Sunday, April 20, 2025
Homeಸುದ್ದಿಗಳುಸಕಲೇಶಪುರಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಸುರೇಶ್ ವರ್ಗಾವಣೆ.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಸುರೇಶ್ ವರ್ಗಾವಣೆ.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್ ವರ್ಗಾವಣೆ.

 ನೂತನ ಎಸಿಎಫ್ ಆಗಿ ಮಹದೇವ್ ನೇಮಕ.

ಸಕಲೇಶಪುರ : ತಾಲೂಕು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಸಿ. ಎನ್ ಸುರೇಶ್ ಅವರನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶಿಸಿದೆ.

ವರ್ಗಾವಣೆಗೊಂಡಿರುವ ಸುರೇಶ್ ಅವರ ಜಾಗಕ್ಕೆ ಕರಾವಳಿ ನಿಯಂತ್ರಣ ವಲಯದ ಎಸಿಎಫ್ ಆಗಿದ್ದ ಎಸ್. ಪಿ ಮಹದೇವ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

 ಸುರೇಶ್ ಅವರು ಸಕಲೇಶಪುರದ ಸಹಾಯಕ ಸಂರಕ್ಷಣಾಧಿಕಾರಿಯಾಗಿ ಸುಮಾರು ಎರಡು ವರ್ಷಗಳವರೆಗೂ ಕರ್ತವ್ಯ ನಿರ್ವಹಿಸಿದ್ದು ಇವರ ಅವಧಿಯಲ್ಲಿ ಕಾಡಾನೆ ಹಾವಳಿ, ಅಕ್ರಮ ಅರಣ್ಯ ಭೂಮಿ ಒತ್ತುವರಿ ಸೇರಿದಂತೆ ಇಲಾಖೆಯ ಹಲವಾರು ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಸದ್ಯ ಸುರೇಶ್ ಅವರನ್ನು ಚಿಕ್ಕಮಗಳೂರು ಅರಣ್ಯ ಸಂಚಾರಿ ದಳದ ಎಸಿಎಫ್ ಆಗಿ ವರ್ಗಾವಣೆ ಮಾಡಲಾಗಿದೆ.

 ಸಕಲೇಶಪುರಕ್ಕೆ ವರ್ಗಾವಣೆ ಗೊಂಡಿರುವ ಮಹದೇವ್ ರವರು ಈ ಹಿಂದೆ ಸಕಲೇಶಪುರ ವಲಯ ವ್ಯಾಪ್ತಿಯಲ್ಲಿ ವಲಯ ಅರಣ್ಯ ಅಧಿಕಾರಿ ಆಗಿ ಕರ್ತವ್ಯ ನಿರ್ವಹಿಸಿದ್ದರು. ಇದೀಗ ಸಕಲೇಶಪುರ ವಿಭಾಗಕ್ಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ..

RELATED ARTICLES
- Advertisment -spot_img

Most Popular