Saturday, November 23, 2024
Homeಸುದ್ದಿಗಳುಸಕಲೇಶಪುರಶಾಂತ ಮೂರ್ತಿ, ಮಾನವೀಯ ಮೌಲ್ಯಗಳ ಪತ್ರಕರ್ತ ಎಸ್. ಎಲ್. ಸುದೀರ್.

ಶಾಂತ ಮೂರ್ತಿ, ಮಾನವೀಯ ಮೌಲ್ಯಗಳ ಪತ್ರಕರ್ತ ಎಸ್. ಎಲ್. ಸುದೀರ್.

ಶಾಂತ ಮೂರ್ತಿ, ಮಾನವೀಯ ಮೌಲ್ಯಗಳ ಪತ್ರಕರ್ತ ಎಸ್. ಎಲ್. ಸುದೀರ್.

ಪತ್ರಿಕಾವೃತ್ತಿ ಎಂಬುದು ಸಮಾಜ ಬಹಳಷ್ಟು ನಿರೀಕ್ಷೆ ಮಾಡುವ ಒಂದು ಉದ್ಯೋಗ. ಪತ್ರಕರ್ತನಾದವರಿಗೆ ಬಹಳಷ್ಟು ಸಂಗತಿಗಳ ಬಗ್ಗೆ ಆಳ ಅರಿವು ಬೇಕಾಗುತ್ತದೆ. ಅತಿ ಮಹತ್ವದ ವಿಷಯಗಳ ಬಗ್ಗೆ ತ್ವರಿತ ತೀರ್ಮಾನ ಕೈಗೊಳ್ಳುವ ಶಕ್ತಿ ಇರಬೇಕಾಗುತ್ತದೆ. ಸಮಾಜದ ಪ್ರಭಾವಿಗಳ ಆಕ್ರೋಶ ಮತ್ತು ದಬ್ಬಾಳಿಕೆಗೂ ಬಲಿಯಾಗಬೇಕಾಗುವುದರಿಂದ ಪತ್ರಕರ್ತರು, ತಮ್ಮ ವರದಿಗಳ ವಿಷಯದಲ್ಲಿ ಪ್ರಕಟಣಾಪೂರ್ವದಲ್ಲಿ ಮತ್ತು ಪ್ರಕಟಣೆಯ ಬಳಿಕ ಪತ್ರಕರ್ತರು ಬಹಳಷ್ಟು ಜಾಣ್ಮೆ ಮತ್ತು ತಂತ್ರಗಾರಿಕೆಯನ್ನೂ ಹೊಂದಿರಬೇಕಾಗುತ್ತದೆ. ಇಂತಹ ಸವಾಲಿನ ವೃತ್ತಿಯಲ್ಲಿ ಮೇಲೆ ಬರಬೇಕೆಂದರೆ ಪತ್ರಕರ್ತರಾದವರು ಸಾಕಷ್ಟು ತಯಾರಿ ನಡೆಸಬೇಕಾಗುತ್ತದೆ, ತಮ್ಮದೇ ಆದ ರಕ್ಷಣಾತ್ಮಕ ತಂತ್ರಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಅಂತಹ ಅಸ್ತ್ರಗಳು ಸದಾ ಹರಿತವಾಗಿರುವಂತೆ ನೋಡಿಕೊಳ್ಳತ್ತಾ ಜಾಗೃತ ಮನಸ್ಥಿತಿಯಿಂದ ಕೆಲಸ ನಿರ್ವಹಿಸುತ್ತಿರುವ ನಮ್ಮೆಲ್ಲರ ನೆಚ್ಚಿನ ಸಕಲೇಶಪುರದ ಉದಯವಾಣಿ ವರದಿಗಾರ ಸುಧೀರ್ .ಎಸ್.ಎಲ್ .

