ಜೂನ್ 2 ರಂದು ಬಾಳ್ಳುಪೇಟೆ ಅಂಬೇಡ್ಕರ್ ನಗರದ ಮಹಾಲಕ್ಷ್ಮಿ ಅಮ್ಮನವರ ಜಾತ್ರಾ ಮಹೋತ್ಸವ.
ಸಕಲೇಶಪುರ :ಶ್ರೀ ಮಹಾಲಕ್ಷ್ಮಿ ದೇವಿ ಸೇವಾ ಸಮಿತಿ (ರಿ) ಬಾಳುಪೇಟೆ ಅಂಬೇಡ್ಕರ್ ನಗರ ಇವರ ವತಿಯಿಂದ ಶ್ರೀ ಮಹಾಲಕ್ಷ್ಮಿ ಅಮ್ಮನವರ ಜಾತ್ರಾ ಮಹೋತ್ಸವ ಹಾಗೂ ಲೋಕ ಕಲ್ಯಾಣಕ್ಕಾಗಿ ದಿನಾಂಕ 2.6.2023ರ ಶುಕ್ರವಾರ ಬೆಳಗ್ಗೆ 9:30 ರಿಂದ ಶ್ರೀ ಮಹಾಲಕ್ಷ್ಮಿ ದೇವಾಲಯದಲ್ಲಿ ಗಣಪತಿ ಹೋಮ ಮಹಾಲಕ್ಷ್ಮಿ ಹೋಮ ಮತ್ತು ದೇವರಿಗೆ ಮಹಾಮಂಗಳಾರತಿ ಪ್ರಸಿದ್ಧ ವಿನಿಯೋಗವಿರುತ್ತದೆ.ಸಮಸ್ತ ನಾಗರಿಕ ಭಕ್ತಾದಿಗಳು ಲೋಕಕಲ್ಯಾಣರ್ಥ ನಡೆಯುವ ಪೂಜೆಯಲ್ಲಿ ಪಾಲ್ಗೊಂಡು ಶ್ರೀ ಮಹಾಲಕ್ಷ್ಮಿ ಅಮ್ಮನವರ ಕೃಪೆಗೆ ಪಾತ್ರರಾಗುವಂತೆ ಶ್ರೀ ಮಹಾಲಕ್ಷ್ಮಿ ಸೇವಾ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿ,ಖಜಾಂಚಿ ಹಾಗೂ ಆಡಳಿತ ಮಂಡಳಿಯವರು ತಿಳಿಸಿದ್ದಾರೆ ಎಂದು ಶ್ರೀ ಲಕ್ಷ್ಮಿ ದೇವಿ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ಆರ್ ಕುಮಾರಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.