*ನಮಸ್ಕಾರ..ನಾವು ಸಕಲೇಶಪುರ ಆಲೂರು ತಾಲೂಕಿನಲ್ಲಿ ವಾಸವಾಗಿರುವ ಆನೆಗಳು.*
*ನಮ್ಮ ಕುಟುಂಬದಲ್ಲಿ ತಾಯಿಯಾನೆ ಎಲ್ಲವನ್ನು ನಿರ್ಧರಿಸುವುದು ಆದರೆ ಆ ತಾಯಿ ಹೊಟ್ಟೆಯಲ್ಲಿದ್ದ ಮಗುವಿನೊಂದಿಗೆ ಮರಣ ಹೊಂದಿದ್ದಾಳೆ ಇದರ ಹೊಣೆ ಯಾರು ಹೊರ್ತೀರಾ ?*
ತಾವುಗಳೆಲ್ಲ ಆನೆಗಳಿಗೆ ಪೂಜ್ಯ ಸ್ಥಾನನವನ್ನು ನೀಡಿರುವುದು ನಮಗೆ ಹೆಮ್ಮೆ ಎನಿಸುತ್ತದೆ. ತಾವು ನಮ್ಮನ್ನು ಗಜರಾಜನೆಂದು ಅತ್ಯಂತ ಶ್ರದ್ದೆ ಯಿಂದ ಪೂಜಿಸುತ್ತಿರಿ, ಭಕ್ತಿಯಿಂದ ನಡೆದುಕೊಳ್ಳುತ್ತೀರಿ. ಅದರೆ ನಮ್ಮಗಳ ದಿನನಿತ್ಯದ ಜೀವನ ಹೇಗಿದೆ ಎಂದು ತಮಗೆ ಗೊತ್ತಿದೆಯಾ?
ನಮ್ಮದು ಸ್ತ್ರೀ ಪ್ರದಾನ ಕುಟುಂಬ ಶೈಲಿ. ಅಂದರೆ ಕುಟುಂಬಗಳಿಗೆ ಹಿರಿಯ ತಾಯಾನೆಯೇ ಮತ್ತು ಅವುಗಳ ಕುಟುಂಬದ ದೈನಂದಿನ ಚಲನ ವಲನಗಳನ್ನು ನಿರ‍್ದರಿಸುತ್ತದೆ. ಇನ್ನ ಎಲ್ಲಾ ಆನೆಗಳನ್ನು ತುಂಬಾ ಜೋಪಾನವಾಗಿ ಕಾಪಾಡುವ ಹೊಣೆ ಅವಳದೇ. ಅರಣ್ಯಗಳಲ್ಲಿ ಆನೆಗಳ ಕುಟುಂಬಗಳನ್ನು ತಾಯಾನೆಯು ಅತ್ಯಂತ ಜಾಣ್ಮೆಯಿಂದ ರಕ್ಶಿಸುತ್ತ, ಪೋಶಿಸುತ್ತ ತಮ್ಮ ಸಂತತಿಯನ್ನು ಉಳಿಸಿಕೊಂಡು ಬಂದಿವೆ. ನಾವು ಗಾಂಬೀರ‍್ಯಕ್ಕೆ ಅತ್ಯಂತ ಹೆಸರುವಾಸಿ. ಕುಟುಂಬವನ್ನು ಮುನ್ನಡೆಸುವ ನಮ್ಮ ತಾಯಾನೆಗೆ ದಿನನಿತ್ಯ ಸಾಗಬೇಕಾದ ಹಾದಿ ತಿಳಿದಿರುತ್ತದೆ ಮತ್ತು ಆ ಹಾದಿಯಲ್ಲಿ ಎಲ್ಲೆಲ್ಲಿ ನೀರಿನ ಸೌಕರ‍್ಯವಿದೆ ಮತ್ತು ಯಾವ ಯಾವ ರುತುಗಳಲ್ಲಿ ಆಹಾರ ಯಾವ ಜಾಗದಲ್ಲಿ ಸಿಗುತ್ತದೆ ಎನ್ನುವ ಸಂಪೂರ‍್ಣ ಅರಿವು ತಾಯಿಗೆ ಇರುತ್ತದೆ. ದಿನಕ್ಕೆ 5 ರಿಂದ 10 ಕಿ.ಮೀ ದೂರ ಸಾಗುತ್ತವೆ.
