Sunday, November 24, 2024
Homeಸುದ್ದಿಗಳುಸಕಲೇಶಪುರಆರೋಗ್ಯ ಪೂರ್ಣವಾದ ಸಮಾಜ ನಿರ್ಮಾಣಕ್ಕೆ ಯೋಗ ಅಭ್ಯಾಸ ಸಹಕಾರಿ - ಚನ್ನ ಸಿದ್ದೇಶ್ವರ ಶ್ರೀಗಳ ಅಭಿಮತ.

ಆರೋಗ್ಯ ಪೂರ್ಣವಾದ ಸಮಾಜ ನಿರ್ಮಾಣಕ್ಕೆ ಯೋಗ ಅಭ್ಯಾಸ ಸಹಕಾರಿ – ಚನ್ನ ಸಿದ್ದೇಶ್ವರ ಶ್ರೀಗಳ ಅಭಿಮತ.

ಆರೋಗ್ಯ ಪೂರ್ಣವಾದ ಸಮಾಜ ನಿರ್ಮಾಣಕ್ಕೆ ಯೋಗ ಅಭ್ಯಾಸ ಸಹಕಾರಿ – ಚನ್ನ ಸಿದ್ದೇಶ್ವರ ಶ್ರೀಗಳ ಅಭಿಮತ.

ಯೋಗ ದಿನಾಚರಣೆಯ ಶುಭಾಶಯ ತಿಳಿಸಿದ ತೆಂಕಲಗೂಡು ಶ್ರೀಗಳು.

ಸನಾತನ ಪದ್ಧತಿಗಳಲ್ಲಿ ಯೋಗ ಅಭ್ಯಾಸವು ಒಂದಾಗಿದೆ.

ಸಕಲೇಶಪುರ : ಜೂನ್ 21 ರಂದು ವಿಶ್ವದಲ್ಲೆಡೆ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸುತ್ತಿದ್ದು ಈ ಕುರಿತಾಗಿ ಸಕಲೇಶಪುರ ತಾಲೂಕಿನ ಯಸಳೂರು ಹೋಬಳಿಯ ತೆಂಕಲಗೂಡು ಮಠದ ಶ್ರೀ ಚನ್ನ ಸಿದ್ದೇಶ್ವರ ಶಿವಾಚಾರ್ಯ ಶ್ರೀಗಳ ತಮ್ಮ ಶುಭನುಡಿಗಳು

