Sunday, April 20, 2025
Homeಸುದ್ದಿಗಳುಸಕಲೇಶಪುರಲಯನ್ಸ್ ಸಂಸ್ಥೆ ವತಿಯಿಂದ ನವೀಕರಣಗೊಂಡ ಹಿಂದೂ ಮುಕ್ತಿಧಾಮ ಲೋಕಾರ್ಪಣೆ 

ಲಯನ್ಸ್ ಸಂಸ್ಥೆ ವತಿಯಿಂದ ನವೀಕರಣಗೊಂಡ ಹಿಂದೂ ಮುಕ್ತಿಧಾಮ ಲೋಕಾರ್ಪಣೆ 

ಲಯನ್ಸ್ ಸಂಸ್ಥೆ ವತಿಯಿಂದ ನವೀಕರಣಗೊಂಡ ಹಿಂದೂ ಮುಕ್ತಿಧಾಮ ಲೋಕಾರ್ಪಣೆ.

ಸಕಲೇಶಪುರ: ಲಯನ್ಸ್ ಜಿಲ್ಲೆ 317ಡಿ ವತಿಯಿಂದ ಸುಮಾರ 35 ಲಕ್ಷ ರೂಪಾಯಿ ವೆಚ್ಚದಲ್ಲಿ ಆಧುಕವಾಗಿ ನವೀಕರಿಸಿದ ಹಿಂದೂ ಮುಕ್ತಿಧಾಮ ವನ್ನು ಲೋಕಾರ್ಪಣೆ ಮಾಡಲಾಯಿತು.

     ಸಕಲೇಶಪುರ ತಾಲೂಕು ಕೇಂದ್ರದ ಹಿಂದೂ ಮುಕ್ತಿ ಧಾಮವನ್ನು ಆಧುನಿಕ ಮಾದರಿಯಲ್ಲಿ ಲಯನ್ಸ್ ಸಂಸ್ಥೆ ವತಿಯಿಂದ ಅಭಿವೃದ್ದಿ ಪಡಿಸಲಾಗಿದ್ದು, ಸುಸಜ್ಜಿತ ಮೂರು ಚಿತಾಗಾರ,ಶಿವ ಮತ್ತು ವಿಶ್ವಾಮಿತ್ರನ ಪ್ರತಿಮೆ ,ಸುಂದರ ಹೂತೋಟ ಸ್ವಚ್ಚ ಕುಡಿಯುವ ನೀರಿನ ವ್ಯವಸ್ಧೆ, ವಿಶ್ರಾಂತಿ ಕೊಠಡಿ ,ಅಡುಗೆ ಕೋಣೆ ನಿರ್ಮಾಣ ಮಾಡಲಾಗಿದ್ದು ಹಾಗೂ ಆವರಣದಲ್ಲಿ ಇಂಟರ್‌ಲಾಕ್ ಅಳವಡಿಸಲಾಗಿದ್ದು ಸುಮಾರು 35 ಲಕ್ಷ ರೂಗಳ ವೆಚ್ಚದ ಕಾಮಗಾರಿ ನಡೆಸಲಾಗಿದೆ. ಮಂಗಳೂರು ಗುರುಪುರ ಮಠದ ರಾಜಶೇಖರಾನಂದ ಸ್ವಾಮೀಜಿ ಮುಕ್ತಿಧಾಮವನ್ನು ಉದ್ಘಾಟಿಸಿ ಆರ್ಶೀವಚನ ನೀಡಿದರು, ಶಾಸಕ ಸಿಮೆಂಟ್ ಮಂಜು,ಲಯನ್ಸ್ ನಿಕಟಪೂರ್ವ ಜಿಲ್ಲಾ ರಾಜ್ಯಪಾಲ ವಸಂತಕುಮಾರ್ ಶೆಟ್ಟಿ , ಹಿಂದೂ ಮುಕ್ತಧಾಮ ಟ್ರಸ್ಟ್ ಅಧ್ಯಕ್ಷ ಜೈಮಾರುತಿ ದೇವರಾಜ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

RELATED ARTICLES
- Advertisment -spot_img

Most Popular