ಮರಿಯಾನೆಗಳನ್ನು ಕಂಡರೆ ಅತ್ಯಂತ ಅಚ್ಚುಮೆಚ್ಚು. ಆದ್ದರಿಂದಲೇ ನಾವು ಅವುಗಳನ್ನು ಯಾವಾಗಲೂ ಅತ್ಯಂತ ಜೋಪಾನವಾಗಿ ನಮ್ಮ ಗುಂಪಿನ ಮದ್ಯದಲ್ಲಿಯೆ ಕರೆದುಕೊಂಡು ಹೋಗುತ್ತೆವೆ. ಮತ್ತು ನಮ್ಮ ಕುಟುಂಬವನ್ನು ಉತ್ತಮವಾಗಿ ಸಲಹುತ್ತ ನಮ್ಮ ಸಂತತಿಯನ್ನು ಮುಂದಿನ ದಿನಗಳಿಗೆ ಉಳಿಸಲು ಬಳಸುತ್ತೆವೆ.
ಇನ್ನೊಬ್ಬರಿಗೆ ಅಪಾಯವನ್ನು ತಂದೊಡ್ಡಿ ಬದುಕಬೇಕೆಂಬ ಹಂಬಲ ನಮಗೆ ಇಲ್ಲ. ತಮ್ಮ ಹಾದಿಯಲ್ಲಿಯೇ ನೀರು ಮತ್ತು ಆಹಾರ ಹುಡುಕಿಕೊಂಡು ಸಾಗಿ ಬರುತ್ತೆವೆ. ನಮ್ಮ ಕುಟುಂಬದ ಗರ್ಭ ಧರಿಸಿದ ತಾಯಾನೆ ಉದಯವಾರದಲ್ಲಿ ಮರಣ ಹೊಂದಿದೆ. ನಾವು ಕಾಡಾನೆಗಳು ಊರಿಗೆ ಬಂದಿವೆಯೆಂದು ಹೆದರಿಸುತ್ತಿದ್ದಾರೆ. ಗದರಿ ನಮ್ಮ ಕುಟುಂಬವನ್ನು ಚದುರಿಸಿ ಎಲ್ಲೆಲ್ಲೊ ಕರೆದುಕೊಂಡು ಹೋಗಿ ಬಿಡುತ್ತಿದ್ದಾರೆ. ನೀವೇ ಹೇಳಿ, ನಿಮ್ಮ ಚಿಕ್ಕ ಮಕ್ಕಳನ್ನು ನಿಮ್ಮಿಂದ ದೂರ ಮಾಡಿ ಒಂದು ಕಡೆ ಕೂಡಿಹಾಕಿ ಊಟ ನೀಡುತ್ತೇವೆ ಎಂದರೆ ನಿಮ್ಮ ಮಕ್ಕಳು ಚೆನ್ನಾಗಿರುತ್ತಾರೆಯೆ? ನಮಗೂ ಹಾಗೆ ನಮ್ಮ ಕುಟುಂಬವನ್ನು ಅಗಲಿದ ಮೇಲೆ ಹೊಸ ಮಾರ‍್ಗವನ್ನು ಅರಿಯಲಾಗದೆ ತುಂಬಾ ಕಂಗಾಲಾಗುತ್ತೇವೆ. ಅದೇ ಚಿಂತೆಯಲ್ಲಿ ಪ್ರಾಣ ಬಿಡುತ್ತೇವೆ. ನಮಗೆ ನಿಮ್ಮ ಹೊಸ ಪ್ರಪಂಚದಲ್ಲಿ ಏನಾಗುತ್ತಿದೆ ಎನ್ನುವ ಅರಿವು ಸ್ವಲ್ಪವೂ ಇಲ್ಲ. ಅದರ ಚಿಂತೆಯೂ ನಮಗೆ ಬೇಡ. ನೀವು ತುಂಬಾ ಬುದ್ದಿವಂತರು, ನಮ್ಮನ್ನು ನೀವೇ ರಕ್ಶಿಸುತ್ತೀರಿ ಎನ್ನುವ ಬಲವಾದ ನಂಬಿಕೆ ನಮಗಿದೆ.
