇಶ್ ಅವರ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು.

 ಚುನಾವಣಾ ಅಧಿಕಾರಿಯಾಗಿ  ಜಿಲ್ಲಾ ಸಹಕಾರಿ ಸಂಘಗಳ  ಅಧಿಕ್ಷಕ ಕುಮಾರ್ ನಿರ್ವಹಿಸಿದ್ದರು.

 ನೂತನ ಉಪಾಧ್ಯಕ್ಷರಾಗಿ  ಆಯ್ಕೆಯಾದ ಹಿತೈಷಿಯವರಿಗೆ  ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರಮುಡಿ ಚಂದ್ರು, ಅಧ್ಯಕ್ಷ ಎಚ್.ಎಚ್ ಉದಯ್ ಕಾಂಗ್ರೆಸ್ ಮುಖಂಡರಾದ ಕಾಮನಹಳ್ಳಿ ಜಯರಾಜ್, ಗೊದ್ದು ಲೋಕೇಶ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -spot_img

Most Popular