ಲಾರಿ ಡಿಕ್ಕಿ :ವ್ಯಕ್ತಿಗೆ ಗಂಭೀರ ಗಾಯ
ಗಾಯಗೊಂಡ ವ್ಯಕ್ತಿ ಪತ್ತೆಗೆ ಮನವಿ
ಸಕಲೇಶಪುರ : ಪಟ್ಟಣದ ಹೊಸ ಬಸ್ ನಿಲ್ದಾಣ ಸಮೀಪ ಲಾರಿ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಅಪಘಾತಕ್ಕೆ ಒಳಗಾದ ವ್ಯಕ್ತಿಯ ತಲೆ ಭಾಗಕ್ಕೆ ಗಂಭೀರ ಸ್ವರೂಪದ ಗಾಯವಾಗಿದ್ದು ಗಾಯಗೊಂಡಿರುವ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ ಹಾಗಾಗಿ ಚಿತ್ರದಲ್ಲಿರುವ ವ್ಯಕ್ತಿ ಯಾರಿಗಾದರೂ ಪರಿಚಯ ಇದ್ದರೆ ಕಾಫರ್ಡ್ ಆಸ್ಪತ್ರೆ ವೈದ್ಯರನ್ನು ಸಂಪರ್ಕಿಸುವಂತೆ ಆಂಬುಲೆನ್ಸ್ ಚಾಲಕ ಸದಾನಂದ ಮನವಿ ಮಾಡಿದ್ದಾರೆ.