ಈಗಾಗಲೇ ಆನೆಗಳ ಹಾದಿಗಳೆಲ್ಲ ಹೊಸ ನಾಡಾಗಿವೆ, ರಸ್ತೆಗಳಾಗಿವೆ. ಕಾಡು ಕಿರಿದಾಗಿದೆ, ನೀರು ಮತ್ತು ಆಹಾರಕ್ಕೆ ತುಂಬ ತೊಂದರೆಯಾಗುತ್ತಿದೆ. ದಯಮಾಡಿ ತಾವುಗಳು ನಮ್ಮ ರಕ್ಶಣೆಗೆ ಬನ್ನಿ. ನಮಗೆಂದು ಇರುವ ಕಾಡುಗಳನ್ನು ಉಳಿಸಿದರೆ, ತಾವುಗಳು ಸರ್ಕಾರದ ಗಮನಕ್ಕೆ ಪ್ರಬಲವಾಗಿ ತಂದು ಹಾನಿಕಾರದ ನಿರ್ಮಿಸಿ ನಮ್ಮದು ಅಂತ ಮಾಡಿಕೊಡಿ ನಾವು ಕೂಡ ಸೌಹಾರ‍್ದಯುತವಾಗಿ ನಿಮ್ಮ ಕರುಣೆಯ ನೆರಳಲ್ಲಿ ಬದುಕು ಕಟ್ಟಿಕೊಳ್ಳುತ್ತೇವೆ.
ಕಾಡಾನೆ ಸಂತ್ರಸ್ತರು ಹೋರಾಟ ಸಮಿತಿ ಸದಸ್ಯರಾದ ಯಡೇಹಳ್ಳಿ ಆರ್ ಮಂಜುನಾಥ್ ರವರೆ….ಹುಟ್ಟು ಉಚಿತ ಸಾವು ಖಚಿತ ಈ ಹೆಣ್ಣು ಕಾಡಾನೆ ಸಾವು ವಿಧಿ ಬರಹವಾದರು, ಗರ್ಭದಲ್ಲಿರುವಾಗಲೇ ಮೃತ ಪಟ್ಟ ಗಂಡು ಕಾಡಾನೆ ಮರಿ ಸತ್ತಿದೆ. ಸಂವಿಧಾನದ ಪ್ರಸ್ತಾವನೆಯಂತೆ ವನ್ಯ ಪ್ರಾಣಿ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಉಲ್ಲೇಖವಿದೆ . ಆದರೆ ಇದರ ಸಾವಿನ ಹೊಣೆ ಯಾರ ಹೆಗಲಿಗೆ ?
ಇಂತಿ,
ಆನೆಗಳು ಸಕಲೇಶಪುರ ಆಲೂರು.ಕಾಡಾನೆಗಳು ಬದುಕಲಿ ಬಾಳಲಿ ಕಾಡಿನಲ್ಲಿ… ಮನುಷ್ಯರು ಬದುಕಲಿ ಬಾಳಲಿ ನಾಡಿನಲ್ಲಿ.ಯಡೇಹಳ್ಳಿ ಆರ್ ಮಂಜುನಾಥ್.