Sunday, November 24, 2024
Homeಸುದ್ದಿಗಳುಸಕಲೇಶಪುರಮಾತು ಬಾರದ ಪ್ರಾಣಿಗಳಿಗೆ ಮಾನವೀಯತೆಯಿಂದ ಚಿಕಿತ್ಸೆ ನೀಡುವ ಜನಾನುರಾಗಿ ಸರ್ಕಾರಿ ಪಶುವೈದ್ಯ ಡಾ|| ನವೀನ್.

ಮಾತು ಬಾರದ ಪ್ರಾಣಿಗಳಿಗೆ ಮಾನವೀಯತೆಯಿಂದ ಚಿಕಿತ್ಸೆ ನೀಡುವ ಜನಾನುರಾಗಿ ಸರ್ಕಾರಿ ಪಶುವೈದ್ಯ ಡಾ|| ನವೀನ್.

ಮಾತು ಬಾರದ ಪ್ರಾಣಿಗಳಿಗೆ ಮಾನವೀಯತೆಯಿಂದ ಚಿಕಿತ್ಸೆ ನೀಡುವ ಜನಾನುರಾಗಿ ಸರ್ಕಾರಿ ಪಶುವೈದ್ಯ ಡಾ|| ನವೀನ್.

ವಿಶ್ವ ಬೆಕ್ಕುಗಳ ದಿನದಂದು ವಿಶೇಷ ಲೇಖನ :

 ಪದವಿ ಪಡೆದ ವೈದ್ಯರು ಸರ್ಕಾರಿ ಸೇವೆಗೆ ಮಲೆನಾಡು ಗ್ರಾಮೀಣ ಭಾಗಕ್ಕೆ ಬರಲು ಹಿಂದೇಟು ಹಾಕುತ್ತಾರೆ ಎನ್ನುವುದಕ್ಕೆ ಅಪವಾದವೆನ್ನುವಂತೆ ಬಹಳ ಪ್ರೀತಿಯಿಂದ ಪ್ರಾಣಿಗಳ ಹಾರೈಕೆಯಲ್ಲಿ ತೊಡಗಿದ್ದಾರೆ ಸಕಲೇಶಪುರ ಸರ್ಕಾರಿ ಪಶುವೈದ್ಯ ಡಾಕ್ಟರ್ ನವೀನ್.

  ಪಶು ವೈದ್ಯ ಸೇವೆ ಒಳ್ಳೆಯ ವೃತ್ತಿ ಹಾಗೂ ಪುಣ್ಯದ ಕೆಲಸವೂ ಆಗಿದೆ. ಮಾತು ಬಾರದ ಪ್ರಾಣಿಗಳಿಗೆ ಚಿಕಿತ್ಸೆ ನೀಡುವುದು ಅತ್ಯಂತ ಜವಾಬ್ದಾರಿಯುತ ಕಾರ್ಯವಾಗಿದೆ. “ವೈದ್ಯೋ ನಾರಾಯಣೋ ಹರಿ’ ಎಂಬ ಮಾತು ಪಶು ವೈದ್ಯರಿಗೆ ಹೆಚ್ಚು ಸೂಕ್ತವಾಗಿದೆ ಎಂಬುದು ನನ್ನ ಅನಿಸಿಕೆಯಾಗಿದೆ. ನಾನು ಹಲವಾರು ಬಾರಿ ನಮ್ಮ ಸಾಕು ಪ್ರಾಣಿಗಳಾದ ನಾಯಿ ಬೆಕ್ಕು ಚಿಕಿತ್ಸೆಗೆ ಸಕಲೇಶಪುರ ಸರ್ಕಾರಿ ಪಶು ವೈದ್ಯ ಆಸ್ಪತ್ರೆಗೆ ಹೋಗಿದ್ದೇನೆ, ತುಂಬಾ ಅಚ್ಚುಕಟ್ಟಾದ ವ್ಯವಸ್ಥೆಯೊಂದಿಗೆ ಆಸ್ಪತ್ರೆಯಲ್ಲಿ ಮೂಕ ಪ್ರಾಣಿಗಳಿಗೆ ಚಿಕಿತ್ಸೆ ದೊರೆಯುತ್ತಿದೆ.

   ವಿಶೇಷವಾಗಿ ಎಲ್ಲರನ್ನೂ ಸೆಳೆಯುವವರು ಡಾ. ನವೀನ್, ಎಂತಹ ಕಠಿಣ ಪ್ರಾಣಿಗಳನ್ನು ಕೂಡ ಸ್ಪರ್ಶದಿಂದ ಸುಮ್ಮನಿರುವಂತೆ ಮಾಡುವ ವಿದ್ವತ್ತು ಆಶೀರ್ವಾದ ಇವರ ಕೈಗಳಲ್ಲಿವೆ, ಪ್ರಾಣಿಗಳನ್ನು ಪ್ರೀತಿಯಿಂದ ಸತ್ಕರಿಸಿ ವಿಶೇಷ ರೀತಿಯ ಚಿಕಿತ್ಸೆಯ ಮೂಲಕ ಗುಣಪಡಿಸುವ ಇವರ ಕಾರ್ಯವೈಖರಿ ಹಾಗು ಜನರೊಟ್ಟಿಗೆ ಪ್ರಾಣಿಗಳ ಆರೋಗ್ಯದ ಪರಿಣಾಮಗಳ ಬಗ್ಗೆ ವ್ಯವಹರಿಸುವ, ಮಾತನಾಡುವ ರೀತಿ ಎಂಥವರನ್ನು ಆಕರ್ಷಿಸುತ್ತದೆ. 