⬇️⬇️⬇️

…ಒಂದಿಷ್ಟು ವರ್ಷಗಳ ಕೆಳಗಡೆ ಜೂನ್ 21 ಎಂದರೆ ಅಂತಹ ವಿಶೇಷವಾದ ದಿನವೇನು ಅಲ್ಲ ಎನ್ನುವ ನಿಟ್ಟಿನಲ್ಲಿ ಎಲ್ಲರೂ ಇರುತ್ತಿದ್ದವು. ಆದರೆ ಸನ್ಮಾನ್ಯ ಪ್ರಧಾನ ಮಂತ್ರಿಗಳವರ ಇಚ್ಛೆಯಂತೆ ನಮ್ಮ ಭವ್ಯ ಭಾರತ ದೇಶದ ಸನಾತನ ಪದ್ಧತಿಗಳಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಅತ್ಯುನ್ನತ ಪಾತ್ರವನ್ನು ನಿರ್ವಹಿಸಿದಂತಹ ಪತಂಜಲಿ ಮಹರ್ಷಿಗಳ ಯೋಗ ವನ್ನು ಇಡೀ ಜಗತ್ತಿಗೆ ಸಾರುವ ನಿಟ್ಟಿನಲ್ಲಿ ಇಡೀ ವಿಶ್ವದ್ಯಂತ ಈ ದಿನವನ್ನು ವಿಶ್ವ ಯೋಗ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ ಈ ಒಂದು ದಿನ ಪ್ರತಿಯೊಬ್ಬರೂ ಕೂಡ ಹೆಮ್ಮೆಪಡುವಂತಹ ದಿವಸವಾಗಿದೆ ಎಂದರೆ ತಪ್ಪಾಗಲಾರದು ಈ ಶುಭದಿನದಂದು ಇಡೀ ವಿಶ್ವದಾದ್ಯಂತ ಯೋಗದ ಒಂದು ಅಂಗವಾದಂತ ಆಸನಗಳನ್ನು ಮಾಡುವುದರ ಮೂಲಕ ಆರೋಗ್ಯದ ಜಾಗೃತಿಯನ್ನು ಮೂಡಿಸುವಲ್ಲಿ ಮಹತ್ತರ ಪಾತ್ರವನ್ನು ಇಡೀ ಜಗತ್ತಿಗೆ ಭಾರತ ದೇಶ ತಿಳಿಸಿ ಕೊಡುತ್ತಿದೆ ಎನ್ನುವಂಥದ್ದು ಅತ್ಯಂತ ಹೆಮ್ಮೆ ಪಡುವಂತಹ ವಿಚಾರವಾಗಿದೆ ವಿಶ್ವಸಂಸ್ಥೆಯು ಈ ದಿನವನ್ನು ಅಂಗೀಕರಿಸಿ ವಿಶ್ವದಲ್ಲೇ ಆಚರಿಸಲು ಅನುಮೋದನೆಯನ್ನು ನೀಡಿರುವುದು ಎಲ್ಲರಿಗೂ ಸಂತಸದ ವಿಷಯವೇ ಸರಿ ಆದರೆ ಈ ಯೋಗದ ಆಚರಣೆಗಳನ್ನು ಕೇವಲ ಒಂದು ದಿನಕ್ಕೆ ಸೀಮಿತ ಮಾಡಿಕೊಳ್ಳಬಾರದು ಎನ್ನುವಂಥದ್ದು ನಾವು ಅರ್ಥ ಮಾಡಿಕೊಳ್ಳಬೇಕು. ಈ ಆರೋಗ್ಯ ಪೂರ್ಣವಾದಂತಹ ಯೋಗವನ್ನ ಮಾಡುವುದರಿಂದ ಮನಸ್ಸು ಮತ್ತು ದೇಹ ಎರಡು ಕೂಡ ಉಲ್ಲಾಸಭರಿತವಾಗಿ ಇರುತ್ತವೆ ಹಾಗೂ ನಾವು ಅತಿ ಹೆಚ್ಚು ದಿವಸ ಬದುಕುವುದನ್ನ ಇದು ನಿರ್ಧರಿಸುತ್ತದೆ ಹಾಗಾಗಿ ಇಂತಹ ಉತ್ತಮ ಆಚರಣೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಆರೋಗ್ಯ ಪೂರ್ಣವಾದ ಸಮಾಜವನ್ನು ನಾವು ನಿರ್ಮಾಣ ಮಾಡುವ ಮಹತ್ತರ ಪಾತ್ರವನ್ನು ನಿರ್ವಹಿಸುತ್ತೇವೆ. ಹಾಗಾಗಿ ಎಲ್ಲರೂ ಕೂಡ ಈ ಒಂದು ಶುಭದಿನದಂದು ಯೋಗವನ್ನು ಮಾಡುವ ಸಂಕಲ್ಪವನ್ನ ಮಾಡೋಣ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ಪ್ರತಿನಿತ್ಯದ ನಮ್ಮ ದಿನಚರಿಯಲ್ಲಿ ಇದು ಕೂಡ ಒಂದು ಭಾಗವಾಗಿ ನಮ್ಮ ಆರೋಗ್ಯವನ್ನು ಸುಧಾರಿಸುವ ಹಾಗಾಗಲಿ ಎನ್ನುವ ಆಶಯದೊಂದಿಗೆ ವಿಶ್ವ ಯೋಗ ದಿನಾಚರಣೆಯ ಶುಭಾಶಯಗಳು.

RELATED ARTICLES
- Advertisment -spot_img

Most Popular