ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ಕುರಿತು ಕರ್ನಾಟಕ ರಕ್ಷಣಾ ವೇದಿಕೆಯಿಂದ ಶಾಸಕರಿಗೆ ಮನವಿ.
NHAI ಹಾಗೂ ಗುತ್ತಿಗೆದಾರರಿಗೆ ಸೂಕ್ತ ನಿರ್ದೇಶನ ನೀಡುವಂತೆ ಶಾಸಕರಿಗೆ ಕರವೇಯಿಂದ ಅಗ್ರಹ.
ಸಕಲೇಶಪುರ :ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದು ಹಾಗೂ ಕಾಮಗಾರಿ ನಡೆಯುತ್ತಿರುವ ಯಾವುದೇ ಯಾವುದೇ ಸೂಚನ ಫಲಕಗಳಿಲ್ಲದೆ ಇರುವುದರಿಂದ ದಿನ ನಿತ್ಯ ಹತ್ತಾರು ಅಪಘಾತಗಳು , ಸಾವು ನೋವು ಸಂಭವಿಸುತ್ತಿವೆ ಈ ಕುರಿತಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಗುತ್ತಿಗೆದಾರರಿಗೆ ಸೂಕ್ತ ನಿರ್ದೇಶನ ಹಿಡಿಯುವಂತೆ ಕರ್ನಾಟಕ ರಕ್ಷಣಾ ವೇದಿಕೆ ಆಲೂರು ತಾಲೂಕು ಘಟಕದಿಂದ ಶಾಸಕ ಸಿಮೆಂಟ್ ಮಂಜು ಅವರಿಗೆ ಇಂದು ಮನವಿ ಪತ್ರ ಸಲ್ಲಿಸಿದರು.
ಶಾಸಕರ ಗೃಹ ಕಚೇರಿಗೆ ಭೇಟಿ ನೀಡಿದ ಕರವೇ ಕಾರ್ಯಕರ್ತರು ಮನವಿ ನೀಡಿದ ನಂತರ ಮಾತನಾಡಿ,
ಹಳ್ಳಿ ರಸ್ತೆಗಳಿಂದ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ರಸ್ತೆ ಕಾಮಗಾರಿ ಕೂಡ ವ್ಯವಸ್ಥಿತವಾಗಿ ಮಾಡದೆ ಅವೈಜ್ಞಾನಿಕತೆಯಿಂದ ಕೂಡಿದೆ.ಹಾಗಾಗಿ ನೀವು ಅಧಿಕಾರಿಗಳಿಗೆ ಹಾಗೂ ಕಾಮಗಾರಿ ನಡೆಯುತ್ತಿರುವ ಗುತ್ತಿಗೆದಾರರಿಗೆ ಸೂಕ್ತ ನಿರ್ದೇಶನ ನೀಡುವಂತೆ ಅಗ್ರಹಿಸಿದರು.
ಕಾಡಾನೆ ಮಾನವ ಸಂಘರ್ಷದ ಬಗ್ಗೆ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ತಾಲೂಕಿನ ಜನರ ನೆಮ್ಮದಿಯನ್ನು ಕಾಪಾಡಲು ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಆಲೂರು, ಸಕಲೇಶಪುರ ತಾಲ್ಲೂಕಿನ ರೈತರ ಪರವಾಗಿ ಗಟ್ಟಿ ಧ್ವನಿಯಾಗಿ ನಿಲ್ಲುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಕಾರ್ಯದರ್ಶಿ ಹಾಗೂ ಆಲೂರು ಸಕಲೇಶಪುರ ತಾಲ್ಲೂಕಿನ ಕರವೇ ಉಸ್ತುವಾರಿ ರಘು ಪಾಳ್ಯ, ಲೋಕೇಶ್ ತಾಲ್ಲೂಕು ಸಂಚಾಲಕರ ಸೇರಿ ಮನವಿ ಮಾಡಲಾಯಿತು