  ಸುಧೀರ್ ಎಸ್.ಎಲ್ ರವರು ದಿನಾಂಕ 16-03-1980 ರಂದು ದಿವಂಗತ ಶ್ರೀ ಲಕ್ಷ್ಮೀನಾರಾಯಣ,(ಮಾಜಿ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರು), ಶ್ರೀಮತಿ ಶಕುಂತಲಾ ದಂಪತಿಗಳ ಪುತ್ರರಾಗಿ ಜನನ.ವಾಸವಿ ವಿದ್ಯಾ ವಿಹಾರ ಪ್ರಾಥಮಿಕ ಸಕಲೇಶಪುರದಲ್ಲಿ ಪ್ರಾಥಮಿಕ ಶಾಲೆ ಮುಗಿಯಿಸಿ, ನಂತರ ಸಕಲೇಶಪುರದ ಪ್ರತಿಷ್ಠಿತ ರೋಟರಿ ಆಂಗ್ಲ ಮಾಧ್ಯಮ ಶಾಲೆ ಪ್ರೌಢಶಾಲೆ ಶಿಕ್ಷಣ ಪೂರ್ಣಗೊಳಿಸಿದರು,ಪಿಯು ಎಂ.ಕೃಷ್ಣ ಕಾಲೇಜ್, ಪದವಿ ಬಿ.ಬಿ.ಎಂ, ಎನ್.ಡಿ.ಆರ್.ಕೆ ಕಾಲೇಜ್ ಹಾಸನ, ಎ.ಎಮ್.ಸಿ ಕಾಲೇಜು ಬೆಂಗಳೂರು ಪೂರ್ಣಗೊಳಿಸಿ ದರು.

  2004 ರಲ್ಲಿ ಸ್ನಾತಕೋತ್ತರ ಪದವಿ‌ ಮುಗಿದ ನಂತರ ಸುಮಾರು 6 ವರ್ಷ ಬೆಂಗಳೂರಿನ‌ ವಿವಿಧ ಖಾಸಗಿ‌ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಣೆ, 2008 ರಲ್ಲಿ ತಂದೆ ತಾಯಿ ಒಬ್ಬನೇ ಮಗನಾಗಿ ಊರಿಗೆ ಹಿಂದಿರುಗುವಾಗ ತಂದೆಗೆ ನೆರವಾಗಲು ವರದಿಗಾರನಾಗಿ ಕಾರ್ಯ ಆರಂಭ ಹೊಸದಿಗಂತದಲ್ಲಿ ಕಾರ್ಯ ಆರಂಭ ನಂತರ ಜ್ಞಾನದೀಪ, ಎಚ್.ಸಿ.ಎನ್ ವಾಹಿನಿಯಲ್ಲಿ ಸಹ ಸೇವೆ ಸಲ್ಲಿಕೆ‌‌‌.. ಉದಯವಾಣಿ ಪತ್ರಿಕೆಯಲ್ಲಿ ಸತತ ,10 ವರ್ಷ ತಾಲೂಕು ವರದಿಗಾನಾಗಿ ಸೇವೆ ಮಂದುವರರೆಕೆ,ಸಕಲೇಶಪುರ ತಾಲ್ಲೂಕು ವರದಿಗಾರ ಜೊತೆಯಲ್ಲಿ‌ ವಾಸ್ತವ ಆನ್ ಲೈನ್ ನ್ಯೂಸ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

  24-02-2010 ರಂದು ಮೇಘ ಜಿ.ಎನ್, ರವರೊಂದಿಗೆ ವಿವಾಹವಾಗಿ, ನವಮಿ ಎಂಬ ಮಗಳು,ನವನೀತ್ ಎಂಬ ಮಗಳನ್ನು ಪಡೆದು ಸುಂದರ ಕೌಟುಂಬಿಕ ಜೀವನ ನಡೆಸುತ್ತಿದ್ದಾರೆ. ಅತ್ಯುತ್ತಮ ಕ್ರೀಡಾಪಟುವಾಗಿರುವ ಸುಧೀರ್ ಅವರು ಕ್ರಿಕೆಟ್ ಹಾಗೂ ಬ್ಯಾಡ್ಮಿಂಟನ್ ಅಂದರೆ ಪಂಚಪ್ರಾಣ.