  ಮೂಲತಹ ಕುಣಿಗಲ್ ನವರಾದ ಡಾಕ್ಟರ್ ನವೀನ್ ರವರು ಶಿರಸಿ, ರಾಮನಗರ ಜಿಲ್ಲೆಗಳಲ್ಲಿ ಮತ್ತು ಹುಟ್ಟುರಾದ ಕುಣಿಗಲ್ ನಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ಕಳೆದ ಒಂದುವರೆ ವರ್ಷಗಳಿಂದ ಸಕಲೇಶಪುರದಲ್ಲಿ ಸೇವೆ ನಿರ್ವಹಿಸುತ್ತಿದ್ದಾರೆ, ವಿಶೇಷವಾಗಿ ಕಾಡಾನೆಗಳು ಅಷ್ವಸ್ಥ ಗೊಂಡಗ ಮರಣ ಹೊಂದಿದ ಸಂದರ್ಭದಲ್ಲಿ ಹಿರಿಯ ವೈದ್ಯಾಧಿಕಾರಿಗಳಾದ ಡಾಕ್ಟರ್ ವೆಂಕಟೇಶ್ ರವರ ಮಾರ್ಗದರ್ಶನದಲ್ಲಿ, ತಾಲೂಕಿನ ಎಲ್ಲ ಉಪ ಕೇಂದ್ರದ ಪಶು ವೈದ್ಯರೊಟ್ಟಿಗೆ ಸೇರಿ ಕೆಲಸ ನಿರ್ವಹಿಸುವುದು ತುಂಬಾ ಪರಿಣಾಮಕಾರಿಯಾಗಿದೆ.

  ಸಮಯ ಪಾಲನೆ, ಶಿಸ್ತು, ಪ್ರತಿಯೊಬ್ಬರ ದೂರವಾಣಿ ಕರೆಗಳನ್ನು ಸ್ವೀಕರಿಸುವ ಮನೋಭಾವ ಸೇವಾ ಪರತೆಯನ್ನು ಎತ್ತು ಹಿಡಿದಿದೆ.ಜಾನುವಾರುಗಳ ಚಿಕಿತ್ಸೆಯ ಉನ್ನತಿಯ ಬಗ್ಗೆ ಸಾದ ಆಲೋಚಿಸುತ್ತಿರುತ್ತಾರೆ, ಪ್ರಾಣಿಗಳನ್ನು ಪ್ರೀತಿಯಿಂದ ಹೇಗೆ ಕಾಣಬೇಕು ಎಂಬುದನ್ನ ಇವರ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಇದ್ದು ಪ್ರಾಣಿ ಪ್ರಿಯರಾದ ನಾವು ನೋಡಿ ಕಲಿಯಬೇಕಾಗಿದೆ.

  ಗ್ರಾಮೀಣ ಪ್ರದೇಶದಲ್ಲಿ ಸಿಬ್ಬಂದಿ ಕೊರತೆ, ವ್ಯವಸ್ಥಿತ ಪರಿಕರಗಳ ಕೊರತೆ, ಔಷಧಿಗಳ ಕೊರತೆಯನ್ನು ನೀಗಿಸಿಕೊಂಡು ಬಹಳ ಒತ್ತಡವಿದ್ದರೂ ಕೂಡ ಅತ್ಯುತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನ ಬಹಳ ಅಚ್ಚುಕಟ್ಟಾಗಿ ನಿರ್ಮಿಸಿಕೊಂಡಿದ್ದಾರೆ. ವೈದ್ಯರಿಗೆ ಹೆಚ್ಚು ಹೆಚ್ಚು ಭಗವಂತ ಶಕ್ತಿ ಆರೋಗ್ಯವನ್ನು ನೀಡಿ ಉನ್ನತ ಹುದ್ದೆಗಳನ್ನು ದಯಪಾಲಿಸಿ ಮೂಕ ಪ್ರಾಣಿಗಳ ಸಂವೇದನೆಯನ್ನು ಅರಿತು ಮುಂದಿನ ಜನಾಂಗಕ್ಕೆ ಪ್ರಾಣಿ ಸಂಕುಲವನ್ನು ಉಳಿಸುವ ನಿಟ್ಟಿನಲ್ಲಿ ಹೆಚ್ಚು ಪ್ರೇರಣೆಯಾಗಲಿ ಎಂದು ಆಶಿಸೋಣ.

ಯಡೇಹಳ್ಳಿ’ಆರ್’ ಮಂಜುನಾಥ್

RELATED ARTICLES
- Advertisment -spot_img

Most Popular