ಭಾರಿ ಗಾಳಿ ಮಳೆಗೆ ಕುಸಿದ ಮನೆಗಳು:ಅತಂತ್ರದಲ್ಲಿ ಕುಟುಂಬಗಳು…!
ಸ್ಥಳಕ್ಕೆ ಶಾಸಕ ಸಿಮೆಂಟ್ ಮಂಜು ಭೇಟಿ ಪರಿಶೀಲನೆ.
ಸಕಲೇಶಪುರ : ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ತಾಲೂಕಿನ ಕಸಬಾ ವ್ಯಾಪ್ತಿಯ ಮಳಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 5 ಮನೆಗಳು ಕುಸಿದಿರುವ ಘಟನೆ ನೆಡೆದಿದೆ.
ಗ್ರಾಮದ ಕಸ ವಿಲೇವಾರಿ ಘಟಕದ ಬಪರ್ ಜೋನ್ ವ್ಯಾಪ್ತಿಯಲ್ಲಿ 4 ಮನೆಗಳು ಹಾಗೂ ಸದರಿ ಗ್ರಾಮದಲ್ಲಿ ಒಂದು ಮನೆ ಕುಸಿದೆ.
ಮನೆ ಕುಸಿತದಿಂದ ಸಾಕಷ್ಟು ಹಾನಿಯಾಗಿದ್ದು ಮನೆಯ ವಸ್ತುಗಳು ಬಟ್ಟೆ ಪಾತ್ರೆ ಸೇರಿದಂತೆ ಮತ್ತಿತರ ವಸ್ತುಗಳು ಬಯಲಿನಲ್ಲಿ ಇಟ್ಟುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಸಿಮೆಂಟ್ ಮಂಜು ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದರು.ಗ್ರಾಮದ ಶಾಂತ ಬಿನ್ ಲೋಕೇಶ್,ದಿವ್ಯ ಬಿನ್ ಕಿಶೋರ್.ಶೋಭಾ ಬಿನ್ ಮಂಜು,ವನಜಾಕ್ಷಿ ಬಿನ್ ಶೇಖರ್,ಗೌರಮ್ಮ ಬಿನ್ ಪಾಪಣ್ಣ,ಚನ್ನಮ್ಮ ಬಿನ್ ಲಿಂಗಯ್ಯ ಎಂಬುವವರ ಮನೆಗಳು ಗಾಳಿ ಮಳೆಗೆ ಗೋಡೆಗಳು ಕುಸಿದು ಶೀಟ್ ಗಳು ಹಾರಿ ಹೋಗಿ ಸಂಪೂರ್ಣ ನಷ್ಟವಾಗಿದೆ. ತಕ್ಷಣವೇ ವಿ.ಎ ಮತ್ತು ಆರ್. ಐ ಗಳಿಗೆ ವರದಿ ನೀಡಿವಂತೆ ಸೂಚನೆ ನೀಡಿದ್ದೇನೆ. ಅಗತ್ಯವಿರುವ ಸೌಲಭ್ಯಗಳನ್ನು ಶೀಘ್ರವಾಗಿ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಂಗಸ್ವಾಮಿ, ಕಾರ್ಯದರ್ಶಿ ಲಿಂಗರಾಜು ಗ್ರಾಮ ಪಂಚಾಯತಿ ಸದಸ್ಯರಾದ ಶಿವಕುಮಾರ್, ಮಂಜುಳಾ ಸೇರಿದಂತೆ ಮುಂತಾದವರಿದ್ದರು.