  ನೆರೆ ಬಂದ ಸಂದರ್ಭದಲ್ಲಿ ಹಾಗು ಕರೋನ ಅಟ್ಟಹಾಸದ ದಿನಗಳಲ್ಲಿ ಜೀವದ ಹಂಗನ್ನು ತೊರೆದು ಜನರ ಸಂಕಷ್ಟಗಳನ್ನು ಅಧಿಕಾರಿಗಳಿಗೆ ಸರ್ಕಾರಕ್ಕೆ ಮುಟ್ಟಿಸುವಲ್ಲಿ ಅವಿರತ ಶ್ರಮಿಸಿದ್ದಾರೆ. ಕಾಡಾನೆ ಮಾನವ ಸಂಘರ್ಷ, ಪ್ರವಾಸೋದ್ಯಮದ ನಿರ್ಲಕ್ಷ, ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ, ಕ್ರೀಡಾಂಗಣದ ಅಭಿವೃದ್ಧಿಯಲ್ಲಿ ತಾರತಮ್ಯ, ಸಕಲೇಶಪುರ ಪಟ್ಟಣ ರಸ್ತೆಯ ಅಗಲೀಕರಣ ವಿಚಾರ, ರಾಷ್ಟ್ರೀಯ ಹೆದ್ದಾರಿ 75 ರ ಕರ್ಮಕಾಂಡ ಇನ್ನು ಹಲವಾರು ವಿಚಾರವಾಗಿ ಅಂಕಿ ಅಂಶಗಳ ಸಮೇತ ವರದಿ ಪ್ರಕಟಿಸಿ ಗಮನ ಸೆಳೆದಿದ್ದಾರೆ.

 ಸಕಲೇಶಪುರ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿ ಶಿಸ್ತು ಸಂಯಮ ಸಮಯ ಪಾಲನೆನಿಂದ ಕೆಲಸ ನಿರ್ವಹಿಸಿದ್ದಾರೆ.ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಹಾಲಿ‌ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

  ಕಳೆದ 10 ವರ್ಷಗಳಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸುವುದರ ಜೊತೆಗೆ ವಿವಿಧ ಸಂಘ-ಸಂಸ್ಥೆ ಜೊತೆ ಕೈಜೋಡಿಸಿ ಕೆಲಸ ನಿರ್ವಹಿಸುತ್ತಾ ಮತ್ತು ಮಾನವೀಯ ಮೌಲ್ಯಗಳನ್ನು ಹೊಂದಿರುವ ಇವರಿಗೆ 2022 23ನೇ ಸಾಲಿನ ಹಾಸನ ಜಿಲ್ಲೆ ಕಾರ್ಯನಿರ್ತಕ್ಕಂತಹ ಸಂಘದ ವಾರ್ಷಿಕ ಸನ್ಮಾನಕ್ಕೆ ಆಯ್ಕೆಯಾಗಿದ್ದಾರೆ. ಈ ಶುಭ ಸಂದರ್ಭದಲ್ಲಿ ಶುಭಾಶಯಗಳು ಹೇಳುತ್ತಾ ಇನ್ನಷ್ಟು ಪ್ರಶಸ್ತಿಗಳು ದೊರೆಯುವಂತಾಗಲಿ. ಕೌಟುಂಬಿಕ ಜೀವನ ವೃತ್ತಿ ಜೀವನದಲ್ಲಿ ಭಗವಂತ ಆರೋಗ್ಯ ಶಾಂತಿ ಪ್ರೀತಿ ಮಮತೆ ಸೌಹಾರ್ದತೆಯನ್ನು ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸೋಣ.

ಯಡೇಹಳ್ಳಿ”ಆರ್”ಮಂಜುನಾಥ್

RELATED ARTICLES
- Advertisment -spot_img

Most Popular